ಟೆಹ್ರನ್(ನ.10): ಇರಾನ್ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ವಿಧಿಸಿ ವರ್ಷಗಳಾಗುತ್ತ ಬಂದಿದೆ. ಇರಾನ್’ನೊಂದಿಗೆ ಯಾರೂ ವ್ಯಾಪಾರ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದ ಅಮೆರಿಕ, ಆ ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಮುಂದಾಗಿತ್ತು.

ಆದರೆ ನಿಸರ್ಗ ಮಾತ್ರ ಇಂತಹ ತಾರತಮ್ಯ  ಮಾಡುವುದಿಲ್ಲ. ಅದು ತನ್ನೊಡಲಲ್ಲಿರುವ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತದೆ. ತನ್ನಲ್ಲಿರುವ ಸಂಪತ್ತನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತದೆ.

ಇರಾನ್ ಟ್ಯಾಂಕರ್ ಹೊಡೆದ ಸೌದಿ: ಸಮುದ್ರಕ್ಕೆ ತೈಲ ಸೋರ್ತಿರಲಿಲ್ಲ ಇದ್ದಿದ್ರೆ ಬುದ್ದಿ!

ಅದರಂತೆ ಇರಾನ್’ನ ದಕ್ಷಿಣ ಭಾಗದಲ್ಲಿ ಬರೋಬ್ಬರಿ 50  ಬಿಲಿಯನ್ ಬ್ಯಾರೆಲ್’ನಷ್ಟು ಅಗಾಧ ಪ್ರಮಾಣದ ಕಚ್ಚಾತೈಲದ ನಿಕ್ಷೇಪ ಪತ್ತೆಯಾಗಿದೆ.

ಸದ್ಯ ಪತ್ತೆಯಾಗಿರುವ ಹೊಸ ಕಚ್ಚಾತೈಲ ನಿಕ್ಷೇಪದಿಂದಾಗಿ, ಇರಾನ್ ಒಟ್ಟಾರೆ ತೈಲ ನಿಕ್ಷೇಪದ ಪ್ರಮಾಣ ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದೆ. 

ಇರಾನ್ ದಿಗ್ಬಂಧನಕ್ಕೆ ಸಹಕರಿಸಿದ ‘ಗ್ರೇಟ್ ಫ್ರೆಂಡ್’ ಭಾರತ: ಅಮೆರಿಕದ ಇದೆಂತಾ ವರಾತ?

ಇರಾನ್ ಇದೀಗ ಸುಮಾರು 150 ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.

ಇರಾನ್‌ನಿಂದ ತೈಲ ಖರೀದಿಸಿದರೆ ದಿಗ್ಭಂಧನ : ಭಾರತಕ್ಕೆ ಅಮೆರಿಕ ಎಚ್ಚರಿಕೆ

ಈ ಕುರಿತು ಖುದ್ದು ಮಾಹಿತಿ ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೋಹಾನಿ, ದೇಶದ ದಕ್ಷಿಣ ಭಾಗದ ಖುಜೆಸ್ತಾನ್’ನಲ್ಲಿ 50  ಬಿಲಿಯನ್ ಬ್ಯಾರೆಲ್’ನಷ್ಟು ಅಗಾಧ ಪ್ರಮಾಣದ ಕಚ್ಚಾತೈಲದ ನಿಕ್ಷೇಪ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