ನವದೆಹಲಿ(ಜ.12): ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂ. ಇಳಿದಿದೆ. 

ಈ ಮಧ್ಯೆ 8,260 ಕೋಟಿ ರೂ. ಷೇರು ಖರೀದಿ ಯೋಜನೆಯನ್ನು ಇನ್ಫೋಸಿಸ್ ಘೋಷಿಸಿದೆ. ಸಂಸ್ಥೆ 2017ರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ  5.129 ಕೋಟಿ ನಿವ್ಳಳ ಲಾಭ ಗಳಿಸಿತ್ತು.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್ 2018 ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯ ಆದಾಯದಲ್ಲಿ ಹೆಚ್ಚಳವಾಗಿದೆ.  

ಪ್ರತಿ ಷೇರು ಬೆಲೆ 800 ರೂ.ಗೆ ಮೀರದ ಬೆಲೆಗೆ  8,260 ಕೋಟಿ ರೂ. ವರೆಗೆ ಮುಕ್ತ ಮಾರುಕಟ್ಟೆ ಮಾರ್ಗದಿಂದ ಇಕ್ವಿಟಿ ಷೇರುಗಳ ಮರು ಖರೀದಿಗೆ ಆಡಳಿತ ಮಂಡಳಿ  ಅನುಮೋದನೆ ನೀಡಿದೆ. ಅಲ್ಲದೇ, ಇನ್ಪೋಸಿಸ್  ಪ್ರತಿಷೇರಿನ ಮೇಲೆ 4 ರೂ. ವಿಶೇಷ ಡಿವಿಡೆಂಡ್  ಘೋಷಿಸಲಾಗಿದೆ. 

ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.10.1 ರಷ್ಟು ಪ್ರತಿವರ್ಷ ಬೆಳವಣಿಗೆಯಾಗುತ್ತಿದೆ ಎಂದು ಇನ್ಫೋಸಿಸ್  ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ  ಸಾಲಿಲ್ ಪರೇಖ್ ಹೇಳಿದ್ದಾರೆ.

ಗುಡ್ ನ್ಯೂಸ್: ಶೇ.5 ರಷ್ಟು ವೇತನ ಹೆಚ್ಚಿಸಿದ ಇನ್ಫಿ!

ಲಾಭ ಇದೆ, ಷೇರು ಮೌಲ್ಯ ಇಲ್ಲ: ಇನ್ಫೋಸಿಸ್ ಹೂಡಿಕೆದಾರನಿಗೆ ಬೇವು ಬೆಲ್ಲ!