ಅಕ್ಷಯ ತೃತೀಯಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಬಂಗಾರ ಡೆಲಿವರಿ ಇದೀಗ ಭಾರಿ ಚರ್ಚೆಯಾಗುತ್ತಿದೆ. ಬೈಕ್‌ನಲ್ಲಿ ಫುಡ್ ಡೆಲಿವರಿ ರೀತಿ ಚಿನ್ನ ಡೆಲಿವರಿ ಮಾಡಲಾಗುತ್ತಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದೆ.
ನವದೆಹಲಿ(ಏ.30) ವಿಜಯನಗರ ಸಾಮ್ರಾಜ್ಯದಲ್ಲಿ ಬೀದಿ ಬೀದಿಯಲ್ಲಿ ಕಡ್ಲೆಪುರಿ ಮಾರಾಟ ಮಾಡಿದರ ರೀತಿ ಚಿನ್ನ ಮಾರಾಟ ಮಾಡುತ್ತಿದ್ದರು ಅನ್ನೋದು ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ ಈಗ ಸಾಮ್ರಾಜ್ಯ ವಿಜಯನಗವಲ್ಲ, ಚಿನ್ನ ಕೂಡ ಅಗ್ಗವಲ್ಲ. ಒಂದೊಂದು ಗ್ರಾಂ ಚಿನ್ನದ ಬೆಲೆ ಕೇಳಿದರೆ ತಲೆ ತಿರುಗುತ್ತೆ. ಇದರ ನಡುವೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಅಕ್ಷಯ ತೃತೀಯಕ್ಕೆ ಬೈಕ್ ಮೂಲಕ ಚಿನ್ನ ಡೆಲಿವರಿ ಮಾಡಿದೆ. ಸ್ವಿಗ್ಗಿ ಆಹಾರ ಸಾಗಿಸಲು ಬಾಕ್ಸ್ ಇರುವಂತೆ, ಚಿನ್ನ ಸಾಗಿಸಲು ಭಾರಿ ಭದ್ರತೆಯ ಬಾಕ್ಸ್ ಬಳಸಲಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
ಇನ್‌ಸ್ಟಾಮಾರ್ಟ್ ಸಿಬ್ಬಂದಿಗಳು ಟಿ ಶರ್ಟ್ ಧರಿಸಿ ಬೈಕ್ ಮೇಲೆ ಬಂಗಾರವನ್ನು ಡೆಲಿವರಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೆಕ್ಯೂಟಿರಿ ಬೈಕ್ ಹಿಂಭಾಗದಲ್ಲಿ ಕುಳಿತಿದ್ದಾನೆ. ಕೈಯಲ್ಲಿ ಬಂಗಾರದ ಭದ್ರತೆಯ ಲಾಕರ್ ಹಿಡಿದು ಕುಳಿತಿದ್ದಾನೆ. ಇತ್ತ ಸಿಬ್ಬಂದಿ ಬೈಕ್ ಮೂಲಕ ವೇಗವಾಗಿ ಸಾಗತ್ತಿರುವ ದೃಶ್ಯ ಹಲವರನ್ನು ಆರ್ಷಿಸಿದೆ. ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಹಾಸ್ಯ ಮಾಡಿದರೆ, ಮತ್ತೆ ಕೆಲವರು ಸುರಕ್ಷತೆಯ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಕ್ಷಯ ತೃತೀಯ: ಇವತ್ತು ಚಿನ್ನ ಖರೀದಿಸುವಾಗ ಈ 7 ಮಿಸ್ಟೇಕ್ಸ್ ಮಾಡಲೇಬೇಡಿ!
ಪ್ರತಿ ಮೂಲೆಗೆ ಚಿನ್ನವನ್ನು ತಲುಪಿಸುವ ಜವಾಬ್ದಾರಿಯನ್ನು ಇನ್‌ಸ್ಟಾಮಾರ್ಟ್ ಹೊತ್ತಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಏನಾಗುತ್ತಿದೆ ಈ ದೇಶದಲ್ಲಿ ಚಿನ್ನ ಸಾಗಾಟ ಫುಡ್ ಡೆಲಿವರಿಯಷ್ಟು ಸುಲಭ ಎಂದು ಈಗಲೇ ಗೊತ್ತಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಒಂದಷ್ಟು ಮಂದಿ ಚಿನ್ನ ಸಾಗಾಟಕ್ಕೆ ನಿಜವಾದ ಸೆಕ್ಯೂರಟಿ ಅವಶ್ಯಕತೆ ಇದೆ. ಕಾದು ಕುಳಿತು ದಾಳಿ ನಡೆಸಿದರೆ, ಅಥವಾ ಚಿನ್ನದ ಕಾರಣದಿಂದ ದಾಳಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಅಕ್ಷಯ ತೃತೀಯ ದಿನ ಚಿನ್ನಕ್ಕೆ ಸಹಜವಾಗಿ ಬೇಡಿಕೆ ಹೆಚ್ಚು. ಹೀಗಾಗಿ ಇನ್‌ಸ್ಟಾಮಾರ್ಟ್ ಮೂಲಕ ತ್ವರಿತವಾಗಿ ತಲುಪಲು ಬಳಸಲಾಗಿದೆ ಎಂದು ಹಲವರು ಸಮಾಜಾಯಿಷಿ ನೀಡಿದ್ದಾರೆ. ಆದರೆ ಬೈಕ್‌ನಲ್ಲಿ ಈ ರೀತಿ ಚಿನ್ನ ಡೆಲಿವರಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಇದು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.
ಅಕ್ಷಯ ತೃತೀಯಕ್ಕೆ ಹೊಸ ಆಫರ್
ಅಕ್ಷಯ ತೃತೀಯ ದಿನ ಚಿನ್ನದ ಬೇಡಿಕೆ ಹೆಚ್ಚಾಗಿರುವ ಕಾರಣ ಕಲ್ಯಾಣ್ ಜ್ಯೂವೆಲ್ಲರ್ಸ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜಂಟಿಯಾಗಿ ಚಿನ್ನ ಡೆಲಿವರಿ ಯೋಜನೆ ಆರಂಭಿಸಿದೆ. ಇನ್‌ಸ್ಟಾಮಾರ್ಟ್ ಮೂಲಕ ಕೇವಲ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಬೆಳ್ಳಿ ನಾಣ್ಯಗಳನ್ನು ಪಡೆಯಬಹುದು. ಅಕ್ಷಯ ತೃತೀಯ ದಿನ ಜ್ಯೂವೆಲ್ಲರಿ ಶೂರೂಂಗಳಲ್ಲಿ ಜನ ದಟ್ಟಣೆ ಹೆಚ್ಚಾಗಿರುತ್ತದೆ. ಇದರಿಂದ ಖರೀದಿ ವಿಳಂಬವಾಗಲಿದೆ. ಇದನ್ನು ತಪ್ಪಿಸಲು ಇನ್‌ಸ್ಟಾಮಾರ್ಟ್ ಹಾಗೂ ಕಲ್ಯಾಣ್ ಜ್ಯೂವೆಲ್ಲರ್ಸ್ ಹೊಸ ಪ್ರಯೋಗ ಮಾಡಿದೆ.
ಚಿನ್ನ ಖರೀದಿಗೆ ಸೀಮಿತವಲ್ಲ ಅಕ್ಷಯ ತೃತೀಯಾ! ಇಂದು ಏನೇನು ಆಚರಣೆ ನಡೆಯುತ್ತೆ ಗೊತ್ತಾ?


