ಅಕ್ಷಯ ತೃತೀಯದ ಬಳಿಕ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ ದೀರ್ಘಾವಧಿಯಲ್ಲಿ ಚಿನ್ನದ ಹೂಡಿಕೆ ಲಾಭದಾಯಕವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ೮ ವರ್ಷಗಳಲ್ಲಿ ಚಿನ್ನದಿಂದ ಆದಾಯ ಶೂನ್ಯ. ಹೂಡಿಕೆದಾರರು ದೀರ್ಘಾವಧಿ ಲಾಭ ನೀಡುವ ಇತರೆ ಆಯ್ಕೆಗಳನ್ನು ಪರಿಗಣಿಸಬೇಕು. ಚಿನ್ನ ತುರ್ತು ಪರಿಸ್ಥಿತಿಯ ಆಸ್ತಿಯೇ ಹೊರತು ಉತ್ತಮ ಹೂಡಿಕೆಯಲ್ಲ.
ನವದೆಹಲಿ(ಮೇ.01) ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಿ ಅದೃಷ್ಠ, ಸಂಪತ್ತನ್ನು ಹಲವರು ವೃದ್ಧಿಕೊಂಡಿಸಿದ್ದಾರೆ. ಅಕ್ಷಯ ತೃತೀಯದ ಮರು ದಿನವೇ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ಲಕ್ಷಕ್ಕಿಂತ ಕಡಿಮೆಯಾಗುವ ಯಾವುದೇ ಸೂಚನೆ ಇಲ್ಲ. ಕಾರಣ ಇಂದು 24 ಕಾರೆಟ್ ಚಿನ್ನದಲ್ಲಿ ಕೇವಲ 10 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಈಗಾಗಲೇ 1 ಲಕ್ಷ ರೂಪಾಯಿ ಆಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಹಲವರು ಚಿನ್ನದ ಮೇಲೆ ಹೂಡಿಕೆ ಮಾಡಲು ಸಜ್ಜಾಗಿದ್ದಾರೆ. ಬ್ಯಾಂಕ್ ಸೇರಿದಂತೆ ಹಲೆವೆಡೆ ಚಿನ್ನದ ಮೇಲೆ ಹೂಡಿಕೆ ಮೂಡುವ ಯೋಜನೆಗಳಿವೆ. ಚಿನ್ನದ ಬೆಲೆ ಗಗನಕ್ಕೇರಿದೆ ಎಂದು ಹೂಡಿಕೆ ಮಾಡಿದರೆ ಅದರಿಂದ ಬರುವ ಆದಾಯ ಶೂನ್ಯ ಎಂದು ಖ್ಯಾತ ಚಾರ್ಟೆಟೆಡ್ ಅಕೌಂಟೆಂಟ್ ನಿತೇಶ್ ಬುದ್ಧದೇವ್ ಅಂಕಿ ಅಂಶದ ಜೊತೆ ಸಲಹೆ ನೀಡಿದ್ದಾರೆ.
ನಿತೇಶ್ ಬುದ್ಧದೇವ್ ಲಿಂಕ್ಡ್‌ಇನ್‌ನಲ್ಲಿ ಈ ಕುರಿತು ಕೆಲ ಮಹತ್ವದ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವುದ ಉತ್ತಮಲ್ಲ ಎಂದಿದ್ದಾರೆ. ಚಿನ್ನದ ಬೆಲೆ ದುಬಾರಿಯಾಗಿರಬಹುದು. ಆದರೆ ಹೂಡಿಕೆಯಿಂದ ಆದಾಯ ಮಾತ್ರ ಬರಲ್ಲ ಎಂದಿದ್ದಾರೆ. ಹೂಡಿಕೆದಾರರು ಸದ್ಯದ ಬೆಲೆ ಬಗ್ಗೆ ನೋಡದೆ, ಸುದೀರ್ಘ ವರ್ಷಗಳ ಹೂಡಿಕೆ ಹಾಗೂ ಆದಾಯ ಕುರಿತು ಗಮನಹರಿಸಬೇಕು ಎಂದಿದ್ದಾರೆ.
ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ, ಖರೀದಿಗೆ ಮುಗಿಬಿದ್ದ ಜನ
ಸಿಎ ಪ್ರಕಾರ ಚಿನ್ನದ ಮೇಲೆ ಹೂಡಿಕೆ ಯಾಕೆ ಉತ್ತಮವಲ್ಲ?
ಕಳೆದ 8 ವರ್ಷದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಸಿಕ್ಕಿದ್ದು ಶೂನ್ಯ. ಸದ್ಯದ ಪರಿಸ್ಥಿತಿಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ ಹೂಡಿಕೆ ಮಾಡುವ ಉತ್ತಮ ತಾಣ ಚಿನ್ನವಲ್ಲ ಎಂದು ನಿತೇಶ್ ಹೇಳಿದ್ದಾರೆ. ಇದಕ್ಕೆ ಅಂಕಿ ಅಂಶ ಸಮೇತ ಉತ್ತರ ನೀಡಿದ್ದಾರೆ. ಹೂಡಿಕೆ ಮಾಡುವಾಗ ಚಿನ್ನವನ್ನು ಭಕ್ತಿಯಿಂದ ಅಲ್ಲ ವಾಸ್ತವಿಕತೆಯಿಂದ ನೋಡಿ ಎಂದು ಸಲಹೆ ನೀಡಿದ್ದಾರೆ. ಚಿನ್ನ ಕಳೆದ ನಾಲ್ಕು ವರ್ಷದಲ್ಲಿ ಭರ್ಜರಿ ಏರಿಕೆಯಾಗಿದೆ. ನಾಲ್ಕು ವರ್ಷದಲ್ಲಿ ರಿಟರ್ನ್ಸ ಕೂಡ ಹೆಚ್ಚು ಅನ್ನೋ ಮಾತು, ಬರಹ ನೋಡಿ ಹೂಡಿಕೆ ಮಾಡಬೇಡಿ ಎಂದು ನಿತೇಶ್ ಹೇಳಿದ್ದಾರೆ. 8 ವರ್ಷಗಳ ಅವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಆದಾಯ ಶೂನ್ಯ ಎಂದು ನಿತೇಶ್ ಹೇಳಿದ್ದಾರೆ.
8 ವರ್ಷದ ಅವಧಿಯಲ್ಲಿ ಚಿನ್ನದ ಮೇಲಿನ ರಿಟರ್ನ್ ಶೂನ್ಯ
10 ಗ್ರಾಂ ಚಿನ್ನದ ಬೆಲೆ
2012: 31,050 ರೂಪಾಯಿ
2013: 29,600 ರೂಪಾಯಿ
2014: 28,006 ರೂಪಾಯಿ
2015: 26,343 ರೂಪಾಯಿ
2016: 28,623 ರೂಪಾಯಿ
2017: 29,667 ರೂಪಾಯಿ
2018: 31,438 ರೂಪಾಯಿ
2019: 35,220 ರೂಪಾಯಿ
8 ವರ್ಷದ ಅವಧಿಯಲ್ಲಿ ಚಿನ್ನದ ಮೇಲಿನ ನೆಟ್ ರಿಟರ್ನ್ಸಸ್ ಶೇಕಡಾ 13. ಅಂದರೆ CAGR ಸರಾಸರಿ 1.5 ಶೇಕಡಾ ಮಾತ್ರ ಎಂದು ನಿತೇಶ್ ಬುದ್ಧದೇವ್ ಈ ಹಿಂದಿನ ಚಿನ್ನದ ಬೆಲೆಯಲ್ಲಿನ ಏರಿಕೆ ಹಾಗೂ ಹೂಡಿಕೆ ಕುರಿತು ಹೇಳಿದ್ದಾರೆ. 