ಇರಾನ್ ಟ್ಯಾಂಕರ್ ಹೊಡೆದ ಸೌದಿ: ಸಮುದ್ರಕ್ಕೆ ತೈಲ ಸೋರ್ತಿರಲಿಲ್ಲ ಇದ್ದಿದ್ರೆ ಬುದ್ದಿ!

ಸೌದಿ ಅರೇಬಿಯಾದಲ್ಲಿ ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ| ಇರಾನ್ ತೈಲ ಹಡಗು ಧ್ವಂಸಗೊಳಿಸಿದ ಎರಡು ಕ್ಷಿಪಣಿಗಳು| ಸಮುದ್ರಕ್ಕೆ ಸೇರಿದ ಅಪಾರ ಪ್ರಮಾಣದ ಕಚ್ಚಾತೈಲ| ಸೌದಿಯ ಜೆಡ್ಡಾ ಬಂದರು ಸಮೀಪ ಇರಾನ್‌ ತೈಲ ಟ್ಯಾಂಕರ್ ಭಸ್ಮ|

Iran Tanker On Fire After Two Missile Hit the Vessel

ಜೆಡ್ಡಾ(ಅ.11): ಇರಾನ್‌ಗೆ ಸೇರಿದ ಕಚ್ಚಾತೈಲ ಹಡಗೊಂದನ್ನು ಸೌದಿ ಅರೇಬಿಯಾದಲ್ಲಿ ಹೊಡೆದುರುಳಿಸಲಾಗಿದ್ದು, ಅಪಾರ ಪ್ರಮಾಣದ ಕಚ್ಚಾತೈಲ ಸಮುದ್ರಕ್ಕೆ ಸೇರಿದ ಘಟನೆ ನಡೆದಿದೆ.

ಸೌದಿಯ ಜೆಡ್ಡಾ ಬಂದರು ಸಮೀಪ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ. ಏಕಾಏಕಿ ಎರಗಿದ ಎರಡು ಕ್ಷಿಪಣಿಗಳು ಇಡೀ ಹಡಗನ್ನು ಧ್ವಂಸಗೊಳಿಸಿದ್ದು, ಹಡಗಿನಲ್ಲಿದ್ದ ಕಚ್ಚಾತೈಲ ಸಮುದ್ರ ಪಾಲಾಗಿದೆ.

ರೆಡ್ ಸೀ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಹಡಗುಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಈ ಬಾರಿ ಇರಾನ್ ಟ್ಯಾಂಕರ್ ದಾಳಿಗೆ ತುತ್ತಾಗಿದೆ.

ಸದ್ಯ ಹಡಗಿನ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಇರಾನ್ ಮೂಲಗಳು ಖಚಿತಪಡಿಸಿವೆ. ಆದರೆ ಕ್ಷಿಪಣಿ ದಾಳಿಯಿಂದಾಗಿ ಸೌದಿ ಮತ್ತು ಇರಾನ್ ನಡುವೆ ಬಿಗುವಿನ ವ=ವಾತಾವರಣ ನಿರ್ಮಾಣವಾಗಿದೆ.

ಕಳೆದ ಸೆ.14ರಂದು ಸೌದಿಯ ತೈಲ ಸಂಗ್ರಹ ಘಟಕದ ಮೇಲೆ ದಾಳಿ ನಡೆಸಲಾಗಿತ್ತು. ಡ್ರೋಣ್ ಮೂಲಕ ಇಡೀ ಸಂಗ್ರಹ ಘಟಕವನ್ನು ದ್ವಂಸಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios