ಭಾನುವಾರ ಬೆಂಗಳೂರಿಗೆ ಆಗಮಿಸಿದ ನಂತರ ರಾಜಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಮೋದಿ ಈ ಐಕಾನ್‌ಗಳನ್ನು ಭೇಟಿ ಮಾಡಿದರು. ಕನ್ನಡ, ಸಂಸ್ಕೃತಿ, ಸಿನಿಮಾ, ರಂಗಭೂಮಿ, ಚಲನಚಿತ್ರೋದ್ಯಮ, ಕ್ರೀಡೆ, ಕ್ರೀಡಾ ಮೂಲಸೌಕರ್ಯ, ಕ್ರಿಕೆಟ್, ಯುವ ಸಬಲೀಕರಣ, ಪ್ರತಿಭೆ, ವ್ಯಾಪಾರ, ಮತ್ತು ಅವಕಾಶಗಳಿಂದ ಹಿಡಿದು ವಿವಿಧ ವಿಷಯಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲಾಯಿತು.

ಬೆಂಗಳೂರು (ಫೆಬ್ರವರಿ 13, 2023): ಪ್ರಧಾನಿ ಮೋದಿ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಹಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ. ಸ್ಯಾಮಡಲ್‌ವುಡ್‌ ತಾರೆಯರು ಮಾತ್ರವಲ್ಲದೆ, ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಜತೆಗೆ, ಅಯ್ಯೋ ಶ್ರದ್ಧಾ ಖ್ಯಾತಿಯ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಕಾಮಿಡಿಯನ್ ಹಾಗೂ ಆರ್‌ಜೆಯಾಗಿದ್ದ ಶ್ರದ್ಧಾ ಅವರನ್ನು ಭೇಟಿಯಾಗಿದ್ದರೆ. ಇವರ ಜತೆಗೆ ಪ್ರಧಾನಿ ಕೆಲ ಉದ್ಯಮಿಗಳನ್ನು ಸಹ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿಯನ್ನು ಷೇರು ಮಾರುಕಟ್ಟೆಯ ಹಣಕಾಸು ಸೇವಾ ಸಂಸ್ಥೆಯ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಭೇಟಿಯಾಗಿದ್ದಾರೆ. ಅಲ್ಲದೆ, ಅವರ ಭೇಟಿಯ ನಂತರ ಪ್ರೇರಿತರಾದ ಝೆರೋದಾ ಸಂಸ್ಥಾಪಕ ನಿತಿನ್‌ ಕಾಮತ್, ತಾನು ಸಹ 72 ವರ್ಷ ವಯಸ್ಸಿನಲ್ಲಿ ಪ್ರಧಾನಿ ಮೋದಿಯವರಂತೆ ಇರಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ಅಂದರೆ, ನಿತಿನ್ ಕಾಮತ್‌ (Nitin Kamath) ಪ್ರಧಾನಿಯಾಗುವ (Prime Minister) ಕನಸು ಕಾಣ್ತಿದ್ದಾರೆ ಅನ್ಕೊಂಡ್ರಾ, ಇಲ್ಲ, ನಿತಿನ್ ಕಾಮತ್ ಅವರು ಸೋಮವಾರ ತಮ್ಮ ಹೊಸ ಫಿಟ್‌ನೆಸ್ ಗುರಿಯನ್ನು (Fitness Goal) ಘೋಷಿಸಿದ್ದಾರೆ. ತಾನು 72 ವರ್ಷ ವಯಸ್ಸಿನವರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಂತೆ ಕೆಲಸ ಮಾಡಲು, ಅವರಂತೆ ಫಿಟ್‌ ಆಗಿ ಕಾಣಲು ಫಿಟ್ನೆಸ್‌ (Fitness) ಕಾಪಾಡಿಕೊಳ್ಳುವ ಗುರಿ ಹೊಂದುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ಜತೆ ಭೋಜನಾಕೂಟದಲ್ಲಿ ಪಾಲ್ಗೊಂಡ ಕನ್ನಡದ ದಿಗ್ಗಜ ಕ್ರಿಕೆಟಿಗರು..!

ನಿತಿನ್‌ ಕಾಮತ್ ಅವರು ಭಾನುವಾರ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪ್ರಧಾನಿ ಅವರನ್ನು ಭೇಟಿಯಾದ ನಂತರ ‘’ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಗೌರವದ ವಿಚಾರ" ಎಂದು ನಿತಿನ್‌ ಕಾಮತ್ ಟ್ವೀಟ್ (Tweet) ಮಾಡಿದ್ದು, ಪ್ರಧಾನಿ ಮೋದಿಯವರನ್ನು ಸಹ ಟ್ಯಾಗ್ ಮಾಡಿದ್ದಾರೆ.

