ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 667 ಅಂಕ ಕುಸಿದು 74502 ಅಂಕಗಳಲ್ಲಿ ಮುಕ್ತಾಯವಾಗಿದೆ.  

ಮುಂಬೈ (ಮೇ.30): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 667 ಅಂಕ ಕುಸಿದು 74502 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 183 ಅಂಕ ಕುಸಿದು 22704 ಅಂಕದಲ್ಲಿ ಮುಕ್ತಾಯವಾಗಿದೆ. ಜಾಗತಿಕ ಷೇರುಪೇಟೆಯ ನಕಾರಾತ್ಮಕ ಸುಳಿವು, ಬ್ಯಾಂಕಿಂಗ್‌ ಸೇರಿದಂತೆ ಪ್ರಮುಖ ವಲಯಗಳ ಷೇರುಬೆಲೆ ಕುಸಿತ ಸೆನ್ಸೆಕ್ಸ್‌ ಭಾರೀ ಕುಸಿತಕ್ಕೆ ಕಾರಣವಾಗಿದೆ. 2 ದಿನಗಳ ಹಿಂದೆ ಸೂಚ್ಯಂಕ 75000 ಅಂಕಗಳ ಗಡಿ ದಾಟಿತ್ತಾದರೂ, ಒಟ್ಟಾರೆ 4 ದಿನಗಳಲ್ಲಿ 1506 ಅಂಕ ಕುಸಿತ ಕಂಡಿದೆ. ಪರಿಣಾಮ ಹೂಡಿಕೆದಾರರ 5.12 ಲಕ್ಷ ಕೋಟಿ ರು. ಸಂಪತ್ತು ಕರಗಿ ಹೋಗಿದೆ.

ಮಧುಮೇಹಿಗಳಿಗೆ ಸಂತಸದ ಸುದ್ದಿ, ಸಕ್ಕರೆ ಕಾಯಿಲೆ ಗುಣಪಡಿಸಬಹುದೆಂದು ಚೀನಾ ವೈದ್ಯರ ಘೋಷಣೆ!

ಚುನಾವಣಾ ಫಲಿತಾಂಶ ಜೂನ್‌ 4ರಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ಷೇರುಗಳ ಮಾರಾಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ಸೂಚ್ಯಾಂಕ ಇಳಿಕೆಯ ಹಾದಿ ಹಿಡಿಯಿತು. ಕಳೆದ ಎರಡು ದಿನಗಳ ಹಿಂದೆ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 76000 ಗಡಿಯನ್ನು ಮುಟ್ಟಿ ದಾಖಲೆ ಬರೆದಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಜಾಗತಿಕ ಮಾರುಕಟ್ಟೆಗಳು ಏರುಗತಿಯಲ್ಲಿರುವುದರಿಂದ ಸೆನ್ಸೆಕ್ಸ್‌ ಏರಿಳಿತ ಕಾಣುತ್ತಿದೆ. 75000ದಿಂದ 76000 ಗಡಿಯನ್ನು ಮುಟ್ಟಲು ಸೆನ್ಸೆಕ್ಸ್‌ 31 ವಹಿವಾಟು ದಿನಗಳನ್ನು ತೆಗೆದುಕೊಂಡಿದೆ. ಆದರೆ 74 ಸಾವಿರದಿಂದ 75 ಸಾವಿರ ಗಡಿಯನ್ನು ಕೇವಲ 21 ವಹಿವಾಟಿನ ದಿನಗಳಲ್ಲಿ ತಲುಪಿತ್ತು ಎಂಬುದು ಗಮನಾರ್ಹ. ಆದರೆ ಈಗ ಮತ್ತೆ ಮಾರುಕಟ್ಟೆ ಬಿದ್ದು ಹೋಗಿದೆ.

ಪ್ರಿಯಾಂಕಾ ಚೋಪ್ರಾ ಜತೆಗೆ ಸಂಬಂಧದಲ್ಲಿದ್ದನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಸ್ಸಾರಿ ಕೇಳಿದ ಶಾರುಖ್ ಖಾನ್!

ಟೆಕ್ ಮಹೀಂದ್ರ, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಅಸ್ಟ್ರಾಟೆಕ್ ಸಿಮೆಂಟ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಷೇರಿನ ಮೌಲ್ಯವು ಕುಸಿತ ಕಂಡಿದ್ದರೆ, ಪವರ್ ಗ್ರಿಡ್, ಸನ್ ಫಾರ್ಮಾ, ನೆಲ್ಲೆ ಇಂಡಿಯಾ, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್ ಷೇರಿನ ಮೌಲ್ಯದಲ್ಲಿ ಏರಿಕೆ ಕಂಡಿತು.