ರೈಟ್ ಟೈಮ್: ಇಂಡಿಯನ್ ಆಯಿಲ್ ಉದ್ಯೋಗಿ ಆಗಿರಿ ಫುಲ್ ಟೈಮ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 4:50 PM IST
IOCL Calls Online Application for Assistant Officers
Highlights

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ! ಹಣಕಾಸು ವಿಭಾಗದಲ್ಲಿ ಸಹಾಯಕ ಅಧಿಕಾರಿ ಹುದ್ದೆಗಳ ನೇಮಕಾತಿ!  ಪದವಿಧರರಿಗೆ ಉತ್ತಮ ಅವಕಾಶ ಒದಗಿಸಿದ ಇಂಡಿಯನ್ ಆಯಿಲ್ ಕಾರ್ಪೊರೇಶನ್! ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ 
 

ನವದೆಹಲಿ(ನ.8): ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಹಣಕಾಸು ವಿಭಾಗದಲ್ಲಿ ಸಹಾಯಕ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ www.iocl.com ನಲ್ಲಿ ಅರ್ಜಿ ಸಲ್ಲಿಸಬಹುದು. ನವೆಂಬರ್ 10, 2018ರ ಒಳಗಾಗಿ ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಬೇಕು.

ಅರ್ಹತೆ:
IOCL ಸಹಾಯಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನ ಶೇ.55 ರಷ್ಟು ಅಂಕಗಳೊಂದಿಗೆ ಯಾವುದಾದರೂ ವಿಷಯದಲ್ಲಿ ಪದವೀಧರನಾಗಿರಬೇಕು. ಅಲ್ಲದೆ ದೇಶದ ಯಾವುದಾದರೂ ಚಾರ್ಟರ್ಡ್ ಅಕೌಂಟ್ಸ್ ಇನ್ಸಿಟ್ಯೂಟ್, ಸಿಎಂಎಸ್ ಇನ್ಸಿಟ್ಯೂಟ್​ನಲ್ಲಿ 55% ಅಂಕ ಪಡೆದು ತೇರ್ಗಡೆ ಹೊಂದಿರಬೇಕು. ಅಲ್ಲದೇ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು 30 ವರ್ಷದೊಳಗಿರಬೇಕು. ಮೀಸಲಾತಿ ವರ್ಗಕ್ಕೆ ವಿನಾಯ್ತಿ ಇದೆ. ಪ್ರಮುಖವಾಗಿ ಒಬಿಸಿ ಕೆಟಗಿರಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಕೆಟಗಿರಿಗೆ 5 ವರ್ಷ, ಜಮ್ಮು ಮತ್ತು ಕಾಶ್ಮೀರದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಸೈನಿಕರಿಗೆ 5 ವರ್ಷ ವಿಆನಯ್ತಿ ನೀಡಲಾಗಿದೆ.


ಅರ್ಜಿ ಸಲ್ಲಿಸುವ ವಿಧಾನ:

A. www.iocl.com ವೆಬ್​ಸೈಟ್​ಗೆ​ ಭೇಟಿ ನೀಡಿ
B. 'Indian Oil for Careers' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
C. 'Latest Job Openings' ಎಂಬ ಆಯ್ಕೆಯನ್ನು ಒತ್ತಿ
D. 'Recruitment of Assistant Officers in Finance Function' ಕ್ಲಿಕ್ ಮಾಡಿ
E. 'Apply Online-New' ಮೇಲೆ ಕ್ಲಿಕ್ ಮಾಡಿ
F. ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ವಿವರಗಳನ್ನು ಭರ್ತಿ ಮಾಡಿ
G. ಎಲ್ಲಾ ವಿವರಗಳನ್ನು ಓದಿದ ನಂತರ ಸಬ್ಮಿಟ್​ ಬಟನ್ ಕ್ಲಿಕ್ ಮಾಡಿ
H. ಆನ್​ಲೈನ್ ​​ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ

ಗುಡ್ ಲಕ್..!

loader