Scroll to load tweet…

ಅಲ್ಲದೆ, ಅವರ ಎಲ್ಲಾ ಸಭೆಗಳು ಮತ್ತು ದಿನದ ಪ್ರಯಾಣದ ಹೊರತಾಗಿಯೂ 30 ನಿಮಿಷಗಳ ಕಾಲ ತನ್ನೊಂದಿಗೆ ಮತ್ತು ತಮ್ಮ ಸಹೋದರನೊಂದಿಗೆ ಸಂವಾದ ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿಯನ್ನು ಶ್ಲಾಘಿಸಿದರು. ಹಾಗೂ, ನನ್ನ ಹೊಸ ಆರೋಗ್ಯ ಮತ್ತು ಫಿಟ್‌ನೆಸ್ ಗುರಿ ಅಂದರೆ ನನಗೆ 72 ವರ್ಷ ವಯಸ್ಸಾದಾಗ ನಾನೂ ಸಹ ಅವರಷ್ಟು ಉತ್ಸಾಹದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತಾಗಬೇಕು ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಸ್ಯಾಂಡಲ್‌ವುಡ್ ಸ್ಟಾರ್ ಜೊತೆ ಮೋದಿ; 'ನನ್ನನ್ನು ನೋಡಿ ಅಯ್ಯೋ..' ಅಂದ್ರು ಎಂದ RJ ಶ್ರದ್ಧಾ

ಇನ್ನು, ಪ್ರಧಾನಿ ಮೋದಿ ತರುಣ್ ಮೆಹ್ತಾ, (ಅಥೆರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ) ವನ್ನು ಸಹ ಭೇಟಿಯಾಗಿರುವುದು ವಿಶೇಷ. ಏರೋ ಇಂಡಿಯಾ ಶೋನ 14 ನೇ ಆವೃತ್ತಿಯನ್ನು ಉದ್ಘಾಟಿಸುವ ಮೊದಲು, ಪ್ರಧಾನಿ ಮೋದಿ ಭಾನುವಾರ ರಾತ್ರಿ ಖ್ಯಾತ ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ, ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿದ್ದರು.

Scroll to load tweet…

ಭಾನುವಾರ ಬೆಂಗಳೂರಿಗೆ ಆಗಮಿಸಿದ ನಂತರ ರಾಜಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಮೋದಿ ಈ ಐಕಾನ್‌ಗಳನ್ನು ಭೇಟಿ ಮಾಡಿದರು. ಕನ್ನಡ, ಸಂಸ್ಕೃತಿ, ಸಿನಿಮಾ, ರಂಗಭೂಮಿ, ಚಲನಚಿತ್ರೋದ್ಯಮ, ಕ್ರೀಡೆ, ಕ್ರೀಡಾ ಮೂಲಸೌಕರ್ಯ, ಕ್ರಿಕೆಟ್, ಯುವ ಸಬಲೀಕರಣ, ಪ್ರತಿಭೆ, ವ್ಯಾಪಾರ, ಮತ್ತು ಅವಕಾಶಗಳಿಂದ ಹಿಡಿದು ವಿವಿಧ ವಿಷಯಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲಾಯಿತು. ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ, ಮತ್ತು ದಿವಂಗತ ನಟ ಪುನೀತ್‌ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿ ಶ್ರದ್ಧಾ ಜೈನ್ ಅವರು ರಾಜಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಫಿಲ್ಮ್​ ಸಿಟಿ ನಿರ್ಮಾಣ ಆಗಬೇಕು: ನಮೋ ಮುಂದೆ ಸಿನಿಮಾರಂಗದ ಗಣ್ಯರ ಬೇಡಿಕೆ

ಇನ್ನು, ನಿತಿನ್‌ ಕಾಮತ್‌ ಅವರ ಟ್ವೀಟ್‌, ಫೋಟೋ ನೋಡಿದ ಅವರ ಫಾಲೋವರ್‌ಗಳು ಆಶ್ಚರ್ಯ ಚಕಿತರಾಗಿದ್ದು, ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿದ ಅವರನ್ನು ಅಭಿನಂದಿಸಿದರು. "ಒಂದು ಫೋಟೋದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳು. ಒಬ್ಬರು ರಾಷ್ಟ್ರವನ್ನು ಬದಲಾಯಿಸಿದರು. ಇನ್ನೊಬ್ಬರು ಸ್ಟಾಕ್ ಬ್ರೋಕಿಂಗ್ ಉದ್ಯಮವನ್ನು ಬದಲಾಯಿಸಿದರು" ಎಂದು ನೆಟ್ಟಿಗರೊಬ್ಬರು ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.