ಇಶಾ ಅಂಬಾನಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಟ್ರೋಲ್ ಆಗಿದೆ. ಸನ್ ಗ್ಲಾಸ್ ಧರಿಸಿ, ಸರಿಯಾಗಿ ಮುಳುಗೇಳದ ಕಾರಣ ಟೀಕೆ ವ್ಯಕ್ತವಾಗಿದೆ. ಜನರು, ಇಶಾ ತೋರಿಕೆಗೆ ಸ್ನಾನ ಮಾಡಿದ್ದಾರೆ, ಶ್ರೀಮಂತಿಕೆ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ. ಈ ಹಿಂದೆ ಮುಖೇಶ್ ಅಂಬಾನಿ ಕುಟುಂಬ ಕುಂಭ ಸ್ನಾನ ಮಾಡಿತ್ತು, ಆಗ ಇಶಾ ಭಾಗವಹಿಸಿರಲಿಲ್ಲ.
ಭಾರತದ ಶ್ರೀಮಂತ ಮುಖೇಶ್ ಅಂಬಾನಿ (Mukesh Ambani) ಮಗಳು, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ (Isha Ambani), ಮಹಾ ಕುಂಭ ಮೇಳ (Maha Kumbh Mela )ದಲ್ಲೂ ಟ್ರೋಲ್ ಆಗಿದ್ದಾರೆ. ಇಶಾ ಅಂಬಾನಿ ಪುಣ್ಯ ಸ್ನಾನ, ಬಳಕೆದಾರರನ್ನು ಕೆರಳಿಸಿದೆ. ಇಶಾ ಅಂಬಾನಿ ಧರಿಸಿದ್ದ ಸನ್ ಗ್ಲಾಸ್ ಹಾಗೂ ಸೆಕ್ಯೂರಿಟಿ ನೋಡಿ ಜನರು ಕೋಪಗೊಂಡಿದ್ದಾರೆ.
ಮಹಾಕುಂಭ ಮೇಳ ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮಹಾ ಕುಂಭಕ್ಕೆ ತೆರೆ ಬೀಳಲಿದೆ. ಫೆಬ್ರವರಿ 26ರ ಶಿವರಾತ್ರಿಯಂದು ಕುಂಭ ಮೇಳದ ಕೊನೆ ಸ್ನಾನ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶ – ವಿದೇಶಗಳಿಂದ ಜನರು ಪ್ರಯಾಗರಾಜ್ ಗೆ ಹರಿದು ಬಂದಿದ್ದಾರೆ. ಫೆಬ್ರವರಿ 25ರಂದು ಸಂಜೆಯವರೆಗೆ 1.11 ಕೋಟಿ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಇಂದು ಇಶಾ ಅಂಬಾನಿ ಕೂಡ ಪ್ರಯಾಗರಾಜ್ ಗೆ ಭೇಟಿ ನೀಡಿದ್ದರು. ಸಂಗಮದಲ್ಲಿ ಇಶಾ ಪುಣ್ಯ ಸ್ನಾನ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಾಮಲ್ ಜೊತೆ ಪ್ರಯಾಗರಾಜ್ ತಲುಪಿದ್ದರು. ಅಲ್ಲಿ ಇಶಾ ಸಾಧ್ವಿ ಹಾಗೂ ಸ್ವಾಮಿಗಳ ಮಾರ್ಗದರ್ಶನದಲ್ಲಿ ತ್ರಿವೇಣಿ ಸಂಗಮಕ್ಕೆ ಹೂಗಳನ್ನು ಅರ್ಪಿಸಿ, ಸ್ನಾನ ಮಾಡಿದ್ದಾರೆ. ಆದ್ರೆ ಸ್ನಾನ ಮಾಡುವ ವೇಳೆ ಇಶಾ ಅಂಬಾನಿ, ಸನ್ ಗ್ಲಾಸ್ ಹಾಕಿಕೊಂಡಿದ್ದರು. ಆರಂಭದಲ್ಲಿ ಗಂಗೆಯಲ್ಲಿ ಮುಳುಗೇಳಲು ಇಶಾ ಹಿಂದೆಮುಂದೆ ನೋಡಿದ್ದಾರೆ. ಎರಡನೇ ಬಾರಿ ನೀರಿನಲ್ಲಿ ಮುಳುಗಿದ್ದಾರೆಯಾದ್ರೂ ಅವರ ಕತ್ತಿನ ಮೇಲ್ಭಾಗ ಒದ್ದೆಯಾಗ್ಲಿಲ್ಲ. ತಲೆಗೆ ಗಂಗೆಯ ಸ್ಪರ್ಶವಾಗ್ಲಿಲ್ಲ. ಒಂದ್ಕಡೆ ಇಶಾ ಸ್ನಾನ ಮಾಡಿದ ರೀತಿ ಹಾಗೂ ಇನ್ನೊಂದು