Asianet Suvarna News Asianet Suvarna News

ಅಂಚೆ ಕಚೇರಿ ಯೋಜನೆ: ದಿನಕ್ಕೆ ಕೇವಲ 95ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 14 ಲಕ್ಷ ರೂ.!

ಗ್ರಾಮ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯನ್ನು ಅಂಚೆ ಇಲಾಖೆ (Postal department) 1995ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಹೂಡಿಕೆದಾರರಿಗೆ (Investors) 6 ವಿವಿಧ ಜೀವವಿಮಾ ಪ್ಲ್ಯಾನ್ಗಳು ಲಭ್ಯವಿದ್ದು,ಅವುಗಳಲ್ಲಿ ಒಂದನ್ನು ಆರಿಸಲು ಅವಕಾಶವಿದೆ.

Invest Rs 95 daily in Post office and earn 14 lakh
Author
Bangalore, First Published Oct 31, 2021, 11:56 AM IST

ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೂಡಿಕೆ (Investment) ವಿಷಯ ಬಂದಾಗ ಮೊದಲು ನೆನಪಾಗೋದೇ ಅಂಚೆ ಕಚೇರಿ (Post Office). ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್ಗೆ (Returns)ಅಂಚೆ ಕಚೇರಿಯಲ್ಲಿಅನೇಕ ಯೋಜನೆಗಳಿವೆ. ಇವುಗಳಲ್ಲಿ ಗ್ರಾಮ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮಾಯೋಜನೆ(Life Insurance Scheme) ಕೂಡ ಒಂದು. ಈ ಯೋಜನೆಯಡಿಯಲ್ಲಿ ನಿಮ್ಮ ಹೂಡಿಕೆಗೆ ಅಂಚೆ ಇಲಾಖೆ ಉತ್ತಮ ರಿಟರ್ನ್ಸ್(Returns) ನೀಡೋ ಜೊತೆ ಇತರ ಅನೇಕ ಪ್ರಯೋಜನಗಳನ್ನುಕೂಡ ಒದಗಿಸುತ್ತದೆ. 

ಇಂದು World Savings Day: ಇಂದಿನ ಉಳಿತಾಯದಲ್ಲಿದೆ ನಾಳೆಯ ನೆಮ್ಮದಿ!

95 ರೂ. ಹೂಡಿಕೆ (Invest) ಮಾಡಿದ್ರೆ 14 ಲಕ್ಷ ರೂ.

ಗ್ರಾಮ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯನ್ನು ಅಂಚೆ ಇಲಾಖೆ (Postal department) 1995ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಹೂಡಿಕೆದಾರರಿಗೆ (Investors) 6 ವಿವಿಧ ಜೀವವಿಮಾ ಪ್ಲ್ಯಾನ್ಗಳು ಲಭ್ಯವಿದ್ದು,ಅವುಗಳಲ್ಲಿ ಒಂದನ್ನು ಆರಿಸಲು ಅವಕಾಶವಿದೆ.ಇವುಗಳಲ್ಲಿ ಒಂದು ಪ್ಲ್ಯಾನ್ನಲ್ಲಿ (Plan)ದಿನಕ್ಕೆ ಕೇವಲ 95 ರೂ. ಹೂಡಿಕೆ (Invest)ಮಾಡಿದ್ರೆ ಈ Postal scheme maturity ಬಳಿಕ14 ಲಕ್ಷ ರೂ. ಲಭಿಸುತ್ತದೆ. 

ಈ ಯೋಜನೆ ವಿಶೇಷತೆ ಏನು?

ಗ್ರಾಮ ಸುಮಂಗಲ ಪಾಲಿಸಿ (Policy) 20 ಹಾಗೂ 15 ವರ್ಷಗಳ ಮೆಚ್ಯುರಿಟಿ (Maturity) ಅವಧಿ ಹೊಂದಿದೆ.ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ 45 ವರ್ಷ ಹಾಗೂ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. 20 ವರ್ಷ ಅವಧಿಯ ಪಾಲಿಸಿಯಲ್ಲಿ 6, 9 ಹಾಗೂ 12 ವರ್ಷ ಪೂರ್ಣಗೊಂಡ ಬಳಿಕ ಶೇ.20-20 money back ಪಡೆಯಲು ಅವಕಾಶವಿದೆ. ಉಳಿದ ಶೇ. 40 maturity ಸಮಯದಲ್ಲಿ bonus ರೂಪದಲ್ಲಿ ನೀಡಲಾಗುತ್ತದೆ. ಅದೇರೀತಿ 15 ವರ್ಷಗಳ ಅವಧಿಯ ಪಾಲಿಸಿಯಲ್ಲಿ8,12 ಹಾಗೂ 16 ವರ್ಷಗಳ ಅವಧಿಗೆ ಶೇ.20-20 money back ಲಭ್ಯವಿದೆ. ಉಳಿದ ಶೇ.40 maturity ಸಮಯದಲ್ಲಿbonus ರೂಪದಲ್ಲಿ ನೀಡಲಾಗುತ್ತದೆ.

Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

ದಿನದ ಪ್ರೀಮಿಯಂ (Premium) 95ರೂ.

25 ವರ್ಷದ ಒಬ್ಬ ವ್ಯಕ್ತಿ 20 ವರ್ಷಗಳ ಅವಧಿಯ 7 ಲಕ್ಷ ರೂ. ಮೊತ್ತದ ಗ್ರಾಮ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾನೆ ಎಂದು ಭಾವಿಸೋಣ. ಪ್ರತಿ ತಿಂಗಳು ಈ ಪಾಲಿಸಿಗೆ ಕಟ್ಟಬೇಕಾದ ಪ್ರೀಮಿಯಂ (Premium) 2,853 ರೂ. ಅಂದ್ರೆ ಪ್ರತಿದಿನ ಕೇವಲ 95 ರೂ. Quaterly premium 8,449 ರೂ.,Half year premium16,715 ರೂ. ಹಾಗೂ annual premium 32,735 ರೂ.

ಇಪಿಎಫ್‌ಗೆ ಹೊಂದಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್

14 ಲಕ್ಷ ರೂ. ಗಳಿಸೋದು ಹೇಗೆ?

ಈ ಪಾಲಿಸಿಯಲ್ಲಿ 8,12 ಹಾಗೂ 16ನೇ ವರ್ಷಗಳಲ್ಲಿ ಶೇ.20-20 ಲೆಕ್ಕದಲ್ಲಿ1.4-1.4ಲಕ್ಷ ರೂ. ಪಾವತಿಸಲಾಗುತ್ತದೆ. ಅಂತಿಮವಾಗಿ 20ನೇ ವರ್ಷದಲ್ಲಿ 2.8 ಲಕ್ಷ ರೂ. ನೀಡಲಾಗುತ್ತದೆ. ಸಾವಿರ ರೂಪಾಯಿಗೆ ವಾರ್ಷಿಕ ಬೋನಸ್ (annual bonus) 48 ರೂ. ಹೀಗಾಗಿ 7 ಲಕ್ಷ ರೂ.ಗೆ  ಸಿಗೋ ಬೋನಸ್(bonus) 33,600 ರೂ.ಪಾಲಿಸಿಯ ಪೂರ್ಣ ಅವಧಿಗೆ ಅಂದ್ರೆ 20 ವರ್ಷಗಳಿಗೆ ಸಿಗೋ ಬೋನಸ್ (bonus) 6.72 ಲಕ್ಷ ರೂ. ಪಾಲಿಸಿ ಮೊತ್ತ 7 ಲಕ್ಷ ರೂ. ಹಾಗೂ ಬೋನಸ್ (bonus) 6.72 ಲಕ್ಷ ರೂ. ಸೇರಿಸಿದ್ರೆ 20 ವರ್ಷಕ್ಕೆ ಒಟ್ಟು ಲಾಭ (Profit)) 13.72ಲಕ್ಷ ರೂ.ಲಭಿಸುತ್ತದೆ. ಇದ್ರಲ್ಲಿ 4.2ಲಕ್ಷ ರೂ. ಮನಿ ಬ್ಯಾಕ್(Money back) ರೂಪದಲ್ಲಿ ಮೊದಲೇ ಹೂಡಿಕೆದಾರನಿಗೆ (Investor) ಲಭಿಸುತ್ತದೆ. ಉಳಿಕೆ 9.5ಲಕ್ಷ ರೂ. ಪಾಲಿಸಿ ಮೆಚ್ಯುರಿಟಿಯಾದ (maturity)ತಕ್ಷಣ ನೀಡಲಾಗುತ್ತದೆ. 

Follow Us:
Download App:
  • android
  • ios