ಇಶಾ ಅಂಬಾನಿ ತಮ್ಮ ಅವಳಿ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯಲು ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾನ್ಯ ಉಡುಪಿನಲ್ಲಿ, ಮೇಕಪ್ ಇಲ್ಲದೆ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳು ಶಾಲೆಗೆ ದಾಖಲಾಗಿರುವ ವೆಸ್ಟ್‌ವಿಂಡ್ ಶಾಲೆಯ ವಾರ್ಷಿಕ ಶುಲ್ಕ 2.5 ರಿಂದ 4 ಲಕ್ಷ ರೂಪಾಯಿ. ಈ ಹಿಂದೆ ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಕರೆತಂದಿದ್ದಾಗಲೂ ಇಶಾ ವಿಡಿಯೋ ವೈರಲ್ ಆಗಿತ್ತು. ಕುಂಭಮೇಳಕ್ಕೆ ಭೇಟಿ ನೀಡಿದ್ದಾಗ ಟ್ರೋಲ್ ಆಗಿದ್ದರು.

ಇಶಾ ಅಂಬಾನಿ ಎಲ್ಲ ಅಮ್ಮಂದಿರಂತೆ ತಮ್ಮ ಮಕ್ಕಳನ್ನು ಸ್ಕೂಲ್ ನಿಂದ ಪಿಕ್ ಅಪ್ ಮಾಡಿದ್ದಾರೆ. ಮಕ್ಕಳು ಹೊರಗೆ ಬರೋದನ್ನು ಕಾಯ್ತಿದ್ದ ಇಶಾ ಅಂಬಾನಿ ವಿಡಿಯೋ ವೈರಲ್ ಆಗಿದೆ. ಶಾಲೆಯಿಂದ ಮಕ್ಕಳು ಹೊರಗೆ ಬರ್ತಿದ್ದಂತೆ ಅವರ ಕಣ್ಣಿಗೆ ಅಮ್ಮ ಬಿದ್ರೆ ಆ ಸಂತೋಷವೇ ಬೇರೆ. ಶಾಲೆ ಮುಗಿಸಿ ಹೊರಗೆ ಬರುವ ಮಕ್ಕಳಿಗೆ ನೀವೇನೇ ಕೊಡಿ, ಐಷಾರಾಮಿ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗಿ, ಮಕ್ಕಳಿಗೆ ತೃಪ್ತಿಯಾಗೋದಿಲ್ಲ. ಪಿಕ್ ಮಾಡಿದ ಅಮ್ಮನ ಮುಂದೆ ಶಾಲೆಯಲ್ಲಿ ನಡೆದ ಎಲ್ಲ ಘಟನೆಯನ್ನು ಒಂದೊಂದಾಗಿ ಹೇಳೋದು ಮಕ್ಕಳಿಗೆ ಖುಷಿಯೋ ಖುಷಿ. ಇದು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಪುತ್ರಿ ಇಶಾ ಅಂಬಾನಿ (Isha Ambani)ಗೆ ಗೊತ್ತಿದೆ. ತಮ್ಮ ಅವಳಿ ಮಕ್ಕಳನ್ನು ಬ್ಯುಸಿ ಶೆಡ್ಯೂಲ್ನಲ್ಲೂ ಆಗಾಗ ಇಶಾ ಪಿಕ್ ಮಾಡ್ತಾರೆ. ಈಗ ವೈರಲ್ ಆದ ವಿಡಿಯೋದಲ್ಲಿ ಇಶಾ ಅಂಬಾನಿ ಮಕ್ಕಳಿಗಾಗಿ ಕಾಯ್ತಾ ನಿಂತಿರುವುದನ್ನು ನೀವು ನೋಡ್ಬಹುದು. ಇದು ಇಶಾ ಸರಳತೆಯನ್ನು ಹೇಳ್ತಿದೆ. 

ಶಾಲೆ ಎಲ್ಲ ಮಕ್ಕಳಿಗೂ ಒಂದೆ. ಅವ್ರು ಶ್ರೀಮಂತರಾಗಿರಲಿ ಇಲ್ಲ ಬಡವರಾಗಿರಲಿ. ಯಾರಿಗೂ ಸ್ಪೇಷಲ್ ಎಂಟ್ರಿ ಇರೋದಿಲ್ಲ, ಶ್ರೀಮಂತರ ಮಕ್ಕಳನ್ನು ಬೇಗ ಸ್ಕೂಲ್ ನಿಂದ ಬಿಡೋದಿಲ್ಲ. ಎಲ್ಲ ಮಕ್ಕಳು ಹೊರಗೆ ಬರುವವರೆಗೆ ಪಾಲಕರು ಕಾಯ್ಬೇಕಾಗುತ್ತದೆ. ಇದು ಇಶಾ ಅಂಬಾನಿ ವಿಡಿಯೋ ನೋಡಿದ್ರೆ ಸ್ಪಷ್ಟವಾಗುತ್ತದೆ. ಶ್ರೀಮಂತ ಉದ್ಯಮಿ ಇಶಾ ಅಂಬಾನಿ, ಅತ್ಯಂತ ಸರಳ ಉಡುಪಿನಲ್ಲಿ ಮಕ್ಕಳ ಸ್ಕೂಲ್ ಮುಂದೆ ನಿಂತಿದ್ದಾರೆ. ಕ್ಯಾಮರಾ ನೋಡ್ತಿದ್ದಂತೆ ಅವರು ಅಲರ್ಟ್ ಆಗ್ತಾರೆ. ಇನ್ನೊಬ್ಬ ಪಾಲಕರ ಹಿಂದೆ ಹೋಗಿ ನಿಲ್ಲುತ್ತಾರೆ ಇಶಾ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.