1992 ರಿಂದ 2002ರ ವರೆಗಿನ 10 ವರ್ಷ ಅವಧಿಯಲ್ಲಿ ಚಿನ್ನದ ಬೆಲೆ 4,334 ರೂಪಾಯಿಯಿಂದ 4,990 ರೂಪಾಯಿಗೆ ಏರಿಕೆಯಾಗಿದೆ. ಇಲ್ಲೂ ಕೂಡ CAGR ಸರಾಸರಿ 1.5 ಶೇಕಡಾ ಮಾತ್ರ ಎಂದಿದ್ದಾರೆ. ಇದೇ ವೇಳೆ 2020ರಿಂದ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆ ಎಲ್ಲರ ಕಣ್ಣಿಗೆ ರಾಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೋವಿಡ್ 19, ಹಣ ದುಬ್ಬರ, ಯುದ್ಧ ಹಾಗೂ ಸೆಂಟ್ರಲ್ ಬ್ಯಾಂಕ್‌ನಿಂದ ಚಿನ್ನ ಖರೀದಿ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗುವಂತೆ ಮಾಡಿದೆ ಎಂದಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಬೇಡ ಎಂದಲ್ಲ, ಆದರೆ ಉತ್ತಮ ಆಯ್ಕೆಯಲ್ಲ
ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಹೇಳಲ್ಲ. ಆದರೆ ಚಿನ್ನದ ಮೇಲೆ ಹೂಡಿಕೆ ಉತ್ತಮ ಆಯ್ಕೆಯಲ್ಲ ಎಂದಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡವುದು ಒಂದು ಅಸೆಟ್ ನಿಜ. ಜೊತೆಗೆ ಅಪತ್ಕಾಲದಲ್ಲಿ ನೆರವು ನೀಡುವ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಈಕ್ವಿಟಿಯಲ್ಲಿನ ಬೆಳವಣಿಗೆ ಹಾಗೂ ರಿಟರ್ನ್ಸ್ ಚಿನ್ನದಲ್ಲಿ ಸಿಗಲ್ಲ. ಜೊತೆಗೆ ಚಿನ್ನದ ಮೇಲಿನ ಹೂಡಿಕೆ ರಿಸ್ಕ್ ರಹಿತವಾಗಿಲ್ಲ ಎಂದು ನಿತೇಶ್ ಹೇಳಿದ್ದಾರೆ.
ಚಿನ್ನದ ಬೆಲೆ ಸೆನ್‌ಸೆಕ್ಸ್‌ಗಿಂತ ವೇಗವಾಗಿ ಒಡುತ್ತಿದೆ ನಿಜ. ಆದರೆ ಹೂಡಿಕೆ ಮೊದಲು ರಿಟರ್ನ್ಸ್ ಕುರಿತು ಆಲೋಚಿಸಿ, ಅಧ್ಯಯನ ಮಾಡಿ. 8 ರಿಂದ 10 ವರ್ಷಗಳಲ್ಲಿ ಶೇಕಡಾ 1.5 ರಷ್ಟು ರಿಟರ್ನ್ಸ್ ಪಡೆಯುವುದು ಉತ್ತಮ ಬೆಳವಣಿಗೆಯಲ್ಲ.ಸದ್ಯ ಮಾರುಕಟ್ಟೆಯಲ್ಲಿ ಅದಕ್ಕಿಂತ ಉತ್ತಮ ರಿಟರ್ನ್ಸ್ ಇರುವ ಹೂಡಿಕೆ ಆಯ್ಕೆಗಳು ಇವೆ ಎಂದು ನಿತೇಶ್ ಬುದ್ಧದೇವ್ ಹೇಳಿದ್ದಾರೆ.
ವಿಜಯನಗರ ಸಾಮ್ರಾಜ್ಯವಲ್ಲ, ಅಕ್ಷಯ ತೃತೀಯಕ್ಕೆ ಇನ್‌ಸ್ಟಾಮಾರ್ಟ್ ಬೈಕ್‌ನಲ್ಲಿ ಚಿನ್ನ ಡೆಲಿವರಿ