ಕಡೆ ಇಶಾ ಧರಿಸಿದ್ದ ಸನ್ ಗ್ಲಾಸ್, ಅವರು ಟ್ರೋಲ್ ಆಗುವಂತೆ ಮಾಡಿದೆ. ಇಶಾ ಅಂಬಾನಿ ಪತಿ ಆನಂದ್ ಸೂಚನೆ ಮೇರೆಗೆ ಕೊನೆಯಲ್ಲಿ ಇಶಾ ಸನ್ ಗ್ಲಾಸ್ ತೆಗೆದು ಸ್ನಾನ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಜನರು, ಇಶಾಗೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದು ಇಷ್ಟವಿಲ್ಲ. ತೋರಿಕೆಗೆ ಯಾಕೆ ಹೋಗ್ಬೇಕು, ಗಂಗೆಯಲ್ಲಿ ಮುಳುಗೇಳಬೇಕು ಅಂದ್ರೆ ಶುದ್ಧ ಮನಸ್ಸಿನಿಂದ ಹೋಗಿ. ಪ್ರದರ್ಶನ ಇಲ್ಲಿ ಅವಶ್ಯಕತೆ ಇಲ್ಲ ಎಂಬ ಕಮೆಂಟ್ ಹಾಕಿದ್ದಾರೆ. ಇಶಾ ಶ್ರೀಮಂತಿಕೆ ತೋರಿಸಿದ್ದಾರೆ, ತಲೆ ಮೇಲಿರುವ ಪಾಪ ಇಳಿದಿಲ್ಲ, ಇಷ್ಟೊಂದು ಸೆಕ್ಯೂಟಿರಿ ಯಾಕೆ ನೀಡಿದ್ದಾರೆ, ಇವ್ರಿಂದ ಜನಸಾಮಾನ್ಯರಿಗೆ ತೊಂದರೆ ಆಗ್ತಿದೆ, ಇಶಾ ಅಂಬಾನಿಗೆ ನೀರು ಕಲುಶಿತವಾಗಿರುವ ವಿಷ್ಯ ತಿಳಿದಿದೆ, ಹಾಗಾಗಿಯೇ ಅವರು ಸರಿಯಾಗಿ ಸ್ನಾನ ಮಾಡಿಲ್ಲ, ಮನೆಗೆ ಹೋಗಿ ನಾಲ್ಕೈದು ಬಾರಿ ಸ್ನಾನ ಮಾಡ್ತಾರೆ ಎಂದು ಜನರು ಇಶಾ ಅಂಬಾನಿ ಪುಣ್ಯ ಸ್ನಾನವನ್ನು ದೂರಿದ್ದು, ಇದು ನಾಟಕ ಎಂದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಂ ಧರ್ಮದಲ್ಲಿ ಶ್ರೀಮಂತರು – ಬಡವರನ್ನು ಒಂದೇ ರೀತಿ ನೋಡಲಾಗುತ್ತೆ. ಮುಸ್ಲಿಂ ಧರ್ಮದಲ್ಲಿ ಹುಟ್ಟಿದ ನಾವು ಧನ್ಯರು ಅಂತ ಕಮೆಂಟ್ ಮಾಡಿದ ಜನರೂ ಇದ್ದಾರೆ.
ಮಹಾಕುಂಭದಿಂದ ಮನೆಗೆ ಗಂಗಾಜಲ ತಂದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿರಲಿ
ಕೆಲ ದಿನಗಳ ಹಿಂದೆ ಅಂಬಾನಿ ಕುಟುಂಬದ ಸದಸ್ಯರು ಕುಂಭ ಸ್ನಾನ ಮಾಡಿದ್ದರು. ಮುಖೇಶ್ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಅಂಬಾನಿ, ಶ್ಲೋಕಾ ಸೇರಿದಂತೆ ಅಂಬಾನಿ ಕುಟುಂಬಸ್ಥರು ಗಂಗೆಯಲ್ಲಿ ಮಿಂದೆದ್ದಿರು. ಆಗ ಮಿಸ್ ಆಗಿದ್ದ ಇಶಾ ಅಂಬಾನಿ ಇಂದು ಭೇಟಿ ನೀಡಿದ್ದಾರೆ. ಪ್ರಯಾಗರಾಜ್ ಗೆ ಬರುವ ಜನರಿಗೆ ರಿಲಾಯನ್ಸ್ ಸಂಸ್ಥೆ ಸಾಕಷ್ಟು ನೆರವು ನೀಡಿದೆ. ಆಹಾರ, ನೀರು ಸೇರಿದಂತೆ ಸಾರಿಗೆ ವ್ಯವಸ್ಥೆ ಮಾಡಿದೆ. ಮುಖೇಶ್ ಅಂಬಾನಿ ಕೂಡ ಶುದ್ಧ ಮನಸ್ಸಿನಿಂದ ಗಂಗೆಯಲ್ಲಿ ಮುಳುಗೆದ್ದಿದ್ದಾರೆ. ಇದನ್ನು ಹೊಗಳಿರುವ ಜನರು, ಮುಖೇಶ್ ಹಾಗೂ ನೀತಾ ಅಂಬಾನಿ, ಇಶಾಗೆ ಪುಣ್ಯ ಸ್ನಾನ ಮಾಡೋದನ್ನು ಕಲಿಸಿಲ್ಲ ಎಂದಿದ್ದಾರೆ,
