90ರ ದಶಕದವರೇ ಇಲ್ನೋಡಿ: ನಿಮ್ಮ ನೆಚ್ಚಿನ ‘ಸಚಿನ್ ತೆಂಡೂಲ್ಕರ್‌ ಪೆನ್‌’ ರೆನಾಲ್ಡ್ಸ್‌ 045 ಮಾರಾಟ ಸ್ಥಗಿತ? ಅಸಲಿಯತ್ತು ಹೀಗಿದೆ..

Reynolds Ball Pen: ರೆನಾಲ್ಡ್ಸ್ ತನ್ನ ಐಕಾನಿಕ್ ಬಾಲ್ ಪೆನ್, 045 ಅನ್ನು ನಿಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್‌ ಆದ ನಂತರ '90 ರ ದಶಕದವರು ನಿರಾಶೆಗೊಂಡರು. 

is reynolds retiring the iconic sachin tendulkar pen social media in uproar over viral tweet ash

ನವದೆಹಲಿ (ಆಗಸ್ಟ್‌ 27, 2023): ರೆನಾಲ್ಡ್ಸ್ ತನ್ನ ಪ್ರೀತಿಯ 045 ಫೈನ್ ಕಾರ್ಬ್ಯೂರ್ ಪೆನ್ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು 'X' (ಹಿಂದೆ ಟ್ವಿಟ್ಟರ್‌ ಎಂದು ಕರೆಯಲಾಗುತ್ತಿತ್ತು) ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ಸುದ್ದಿಯು ಕಾಳ್ಗಿಚ್ಚಿನಂತೆ ಹರಡಿದ್ದು, ಇದು 80 ಹಾಗೂ 90ರ ದಶಕದಲ್ಲಿ ಜನಿಸಿದವರಿಗೆ ಬೇಸರ ಉಂಟು ಮಾಡಿದೆ. ಈ ಹಿನ್ನೆಲೆ ಹಲವರು ರೆನಾಲ್ಡ್ಸ್ 045 ಪೆನ್ನಿನ ಫೋಟೋ ಹಾಕಿ ಹಲವರು ವಿದಾಯ ಹೇಳುತ್ತಿದ್ದಾರೆ. 

ಈಗಿನ ಯುವಕರಿಗೆ ಅಥವಾ ಈ ಐಕಾನಿಕ್ ಪೆನ್ ಬಗ್ಗೆ ಪರಿಚಯವಿಲ್ಲದವರಿಗೆ, ಅದರ ಹೆಸರಿನಲ್ಲಿರುವ '045' ಐತಿಹಾಸಿಕ ಮಹತ್ವವನ್ನು ಹೊಂದಿದೆ. ರೆನಾಲ್ಡ್ಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಬಾರಿಗೆ 1945 ವರ್ಷದಲ್ಲಿ ಮಾರಾಟ ಆರಂಭಿಸಿದ್ದು, ಆ ವರ್ಷವನ್ನು ಇದು ಪ್ರತಿನಿಧಿಸುತ್ತದೆ. 

ಇದನ್ನು ಓದಿ: 10 ವರ್ಷದ ಹಿಂದೆ ಈ ಸ್ಟಾಕ್‌ನಲ್ಲಿ 10,000 ಹೂಡಿಕೆ ಮಾಡಿದ್ರೆ, ನಿಮ್ಮ ಬಳಿ ಈಗ 17 ಲಕ್ಷ ರೂ. ಇರ್ತಿತ್ತು!

ಕಾಲಾನಂತರದಲ್ಲಿ, ಈ ಬ್ರ್ಯಾಂಡ್ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದ್ದು, ನಿಜವಾದ ಐಕಾನ್ ಆಯಿತು. ಭಾರತೀಯ ಮೂಲದ ಪೆನ್‌ ಅಲ್ಲದಿದ್ರೂ ರೆನಾಲ್ಡ್ಸ್ ಭಾರತೀಯ ಬರವಣಿಗೆ ಸಂಸ್ಕೃತಿಗೆ ಸಮಾನಾರ್ಥಕವಾಗಿದೆ. ಇನ್ನು, 045 ಫೈನ್ ಕಾರ್ಬ್ಯೂರ್ ಪೆನ್, ಕ್ರಿಕೆಟ್ ದಂತಕಥೆಯೊಂದಿಗಿನ ತನ್ನ ಒಡನಾಟದಿಂದಾಗಿ "ಸಚಿನ್ ತೆಂಡೂಲ್ಕರ್ ಪೆನ್" ಎಂದು ಪ್ರೀತಿಯಿಂದ ಉಲ್ಲೇಖಿಸಲ್ಪಡುತ್ತದೆ. ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಅದರ ವಿನ್ಯಾಸವು ಬಿಳಿಯ ದೇಹ ಮತ್ತು ನೀಲಿ ಕ್ಯಾಪ್‌ ಅನ್ನು ಒಳಗೊಂಡಿದೆ. 

