20ರ ಹರೆಯದ ಯುವಕರ ಜಾದೂ: ಇತಿಹಾಸ ಸೃಷ್ಟಿಸಿದ Zeptoಗೆ ಹರಿದುಬಂತು ಸಾವಿರಾರು ಕೋಟಿ ಬಂಡವಾಳ

ಸ್ಟೆಪ್‌ಸ್ಟೋನ್ ಗ್ರೂಪ್, ಗುಡ್‌ವಾಟರ್ ಕ್ಯಾಪಿಟಲ್ ಮತ್ತು ಇತರರು ಮುಂಬೈ ಮೂಲದ ಕಂಪನಿಯಲ್ಲಿ ಸುಮಾರು 1653 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

how two 20 year olds beat grim market to mint india s newest unicorn zepto ash

ನವದೆಹಲಿ (ಆಗಸ್ಟ್‌ 26, 2023):  20 ವರ್ಷದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯಂದ ಡ್ರಾಪ್‌ಔಟ್‌ಗಳಾಗಿರುವ ಈ ಇಬ್ಬರು ಯುವಕರು ಸ್ಥಾಪಿಸಿದ Zepto ಕಂಪನಿ ಇತಿಹಾಸ ಸೃಷ್ಟಿಸಿದೆ. 1.4 ಶತಕೋಟಿ ಡಾಲರ್‌ ಮೌಲ್ಯದಲ್ಲಿ ಫಂಡಿಂಗ್‌ ಪಡೆದಿದ್ದು, ಅಪರೂಪದ ಭಾರತೀಯ ಯುನಿಕಾರ್ನ್ ಅನ್ನು ಸೃಷ್ಟಿಸಿದೆ. ಈ ಮೂಲಕ 2023ರಲ್ಲಿ ಮೊದಲ ಯುನಿಕಾರ್ನ್‌ ಎನಿಸಿಕೊಂಡಿದೆ. 

ಸ್ಟೆಪ್‌ಸ್ಟೋನ್ ಗ್ರೂಪ್, ಗುಡ್‌ವಾಟರ್ ಕ್ಯಾಪಿಟಲ್ ಮತ್ತು ಇತರರು ಮುಂಬೈ ಮೂಲದ ಕಂಪನಿಯಲ್ಲಿ ಒಟ್ಟು 200 ಮಿಲಿಯನ್ ಡಾಲರ್‌ (ಸುಮಾರು 1653 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ ಎಂದು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ವೈ ಕಾಂಬಿನೇಟರ್‌ ಬೆಂಬಲದೊಂದಿಗೆ ನಿರ್ಮಿಸಲಾದ Zepto 15 ತಿಂಗಳೊಳಗೆ ಲಾಭದಾಯಕವಾಗುವ ಹಾದಿಯಲ್ಲಿದೆ ಮತ್ತು 2 - 3 ವರ್ಷಗಳಲ್ಲಿ ಐಪಿಒ ಮೂಲಕ ಸಾರ್ವಜನಿಕವಾಗಿ ಹಣ ಸಂಗ್ರಹಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: 615 ಕೋಟಿಯ Chandrayaan 3 ಸಕ್ಸಸ್‌ ಎಫೆಕ್ಟ್‌; ಷೇರು ಮಾರುಕಟ್ಟೆಗೆ ಹರಿದುಬಂತು ಬರೋಬ್ಬರಿ 31 ಸಾವಿರ ಕೋಟಿ ಬಂಡವಾಳ

