Asianet Suvarna News Asianet Suvarna News

ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್‌ಲ್ಲಿ ಇದೊಂದೇ ‘ನೆಗೆಟಿವ್’ ಆಗಿದ್ದೇಗೆ?

ಮೋದಿ ಸರ್ಕಾರಕ್ಕೆ ಎದುರಾಯ್ತು ಸಣ್ಣ ಹಿನ್ನೆಡೆ| ಕೇಂದ್ರ ಅಂಕಿ ಸಂಖ್ಯೆಗಳ ಕಚೇರಿ ವರದಿ ಬಿಡುಗಡೆ| ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಕುಸಿತ| ಉತ್ಪಾದನಾ ವಲಯ, ಬಂಡವಾಳ ಸರಕು ಕ್ಷೇತ್ರದಲ್ಲಿನ ಕುಸಿತ ಕಾರಣ| ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಶೇ.5.1ರಷ್ಟು ಬೆಳವಣಿಗೆ

Industrial Growth Falls to 17-Month Low
Author
Bengaluru, First Published Jan 12, 2019, 2:10 PM IST

ನವದೆಹಲಿ(ಜ.12): 2018ರ ನವೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ(ಐಐಪಿ) ಶೇ.0.5 ಕುಸಿದಿದ್ದು, ಇದು ಕಳೆದ 17 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

ಕೇಂದ್ರ ಅಂಕಿ ಸಂಖ್ಯೆಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಐಪಿಪಿ ಶೇ.7.9ಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಉತ್ಪಾದನಾ ವಲಯ, ವಿಶೇಷವಾಗಿ ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ಕುಸಿತ ಮತ್ತು ಬಂಡವಾಳ ಸರಕು ಕ್ಷೇತ್ರದಲ್ಲಿನ ಕುಸಿತ ಎನ್ನಲಾಗಿದೆ.

2017ರ ನವೆಂಬರ್ ನಲ್ಲಿ ಶೇ.8.5ಕ್ಕೆ ಏರಿಕೆಯಾಗಿದ್ದ ಐಐಪಿ ಅಕ್ಟೋಬರ್ 2018ರಲ್ಲಿ ಶೇ.8.4ಕ್ಕೆ ಕುಸಿದಿತ್ತು. ಈಗ ಮತ್ತೆ ಶೇ.05ರಷ್ಟು ಕುಸಿದಿದೆ. 

ಗಣಿಗಾರಿಕೆ ವಲಯದ ಉತ್ಪಾದನೆ ಶೇ. 2.7ರಷ್ಟು ಹೆಚ್ಚಳ ಕಂಡಿದ್ದು, 2017ರ ನವೆಂಬರ್ ನಲ್ಲಿ ಈ ಪ್ರಮಾಣ ಶೇ. 1.4 ರಷ್ಟು ಆಗಿತ್ತು. ಇನ್ನು ವಿದ್ಯುತ್ ಉತ್ಪಾದನೆ ಕ್ಷೇತ್ರ ಶೇ.5.1ರಷ್ಟು ಬೆಳವಣಿಗೆ ಸಾಧಿಸಿದೆ.
 

Follow Us:
Download App:
  • android
  • ios