ಉತ್ಪಾದನಾ ವಲಯದಲ್ಲಿ ಕುಸಿತ: 3ನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕೇವಲ ಶೇ. 4.4 ಏರಿಕೆ
2022-23ರ ಮೂರನೇ ತ್ರೈಮಾಸಿಕದಲ್ಲಿನ ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿಯನ್ನು 69.38 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 62.39 ಲಕ್ಷ ಕೋಟಿಗ ರೂ. ಗಳಷ್ಟಿತ್ತು.
ನವದೆಹಲಿ (ಮಾರ್ಚ್ 1, 2023): ಉತ್ಪಾದನಾ ವಲಯದಲ್ಲಿ ಸಾಧಾರಣ ಸಾಧನೆಯಿಂದಾಗಿ 3ನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕೇವಲ ಶೇ.4.4 ರಷ್ಟು ಮಾತ್ರ ಏರಿಕೆ ಕಂಡಿದೆ. ಹೀಗಾಗಿ 2022-23ನೇ ಸಾಲಿನ ಒಟ್ಟಾರೆ ಜಿಡಿಪಿ ಬೆಳವಣಿಗೆ ದರವನ್ನು ಶೇ.7ಕ್ಕೆ ಇಳಿಕೆ ಮಾಡಲಾಗಿದೆ. 2021-22ರಲ್ಲಿ ಭಾರತ ಜಿಡಿಪಿ ಪ್ರಗತಿ ದರವನ್ನು ಮೊದಲು ಶೇ. 8.7ಕ್ಕೆ ಅಂದಾಜಿಸಿ ನಂತರ ಶೇ. 9.1ಕ್ಕೆ ಪರಿಷ್ಕರಿಸಲಾಗಿತ್ತು. ಅದಕ್ಕೆ ಹೋಲಿಸಿದರೆ 2022-23ನೇ ಸಾಲಿನಲ್ಲಿ ಪ್ರಗತಿ ದರ ಶೇ. 2.1 ರಷ್ಟು ಇಳಿಯಬಹುದು ಎಂದು ಅಂದಾಜಿಸಲಾಗಿದೆ.
2021ರ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ (GDP) ಶೇ.11.2 ರಷ್ಟು ಹಾಗೂ 2022ರ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.6.3 ರಷ್ಟು ಏರಿಕೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಉತ್ಪಾದನಾ ವಲಯ (Manufacturing Sector) ಸತತ 2ನೇ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದು ಹಾಗೂ ಇದರಿಂದ ಉದ್ಯೋಗ ನಷ್ಟ ಭೀತಿ ಉಂಟಾಗಿದ್ದು ಜಿಡಿಪಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 2011 - 12ರ ಸ್ಥಿರ ಬೆಲೆಗಳಲ್ಲಿ 2022 - 23ರ ಮೂರನೇ ತ್ರೈಮಾಸಿಕದ ಜಿಡಿಪಿ 40. 19 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 38.51 ಲಕ್ಷ ಕೋಟಿ ರೂ. ಆಗಿತ್ತು. ಇದು ಕಳೆದ ಬಾರಿಗಿಂತ ಶೇ. 4.4 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.
ಇದನ್ನು ಓದಿ: ಸತತ 6ನೇ ಬಾರಿಗೆ ಬಡ್ಡಿ ಏರಿಕೆ ಬರೆ: ರೆಪೋ ದರ ಶೇ. 6.5ಕ್ಕೆ ಹೆಚ್ಚಿಸಿದ ಆರ್‌ಬಿಐ
2022-23ರ ಮೂರನೇ ತ್ರೈಮಾಸಿಕದಲ್ಲಿನ ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿಯನ್ನು 69.38 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 62.39 ಲಕ್ಷ ಕೋಟಿಗ ರೂ. ಗಳಷ್ಟಿತ್ತು. ಒಟ್ಟಾರೆ ಇದು ಶೇ. 11.2 ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸಾಂಕ್ರಾಮಿಕ-ಸಂಬಂಧಿತ ಅಂಕಿಅಂಶಗಳ ವಿರೂಪಗಳಿಂದಾಗಿ ಆರ್ಥಿಕ ವರ್ಷ 2023 ರ ಮೊದಲ ತ್ರೈಮಾಸಿಕದಲ್ಲಿ 13.5 ಶೇಕಡಾದಿಂದ ಕಳೆದ ತ್ರೈಮಾಸಿಕದಲ್ಲಿ ಜಿಡಿಪಿಯನ್ನು ಶೇಕಡ 6.3 ಕ್ಕೆ ಕುಸಿತ ಕಂಡಿತ್ತು.
ಇನ್ನೊಂದೆಡೆ, ಉತ್ಪಾದನಾ ವಲಯವು ಕಳೆದ ತ್ರೈಮಾಸಿಕಕ್ಕಿಂತ ಶೇಕಡಾ 1.1 ರಷ್ಟು ಕುಗ್ಗಿದ್ದು, ಕಳೆದ ತ್ರೈಮಾಸಿಕದಲ್ಲಿ ಶೇಕಡಾ 3.6 ರಷ್ಟು ಇತ್ತು. ಈ ಮದ್ಯೆ, ಕೃಷಿ ವಲಯವು ಮೂರನೇ ತ್ರೈಮಾಸಿಕದಲ್ಲಿ 3.7 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ. 2.4 ರಷ್ಟು ದಾಖಲಿಸಿತ್ತು. ಇನ್ನು, ಗಣಿಗಾರಿಕೆ ವಲಯವು ಹಿಂದಿನ ತ್ರೈಮಾಸಿಕದಲ್ಲಿ 0.4 ರಷ್ಟು ಸಂಕೋಚನಕ್ಕೆ ಹೋಲಿಸಿದರೆ, ಈ ಬಾರಿ ಮೂರನೇ ತ್ರೈಮಾಸಿಕ ಅವಧಿಯಲ್ಲಿ 3.7 ಶೇಕಡಾಕ್ಕೆ ಏರಿದೆ. ಇದು Q2 ನಲ್ಲಿ ಕ್ರಮವಾಗಿ 6% ಮತ್ತು 5.8% ಕ್ಕಿಂತ Q3 ಅವಧಿಯಲ್ಲಿ ವಿದ್ಯುತ್ ಮತ್ತು ನಿರ್ಮಾಣ ಕ್ಷೇತ್ರಗಳು ಕ್ರಮವಾಗಿ 8.2% ಮತ್ತು 8.4% ರಷ್ಟು ಏರಿಕೆ ಕಂಡಿವೆ.
ಇದನ್ನೂ ಓದಿ: Economic Survey: 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!