ಬಾಲ್ಯದ ಗೆಳೆಯರಾದ ಆದಿತ್ ಪಲಿಚಾ ಮತ್ತು ಕೈವಲ್ಯ ವೋಹ್ರಾ ಅವರು ಹದಿಹರೆಯದವರಾಗಿದ್ದಾಗ ಭಾರತಕ್ಕೆ ಮರಳಲು ಮತ್ತು ಸ್ಟಾರ್ಟ್ಅಪ್ ಸ್ಥಾಪಿಸಲು ಸ್ಟ್ಯಾನ್‌ಫೋರ್ಡ್‌ ವಿವಿಯ ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಂ ಅನ್ನು ಬಿಟ್ಟು ಬಂದರು. ಅವರು ಈಗ ಯಾವುದೇ ಭಾರತೀಯ ಯುನಿಕಾರ್ನ್‌ನ ಅತ್ಯಂತ ಕಿರಿಯ ಸಂಸ್ಥಾಪಕರು ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಸೀರೀಸ್ E ರೌಂಡ್‌ ಜಾಗತಿಕವಾಗಿ ತ್ವರಿತ ವಾಣಿಜ್ಯ ವಿಭಾಗಕ್ಕೆ ಸವಾಲಿನ ಸಮಯದಲ್ಲಿ ಬರುತ್ತದೆ. ಅಮೆರಿಕದಲ್ಲಿ Gopuff ಮತ್ತು ಯೂರೋಪ್‌ನಲ್ಲಿ ಗೆಟಿರ್‌ನಂತಹ ಸ್ಟಾರ್ಟ್‌ಅಪ್‌ಗಳು ಉದ್ಯೋಗಗಳನ್ನು ಕಡಿತಗೊಳಿಸುತ್ತವೆ. ಸ್ವತಃ Zepto, ಆಲ್ಫಬೆಟ್ Inc. ಬೆಂಬಲಿತ Dunzo, Zomato Ltd. ನ Blinkit ಮತ್ತು Naspers Ltd. ಬೆಂಬಲಿತ ಇನ್‌ಸ್ಟಾಮಾರ್ಟ್ ಸೇರಿದಂತೆ  ಭಾರತದಲ್ಲಿನ ಪ್ರತಿಸ್ಪರ್ಧಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಅದಾನಿ ಹಗರಣ ತನಿಖೆ: ಸುಪ್ರಿಂಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ ಸೆಬಿ; ವರದಿಯಲ್ಲಿ ಏನಿದೆ ನೋಡಿ..

2022 ರ ಇದೇ ಅವಧಿಗೆ ಹೋಲಿಸಿದರೆ ವರ್ಷದ ಮೊದಲಾರ್ಧದಲ್ಲಿ ವೆಂಚರ್ ಫಂಡಿಂಗ್ ಸುಮಾರು 72% ರಷ್ಟು ಕಡಿಮೆಯಾಗಿದೆ. 2022 ರಲ್ಲಿ 19 ಯುನಿಕಾರ್ನ್‌ಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ Zepto ಹೊರತುಪಡಿಸಿ ದೇಶದಲ್ಲಿ ಇತರೆ ಯಾವುದೇ ಯುನಿಕಾರ್ನ್‌ ಕಂಪನಿ ರಚನೆಯಾಗಿಲ್ಲ. Zepto ಅನ್ನು ಜುಲೈ 2021 ರಲ್ಲಿ ಸ್ಥಾಪಿಸಲಾಯಿತು ಮತ್ತು ಈಗ ಮುಂಬೈ, ಬೆಂಗಳೂರು ಮತ್ತು ನವದೆಹಲಿ ಸೇರಿದಂತೆ ನಗರಗಳಾದ್ಯಂತ 220 ಕ್ಕೂ ಹೆಚ್ಚು ಡಾರ್ಕ್ ಸ್ಟೋರ್‌ಗಳು ಅಥವಾ ನೆರೆಹೊರೆಯ ಗೋದಾಮುಗಳನ್ನು ಹೊಂದಿದ್ದು, ವಿಸ್ತರಣೆಯ ಯೋಜನೆಗಳನ್ನೂ ಹೊಂದಿದೆ.

ಇದನ್ನೂ ಓದಿ; 999 ರೂ. ಗೆ ಅಮೆಜಾನ್‌ನಲ್ಲಿ ಲಭ್ಯ ಜಿಯೋ ಭಾರತ್ ಫೀಚರ್ ಫೋನ್: ಮಾರಾಟ ದಿನಾಂಕ, ವೈಶಿಷ್ಟ್ಯತೆ ಹೀಗಿದೆ..

Latest Videos
Follow Us:
Download App:
  • android
  • ios