Business Ideas : ಈ ವ್ಯಾಪಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಜೀವನ ನಿರ್ವಹಣೆಗೆ ಹಣ ಮುಖ್ಯ. ಆದಾಯ ಗಳಿಸಲು ಶ್ರಮ, ಬುದ್ಧಿವಂತಿಕೆ ಮುಖ್ಯ. ಕೆಲವೊಂದು ಸ್ಮಾರ್ಟ್ ಸ್ಟಾರ್ಟ್ ಅಪ್ ಮೂಲಕ ನೀವು ಹಣ ಗಳಿಸಬಹುದು. ಕಡಿಮೆ ಖರ್ಚಿನಲ್ಲೂ ಹೆಚ್ಚು ಲಾಭಗಳಿಸಬಹುದಾದ ಅನೇಕ ವ್ಯವಹಾರವಿದೆ.
 

Great Business Ideas

ವ್ಯಾಪಾರ ಅನೇಕರ ಕನಸು. ಅತ್ಯುತ್ತಮ ಉದ್ಯಮಿಯಾಗ್ಬೇಕೆಂದು ಕೆಲವರು ಬಯಸ್ತಾರೆ. ಮುಖೇಶ್ ಅಂಬಾನಿಯಂತಾಗಬೇಕೆಂದು ಆಶೀಸ್ತಾರೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಹುಡುಕುತ್ತ ಸಮಯ ವ್ಯರ್ಥ ಮಾಡುವ ಬದಲು ವ್ಯಾಪಾರ ಶುರು ಮಾಡಿದ್ರೆ ಕೈತುಂಬ ಲಾಭ ಗಳಿಸಬಹುದು. ಯಾವುದೇ ವ್ಯಾಪಾರ ಶುರು ಮಾಡುವ ಮೊದಲು ಅದ್ರ ಬಗ್ಗೆ ಸ್ಟಡಿ ಮಾಡೋದು ಅಗತ್ಯ. ಈಗ ಜನರು ಯಾವುದನ್ನು ನಿರೀಕ್ಷೆ ಮಾಡ್ತಾರೆ, ಗ್ರಾಹಕರನ್ನು ಆಕರ್ಷಿಸೋದು ಹೇಗೆ ಎಂಬುದನ್ನೆಲ್ಲ ತಿಳಿಯಬೇಕಾಗುತ್ತದೆ. ನಾವಿಂದು 2023ರಲ್ಲಿ ನೀವು ಶುರು ಮಾಡಬಹುದಾದ ವ್ಯವಹಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 

ಈ ವರ್ಷ ಶುರು ಮಾಡಿ ಈ ಬ್ಯುಸಿನೆಸ್ (Business) : 

ಸಾಕು ಪ್ರಾಣಿಗಳ ಹಾಸ್ಟೆಲ್ (Hostel) : ಈಗಿನ ದಿನಗಳಲ್ಲಿ ಸಾಕು ಪ್ರಾಣಿಗಳನ್ನು ಸಾಕೋರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣ ಪ್ರದೇಶದಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳನ್ನು ಸಾಕುವ ಜನರಿಗೆ ನಾಲ್ಕೈದು ದಿನ ಮನೆಯಿಂದ ದೂರ ಇರ್ಬೇಕೆಂದ್ರೆ ಕಷ್ಟವಾಗುತ್ತದೆ. ಇವುಗಳನ್ನು ಏನ್ ಮಾಡೋದು ಎಂಬ ಪ್ರಶ್ನೆ ಬರುತ್ತದೆ. ಎಲ್ಲ ಸ್ಥಳಗಳಿಗೆ ಈ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವ ಅವಕಾಶ ಇರೋದಿಲ್ಲ. ನಾಲ್ಕೈದು ದಿನ ಸಾಕು ಪ್ರಾಣಿಗಳನ್ನು ನೋಡಿಕೊಳ್ಳೋರು ಯಾರಿದ್ದಾರೆಂದು ಹುಡುಕಾಟ ನಡೆಸುತ್ತಾರೆ. ಅಂಥವರಿಗೆ ನೀವು ನೆರವಾಗಬಹುದು. ಪೆಟ್ ಹಾಸ್ಟೆಲ್ ಶುರು ಮಾಡಬಹುದು. 

Personal Finance : ಕೆಲಸ ಕಳೆದುಕೊಂಡಿದ್ದೀರಾ? ಹೀಗೂ ಜೀವನ ನಡೆಸ್ಬಹುದು ಯೋಚಿಸ್ಬೇಡಿ!

ಟೀ ಶರ್ಟ್ (T-shirt) ಪ್ರಿಂಟಿಂಗ್  : ಫ್ಯಾಶನ್ ಬಗ್ಗೆ ಸ್ವಲ್ಪ ಜ್ಞಾನವಿದ್ರೆ ನೀವು ಟೀ ಶರ್ಟ್ ಪ್ರಿಂಟಿಂಗ್ ಬ್ಯುಸಿನೆಸ್ ಶುರು ಮಾಡ್ಬಹುದು. ಟೀ ಶರ್ಟ್ ಮೇಲೆ ಇಷ್ಟದ ಡಿಸೈನ್ ಹಾಕುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶವಿದೆ. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದೂ ಒಂದು. 

ಮೆಡಿಕಲ್ ಕೊರಿಯರ್ ಸರ್ವೀಸ್ : ಕೈನಲ್ಲೊಂದು ವಾಹನ ಹಾಗೂ ಕೆಲಸ ನಿರ್ವಹಣೆ ಮಾಡುವ ಕೌಶಲ್ಯ ನಿಮ್ಮಲ್ಲಿದ್ದರೆ ನೀವು ಮೆಡಿಕಲ್ ಕೋರಿಯರ್ ಸರ್ವಿಸ್ ಮಾಡ್ಬಹುದು. ಅಗತ್ಯವಿರುವವರಿಗೆ ಔಷಧಿಗಳು ಮತ್ತು ಸಲಕರಣೆಗಳನ್ನು ಒದಗಿಸಬೇಕಾಗುತ್ತದೆ. ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಅಗತ್ಯವೆನ್ನಿಸಿದ್ರೆ ಡ್ರೈವರ್ ನೇಮಿಸಿಕೊಂಡು ಕೆಲಸ ಮಾಡಬಹುದು. 

ಹೋಮ್ ಕೇರ್ ಸರ್ವಿಸ್ : ಮನೆಯಲ್ಲಿರುವ ಹಿರಿಯರಿಗೆ ಆರೈಕೆಯ ಅಗತ್ಯವಿರುತ್ತದೆ. ಪಾಪ್ಯುಲೇಶನ್ ರೆಫರೆನ್ಸ್ ಬ್ಯೂರೋ ಪ್ರಕಾರ 2060 ರ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಜಾಸ್ತಿಯಾಗಲಿದೆ. ನೀವು ಹಿರಿಯ ನಾಗರಿಕರಿಗೆ ನೆರವಾಗುವ ಕೆಲಸ ಶುರು ಮಾಡ್ಬಹುದು.  ಹಿರಿಯ ನಾಗರಿಕರಿಗೆ ಎಲ್ಲಾ ರೀತಿಯ ಕಾರ್ಯಗಳಲ್ಲಿ ಸಹಾಯ ಬೇಕಾಗುತ್ತದೆ. ಉದಾಹರಣೆಗೆ ಮನೆಯ ಸುತ್ತಲಿನ ಕೆಲಸಗಳು ಅಥವಾ ರಿಪೇರಿ, ಔಷಧಿ, ಚಿಕಿತ್ಸೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ.  

ಲಾನ್ ಕೇರ್ ಸರ್ವಿಸ್ : ಮನೆ ಮುಂದೆ ಲಾನ್ ಬೆಳೆಸ್ತಾರೆ. ಆದ್ರೆ ಅದನ್ನು ಆರೈಕೆ ಮಾಡೋದು ಕಷ್ಟವಾಗುತ್ತದೆ. ಅಂಥವರಿಗೆ ನೀವು ಸೇವೆ ನೀಡುವ ಮೂಲಕ ಹಣ ಗಳಿಸಬಹುದು. 

ಇವೆಂಟ್ ಕ್ಯಾಟರಿಂಗ್ (Event Catering) : ಅಡುಗೆ ಬಗ್ಗೆ ಉತ್ಸಾಹ ಹೊಂದಿದ್ದರೆ  ಈವೆಂಟ್ ಕ್ಯಾಟರಿಂಗ್ ಶುರು ಮಾಡಬಹುದು. ಪಾರ್ಟಿ, ಮದುವೆ ಸೇರಿದಂತೆ ಯಾವುದೇ ಸಮಾರಂಭಕ್ಕೆ ಅಡುಗೆ ಮಾಡಿ ನೀವು ಹಣ ಗಳಿಸಬಹುದು.  

Personal Finance : ಹೆಚ್ಚು ಖರ್ಚು ಮಾಡೋ ಅಭ್ಯಾಸವಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಮಕ್ಕಳ ಹಳೆ ವಸ್ತುಗಳ ಮಾರಾಟ : ಮಕ್ಕಳ ವಸ್ತುಗಳು ದುಬಾರಿಯಾಗಿರುತ್ತದೆ. ಅನೇಕರು ಅದನ್ನು ಖರೀದಿಸಲು ಇಷ್ಟಪಡೋದಿಲ್ಲ. ಸೆಕೆಂಡ್ ಹ್ಯಾಂಡ್ ವಸ್ತು ಕಡಿಮೆ ಬೆಲೆಗೆ ಸಿಕ್ಕಿದ್ರೆ ಎಂದು ಹುಡುಕಾಟ ನಡೆಸುತ್ತಾರೆ. ನೀವು ಮಕ್ಕಳ ಹಳೆ ವಸ್ತುಗಳನ್ನು ಖರೀದಿ ಮಾಡಿ, ಅದನ್ನು ರಿಪೇರಿ ಮಾಡಿ ಮಾರಾಟ ಮಾಡಬಹುದು. ಆಟದ ವಸ್ತು, ಬಟ್ಟೆ, ಪುಸ್ತಕ, ಕೇರಿಂಗ್ ಬ್ಯಾಗ್ ಎಲ್ಲವನ್ನೂ ನೀವು ಮರು ಮಾರಾಟ ಮಾಡಬಹುದು. 
 

Latest Videos
Follow Us:
Download App:
  • android
  • ios