ನವದೆಹಲಿ(ಜ.01): ಬ್ಯಾಂಕ್‌ನಲ್ಲಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಗಣನೀಯವಾಗಿ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪಿಪಿಎಫ್‌, ಎನ್‌ಎಸ್‌ಸಿ ಮುಂತಾದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 2021ರ ಜನವರಿ - ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಇಳಿಕೆ ಮಾಡದಿರಲು ನಿರ್ಧರಿಸಿದೆ.

ಈ ಹಿಂದಿನ ತ್ರೈಮಾಸಿಕದಂತೆ ಪಿಪಿಎಫ್‌ಗೆ ಶೇ.7.1, ಎನ್‌ಎಸ್‌ಸಿಗೆ ಶೇ.6.8, ಹಿರಿಯ ನಾಗರಿಕರ 5 ವರ್ಷದ ಉಳಿತಾಯ ಯೋಜನೆಗೆ ಶೇ.7.4, ಉಳಿತಾಯ ಠೇವಣಿಗೆ ಶೇ.4, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.7.6, ಕಿಸಾನ್‌ ವಿಕಾಸ ಪತ್ರಕ್ಕೆ ಶೇ.6.9, 1-5 ವರ್ಷಗಳ ನಿಶ್ಚಿತ ಠೇವಣಿಗೆ ಶೇ.5.5-6.7 ಹಾಗೂ 5 ವರ್ಷಗಳ ಆರ್‌ಡಿಗೆ ಶೇ.5.8ರ ಬಡ್ಡಿ ದರವೇ ಮುಂದುವರೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಆದಾಯ ತೆರಿಗೆ ವಿವರ ಗಡುವು ವಿಸ್ತರಣೆ!

ಇನ್ನು, ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್‌) ಸಂಸ್ಥೆ 2019-20ನೇ ಸಾಲಿಗೆ ಈ ಹಿಂದೆಯೇ ನಿಗದಿಪಡಿಸಿದ್ದಂತೆ ತನ್ನ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ಪಾವತಿಸಲು ಆರಂಭಿಸಿದ್ದು, ಜನವರಿ 1ಕ್ಕೆ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದೆ.