ನವದೆಹಲಿ(ಆ.30): ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌, ಜನಪ್ರಿಯ ಸೂಪರ್‌ ಮಾರ್ಕೆಟ್‌ಗಳನ್ನು ಹೊಂದಿರುವ ಫä್ಯಚರ್‌ ಗ್ರೂಪ್‌ ಅನ್ನು 24,713 ಕೋಟಿ ರು.ಗಳಿಗೆ ಖರೀದಿಸಿದೆ.

ಕೊರೋನೊತ್ತರ ಭಾರತದಲ್ಲಿ ಅಂಬಾನಿ-ಅದಾನಿ ಏಕಸ್ವಾಮ್ಯ?

ಫ್ಯೂಚರ್‌ ಗ್ರೂಪ್‌ ಕಿಶೋರ್‌ ಬಿಯಾನಿ ಅವರ ಒಡೆತನದ ಸಂಸ್ಥೆಯಾಗಿದ್ದು, ಜನಪ್ರಿಯ ಸೂಪರ್‌ ಮಾರ್ಕೆಟ್‌ಗಳೆನಿಸಿದ ಬಿಗ್‌ ಬಜಾರ್‌, ಫುಡ್‌ ಬಜಾರ್‌, ಲೈಫ್‌ಸ್ಟೈಲ್‌ ಸ್ಟೋರ್‌ಗಳನ್ನು ಒಳಗೊಂಡಿದೆ. ಅಲ್ಲದೇ ಭಾರತದ ಚಿಲ್ಲರೆ ಮಾರಾಟ ಮತ್ತು ಫ್ಯಾಶನ್‌ ವಲಯದಲ್ಲಿ ಫä್ಯಚರ್‌ ಗ್ರೂಪ್‌ ತನ್ನದೇ ಆದ ಹೆಸರನ್ನು ಸಂಪಾದಿಸಿದೆ.

ಅಮೆಜಾನ್, ರಿಲಯನ್ಸ್‌ಗೆ ಟಾಟಾ ಸಡ್ಡು, ಬರುತ್ತಿದೆ 'ಸೂಪರ್ ಆ್ಯಪ್'!

ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆಯಾದ ರಿಲಯನ್ಸ್‌ ರೀಟೇಲ್‌ ವೆಂಚ​ರ್‍ಸ್ ಕಂಪನಿಯು ಫä್ಯಚರ್‌ ಗ್ರೂಪ್‌ ಸ್ವಾಧೀನಕ್ಕೆ ಒಪ್ಪಂದ ಮಾಡಿಕೊಂಡಿರುವುದನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಫä್ಯಚರ್‌ ಗ್ರೂಪ್‌ನ ಚಲ್ಲರೆ ಮತ್ತು ಸಗಟು ವ್ಯಾಪಾರ, ಸರಕು ಸಾಗಣೆ, ಗೋದಾಮುಗಳ ಮೇಲಿನ ಹಕ್ಕನ್ನು ರಿಲಯನ್ಸ್‌ ಪಡೆದುಕೊಂಡಿದೆ.