Asianet Suvarna News Asianet Suvarna News

ಸಣ್ಣ ಉಳಿತಾಯ ಬಡ್ಡಿ ಭಾರಿ ಕಡಿತ: 46 ವರ್ಷದ ಕನಿಷ್ಠ!

ಸಣ್ಣ ಉಳಿತಾಯ ಬಡ್ಡಿ ಭಾರಿ ಕಡಿತ| ಪಿಪಿಎಫ್‌ 6.4%ಕ್ಕಿಳಿಕೆ| 46 ವರ್ಷದ ಕನಿಷ್ಠ!

Interest Rates On Small Savings Cut PPF At Lowest In Over 4 Decades pod
Author
Bangalore, First Published Apr 1, 2021, 7:36 AM IST

ನವದೆಹಲಿ(ಏ.01): ಸಣ್ಣ ಉಳಿತಾಯಗಾರರಿಗೆ ಅತಿದೊಡ್ಡ ಶಾಕ್‌ ನೀಡಿರುವ ಕೇಂದ್ರ ಸರ್ಕಾರ, ಗುರುವಾರ (ಏ.1)ದಿಂದ ಜೂ.30ರವರೆಗೆ ಅನ್ವಯ ಆಗುವಂತೆ ಬಡ್ಡಿ ದರಗಳನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಉಳಿತಾಯ ಠೇವಣಿಗೆ ಶೇ.4 ಇದ್ದ ಬಡ್ಡಿದರ ಇನ್ನು ಶೇ.3.5 ಆಗಲಿದೆ. 1 ವರ್ಷದ ಠೇವಣಿ ಬಡ್ಡಿದರ ಶೇ.5.5ರಿಂದ ಶೇ.4.4ಕ್ಕೆ, 2 ವರ್ಷದ ಠೇವಣಿ ಬಡ್ಡಿದರ ಶೇ.5.5ರಿಂದ ಶೇ.5ಕ್ಕೆ, 3 ವರ್ಷದ ಠೇವಣಿ ಬಡ್ಡಿದರ ಶೇ.5.5ರಿಂದ ಶೇ.5.1ಕ್ಕೆ ಹಾಗೂ 5 ವರ್ಷದ ಠೇವಣಿ ಬಡ್ಡಿದರ ಶೇ.6.7ರಿಂದ ಶೇ.5.8ಕ್ಕೆ ಇಳಿದಿದೆ.

ಇನ್ನು 5 ವರ್ಷದ ಆರ್‌.ಡಿ. ಬಡ್ಡಿದರ ಶೇ.5.8ರಿಂದ ಶೇ.5.3ಕ್ಕೆ ಇಳಿಕೆಯಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿಯನ್ನು ಶೇ.7.4ರಿಂದ ಶೇ.6.5ಕ್ಕೆ, ಮಾಸಿಕ ಆದಾಯ ಖಾತೆಯ ಬಡ್ಡಿ ಶೇ.6.6ರಿಂದ ಶೇ.5.7ಕ್ಕೆ, ನ್ಯಾಷನಲ್‌ ಸೇವಿಂಗ್‌ ಸರ್ಟಿಫಿಕೇಟ್‌ (ಎನ್‌ಎಸ್‌ಸಿ) ಬಡ್ಡಿದರ ಶೇ.6.8ರಿಂದ ಶೇ.5.9ಕ್ಕೆ ಹಾಗೂ ಪಿಪಿಎಫ್‌ ಬಡ್ಡಿದರ ಶೇ.7.1ರಿಂದ ಶೇ.6.4ಕ್ಕೆ ಇಳಿಕೆ ಮಾಡಲಾಗಿದೆ. ಪಿಪಿಎಫ್‌ ಬಡ್ಡಿ ದರ 46 ವರ್ಷಗಳಲ್ಲೇ ಕನಿಷ್ಠವಾಗಿದೆ.

ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ

ಇದೇ ವೇಳೆ, ಹೂಡಿಕೆ ಹಣ ದ್ವಿಗುಣವಾಗುವ ಕಿಸಾನ್‌ ವಿಕಾಸ್‌ ಪತ್ರಕ್ಕೆ ಶೇ.6.9ರ ಬದಲು ಶೇ.6.2ರ ಬಡ್ಡಿ ಅನ್ವಯವಾಗಲಿದ್ದು, ಮೆಚ್ಯುರಿಟಿ ಅವಧಿ 124 ತಿಂಗಳ ಬದಲು 138 ತಿಂಗಳಿಗೆ ಏರಿಕೆಯಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಇನ್ನು ಶೇ.7.9ರ ಬದಲು ಕೇವಲ ಶೇ.6.9ರ ಬಡ್ಡಿ ಲಭಿಸಲಿದೆ.

Follow Us:
Download App:
  • android
  • ios