ಸನ್‌ ಗ್ಲಾಸ್‌ ಧರಿಸಿ ಇಶಾ ಅಂಬಾನಿ ಕುಂಭ ಸ್ನಾನ, ತಲೆ ಸ್ಪರ್ಶಿಸದ ಗಂಗೆ

ನಿಮಗೆ ತಿಳಿದಿರುವಂತೆ ಇಶಾ ಅಂಬಾನಿ ಮತ್ತು ಆನಂದ್ ಅವರಿಗೆ ಅವಳಿ ಮಕ್ಕಳು. ಮಕ್ಕಳ ಹೆಸರು ಆದಿಯಾ ಪಿರಾಮಲ್ ಮತ್ತು ಕೃಷ್ಣ ಪಿರಾಮಲ್. ಇವರಿಬ್ಬರು ನವೆಂಬರ್ 19, 2022 ರಂದು ಜನಿಸಿದರು. ಇಶಾ ತಮ್ಮ ಮಕ್ಕಳನ್ನು ಮುಂಬೈನ ಪ್ರತಿಷ್ಠಿತ ನರ್ಸರಿ ಮತ್ತು ಕಿಂಡರ್‌ಗಾರ್ಟನ್ ಸಂಸ್ಥೆಯಾದ ವೆಸ್ಟ್‌ವಿಂಡ್ ಶಾಲೆಗೆ ದಾಖಲಾಗಿದ್ದಾರೆ. ವೆಸ್ಟ್‌ವಿಂಡ್ ಶಾಲೆ 1947 ರಿಂದಲೇ ಕೆಲ್ಸ ಮಾಡ್ತಿದೆ. ಇಲ್ಲಿ ಚಿಕ್ಕ ಮಕ್ಕಳು ಮಾತ್ರ ಇರೋದ್ರಿಂದ ವೈಯಕ್ತಿಕ ಆದ್ಯತೆ ಪ್ರತಿಯೊಬ್ಬ ಮಕ್ಕಳಿಗೆ ಸಿಗಲಿದೆ. ವರದಿಯ ಪ್ರಕಾರ, ನರ್ಸರಿ ಮತ್ತು ಕಿಂಡರ್‌ಗಾರ್ಟನ್ ಮಕ್ಕಳಿಗೆ ಇಲ್ಲಿ ವಾರ್ಷಿಕ ಶುಲ್ಕವಾಗಿ 2.5 ರಿಂದ 4 ಲಕ್ಷ ರೂಪಾಯಿ ಪಡೆಯಲಾಗುತ್ತದೆ.

ಜಾಕೆಟ್ ಧರಿಸಿ ನ್ಯೂಯಾರ್ಕ್ ಲಿಂಕನ್ ಸೆಂಟರ್‌ಗೆ ಭೇಟಿ ಕೊಟ್ಟ ನೀತಾ ಅಂಬಾನಿ ಕಂಡು ದಂಗು!

ಹಿಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಇಶಾ ತಮ್ಮಿಬ್ಬರು ಮಕ್ಕಳ ಜೊತೆ ಸ್ಕೂಲ್ ಗೆ ಬಂದ ವಿಡಿಯೋ ವೈರಲ್ ಆಗಿತ್ತು. ಅಂದು ಇಶಾ ಹಾಗೂ ಪಿರಾಮಲ್ ತಮ್ಮ ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಕಳುಹಿಸಲು ಬಂದಿದ್ದರು. ಈಗ ಇಶಾ ಅಂಬಾನಿ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಇಶಾ, ಸ್ಕೂಲ್ ಮುಂದೆ ಕಾಯ್ತಾ ನಿಂತಿದ್ದಾರೆ. ಬಿಳಿ ಡ್ರೆಸ್ ಧರಿಸಿರುವ ಅವರು ವಿಶೇಷ ಮೇಕಪ್ ಮಾಡಿಲ್ಲ. ಕ್ಯಾಮರಾ ನೋಡ್ತಿದ್ದಂತೆ ಅಲರ್ಟ್ ಆಗುವ ಅವರು ಮುಖವನ್ನು ಮರೆಮಾಚುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇಶಾ ಮೇಕಪ್ ಮಾಡಿಲ್ಲ, ಹಾಗಾಗಿ ಕ್ಯಾಮರಾ ಮುಂದೆ ಬರ್ತಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಇಶಾ, ಮಹಾಕುಂಭ ಮೇಳಕ್ಕೆ ಹೋಗಿ ಬಂದಿದ್ದಾರೆ. ಪತಿ ಜೊತೆ ಕುಂಭ ಮೇಳಕ್ಕೆ ತೆರಳಿದ್ದ ಅವರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಆದ್ರೆ ಇದೇ ವಿಷ್ಯಕ್ಕೆ ಇಶಾ ಟ್ರೋಲ್ ಕೂಡ ಆಗಿದ್ದರು.