ಆದರೆ, ಈ ರೆನಾಲ್ಡ್ಸ್‌ ಪೆನ್ ನಿಜಕ್ಕೂ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತಿದ್ಯಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರೆ, ಇನ್ನು ಹಲವರು ಇತ್ತೀಚೆಗೆ ಪೆನ್‌ ಖರೀದಿಸಿರುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆ, ಕೆಲವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೂ, ಇದು ವೈರಲ್‌ ಆಗುತ್ತಿದ್ದಂತೆ ಈ ಬಗ್ಗೆ ರೆನಾಲ್ಡ್ಸ್‌ ಕಂಪನಿಯೇ ಸ್ಪಷ್ಟನೆ ನೀಡಿದೆ. 

ಇದನ್ನೂ ಓದಿ: 20ರ ಹರೆಯದ ಯುವಕರ ಜಾದೂ: ಇತಿಹಾಸ ಸೃಷ್ಟಿಸಿದ Zeptoಗೆ ಹರಿದುಬಂತು ಸಾವಿರಾರು ಕೋಟಿ ಬಂಡವಾಳ

“ಇತ್ತೀಚಿನ ತಪ್ಪು ಮಾಹಿತಿಯ ಬೆಳಕಿನಲ್ಲಿ, ನಾವು ಸ್ಪಷ್ಟಪಡಿಸಲು ಬಯಸುತ್ತೇವೆ: ಪ್ರಸಾರವಾಗುತ್ತಿರುವ ಮಾಹಿತಿಯು ಸುಳ್ಳು. ನಿಜವಾದ ಮತ್ತು ನಿಖರವಾದ ನವೀಕರಣಗಳಿಗಾಗಿ ನಮ್ಮ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಉಲ್ಲೇಖಿಸಲು ನಾವು ನಮ್ಮ ಪಾಲುದಾರರು, ಮಧ್ಯಸ್ಥಗಾರರು ಮತ್ತು ಗ್ರಾಹಕರಿಗೆ ಬಲವಾಗಿ ಸಲಹೆ ನೀಡುತ್ತೇವೆ’’ ಎಂದು ರೆನಾಲ್ಡ್ಸ್‌ ಕಂಪನಿ ಹೇಳಿದ್ದು, ಈ ಮೂಲಕ ರೆನಾಲ್ಡ್ಸ್‌ 045 ಪೆನ್ ಮಾರಾಟ ಸ್ಥಗಿತವಾಗಿದೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

 

ಐಕಾನಿಕ್ ಪೆನ್ನನ್ನು ಸ್ಥಗಿತಗೊಳಿಸುವ ಬಗ್ಗೆ ಊಹಾಪೋಹಗಳಿಗೆ ಕೊನೆ ಹಾಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ದೃಢವಾದ ಅಸ್ತಿತ್ವವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಕಂಪನಿಯು ದೃಢವಾಗಿ ಪ್ರತಿಪಾದಿಸಿದೆ.

ಇದನ್ನೂ ಓದಿ: 615 ಕೋಟಿಯ Chandrayaan 3 ಸಕ್ಸಸ್‌ ಎಫೆಕ್ಟ್‌; ಷೇರು ಮಾರುಕಟ್ಟೆಗೆ ಹರಿದುಬಂತು ಬರೋಬ್ಬರಿ 31 ಸಾವಿರ ಕೋಟಿ ಬಂಡವಾಳ

Latest Videos
Follow Us:
Download App:
  • android
  • ios