Asianet Suvarna News Asianet Suvarna News

ಬರೋಬ್ಬರಿ 8.47 ಲಕ್ಷ ಕೋಟಿ ರೂ ನಷ್ಟ: ಹೂಡಿಕೆ ಬಲು ಕಷ್ಟ!

ಮತ್ತೆ ಕುಸಿದ ಮುಂಬೈ ಷೇರು ಮಾರುಕಟ್ಟೆ! ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಭಾರೀ ನಷ್ಟ! ಬರೋಬ್ಬರಿ 8.47 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು! 537 ಪಾಯಿಂಟ್‌ಗಳ ಕುಸಿತ ಕಂಡ ಬಿಎಸ್ಇ ಸೆನ್ಸೆಕ್ಸ್! ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಕುಸಿತ

Investors poorer by Rs 8.5 lakh crore as market turmoil
Author
Bengaluru, First Published Sep 25, 2018, 11:41 AM IST
  • Facebook
  • Twitter
  • Whatsapp

ಮುಂಬೈ(ಸೆ.25): ಷೇರು ಮಾರುಕಟ್ಟೆಯಲ್ಲಿ ಈಗಲೂ ಸಹ ಕರಡಿ ಕುಣಿತ ಮುಂದುವರಿದಿದೆ. ಬಿಎಸ್ಇ ಸೆನ್ಸೆಕ್ಸ್ 537 ಪಾಯಿಂಟ್ ಗಳ ಕುಸಿತ ದಾಖಲಿಸಿ ಎರಡು ತಿಂಗಳ ಕನಿಷ್ಟ 36,305.02ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 11,000 ಅಂಕಗಳಿಗೆ ಕುಸಿತ ಕಂಡಿದೆ. ಬ್ಯಾಂಕ್ ಹಾಗೂ ಆಟೋ ಕ್ಷೇತ್ರದ ಸ್ಟಾಕ್ ಗಳಲ್ಲಿ ಭಾರೀ ನಷ್ಟದ ಕಾರಣ ಈ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.

30 ಷೇರುಗಳ ಕೀ ಇಂಡೆಕ್ಸ್ 536.58 ಅಂಕಗಳನ್ನು  ಕಳೆದುಕೊಂಡು ಶೇ. 1.46 ರಷ್ಟು ಕುಸಿತ ದಾಖಲಿಸಿದೆ.  36,305.02ಕ್ಕೆ ತಲುಪಿತ್ತು. ಇದು ಕಳೆದ ಫೆಬ್ರವರಿ ಮಾಹೆಯಲ್ಲಿ ಆಗಿದ್ದ ಕುಸಿತದ ಬಳಿಕ ನಡೆದ ಮಹಾ ಪತನ ಎಂದು ದಾಖಲಾಗಿದೆ. ಫೆಬ್ರವರಿ 6ರಂದು ನಡೆದ ವಹಿವಾಟಿನಲ್ಲಿ ಮಾರುಕಟ್ಟೆಯು 561.22 ಅಂಕಗಳನ್ನು ಕಳೆದುಕೊಂಡಿತ್ತು.

ಐದು ದಿನಗಳಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ರೂ ನಷ್ಟವಾಗಿದೆ. ಬಿಎಸ್ಇ  ಸೆನ್ಸೆಕ್ಸ್ ಸೂಚ್ಯಾಂಕ ಕಳೆದ ವಾರದಿಂದ ಸುಮಾರು ಶೇ 5 ರಷ್ಟು ಕುಸಿತ ಕಂಡಿದೆ.

ಕಳೆದ ನಾಲ್ಕು ಸೆಷನ್ ಗಳಲ್ಲಿ ಸೂಚ್ಯಾಂಕವು ಒಟ್ಟಾರೆ 1,249.04 ಅಂಕಗಳನ್ನು ಕಳೆದುಕೊಂಡಿದೆ. ಜಾಗತಿಕ ವಾಣಿಜ್ಯ ಸಮರ, ರೂಪಾಯಿ ಮೌಲ್ಯ ಕುಸಿತ, ಏಹ್ಯಾ ಷೇರು ಮರುಕಟ್ಟೆಗಳ ದುರ್ಬಲ ಸ್ಥಿತಿ ಇದೇ ಮುಂತಾದ ಕಾರಣದಿಂದ ಮಾರುಕಟ್ಟೆ ವಹಿವಾಟಿನಲ್ಲಿ ಈ ಬಗೆಯ ಏರಿಳತವಾಗಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios