Asianet Suvarna News Asianet Suvarna News

e-passports: ಯಾವೆಲ್ಲ ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಜಾರಿಯಲ್ಲಿದೆ? ಭಾರತದಲ್ಲಿ ಯಾವಾಗ ಇದನ್ನು ಪರಿಚಯಿಸಲಾಗುತ್ತೆ?

*ಇ-ಪಾಸ್ ಪೋರ್ಟ್ ಕುರಿತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯಿಂದ ಮಾಹಿತಿ
*ಇ-ಪಾಸ್ ಪೋರ್ಟ್ ನಿಂದ ಅಂತಾರಾಷ್ಟ್ರೀಯ ಪ್ರಯಾಣ ಸುಲಭ ಹಾಗೂ ಸರಳ
*ಪ್ರಾಯೋಗಿಕವಾಗಿ ಈಗಾಗಲೇ 20,000 ಇ-ಪಾಸ್ ಪೋರ್ಟ್ ಗಳನ್ನು ವಿತರಿಸಿರೋ ಭಾರತ ಸರ್ಕಾರ
 

Indians will soon get e-passports says Ministry of External affairs
Author
Bangalore, First Published Jan 7, 2022, 4:00 PM IST

ನವದೆಹಲಿ (ಜ.7): ಹೊಸ ಪಾಸ್‌ಪೋರ್ಟ್‌ (Passport) ಹಾಗೂ ಹಳೆಯದರ ನವೀಕರಣಕ್ಕೆ(Renewal) ಅರ್ಜಿ ಸಲ್ಲಿಸಿರೋ ಭಾರತದ (India) ಎಲ್ಲ ನಾಗರಿಕರಿಗೂ (Citizens) ಕೇಂದ್ರ ಸರ್ಕಾರ (Central Government)ಶೀಘ್ರವಾಗಿ ಇ-ಪಾಸ್ ಪೋರ್ಟ್(ePassport) ವಿತರಿಸಲಿದೆ.  ಈ ಬಗ್ಗೆ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇ-ಪಾಸ್ ಪೋರ್ಟ್  ಅನ್ನೋದು ಜಾಗತಿಕ ನಿಯಮವಾಗಿ ರೂಪುಗೊಳ್ಳುತ್ತಿದ್ದು, ಇದ್ರಿಂದ ಅಂತಾರಾಷ್ಟ್ರೀಯ ಪ್ರಯಾಣ (International Travel) ಸುಲಭವಾಗೋ ಜೊತೆ  ವಲಸೆ ಕೌಂಟರ್ ಗಳಲ್ಲಿ (immigration counters) ಪ್ರಕ್ರಿಯಗಳು ತ್ವರಿತವಾಗಿ ನಡೆಯಲಿವೆ. 

'ಭಾರತವು ನಾಗರಿಕರಿಗೆ ಶೀಘ್ರದಲ್ಲೇ ಮುಂದಿನ ಜನಾಂಗದ ಇ-ಪಾಸ್ ಪೋರ್ಟ್ ಪರಿಚಯಿಸಲಿದೆ' ಎಂದು ವಿದೇಶಾಂಗ ಸಚಿವಾಲಯದ (MEA) ಪಾಸ್ ಪೋರ್ಟ್ ಹಾಗೂ ವೀಸಾ (CPV) ವಿಭಾಗದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಟ್ವೀಟ್  ಮೂಲಕ ಮಾಹಿತಿ ನೀಡಿದ್ದಾರೆ. ಸುರಕ್ಷಿತ ಬಯೋಮೆಟ್ರಿಕ್ ದಾಖಲೆ ಆಧಾರದಲ್ಲಿ ಇ-ಪಾಸ್ ಪೋರ್ಟ್  ವಿತರಿಸಲಾಗೋದು, ಇದ್ರಿಂದ ಜಾಗತಿಕ ವಲಸೆ ಕೌಂಟರ್ ಗಳಲ್ಲಿ ಪ್ರಕ್ರಿಯೆಗಳು ಶೀಘ್ರ ಪೂರ್ಣಗೊಳ್ಳಲಿವೆ. ಭಾರತ ಹಾಗೂ ವಿದೇಶಗಳಲ್ಲಿ 2019ನೇ ಸಾಲಿನಲ್ಲಿ ಪಾಸ್ ಪೋರ್ಟ್ ವಿತರಣಾ ಪ್ರಾಧಿಕಾರಗಳು (PIA) 12.8 ದಶಲಕ್ಷಕ್ಕಿಂತಲೂ ಅಧಿಕ ಪಾಸ್ ಪೋರ್ಟ್ ಗಳನ್ನು ವಿತರಿಸಿದ್ದು, ಈ ಮೂಲಕ ಜಾಗತಿಕವಾಗಿ ಚೀನಾ ಹಾಗೂ ಅಮೆರಿಕದ ಬಳಿಕ ಅತ್ಯಧಿಕ ಪ್ರಮಾಣದಲ್ಲಿ ಪಾಸ್ ಪೋರ್ಟ್ ವಿತರಿಸಿದ ರಾಷ್ಟ್ರವಾಗಿದೆ. 

Ratan Tata biography: ರತನ್ ಟಾಟಾ ಜೀವನಚರಿತ್ರೆ ದಾಖಲೆ ಮೊತ್ತಕ್ಕೆ ಮಾರಾಟ!

ಇ-ಪಾಸ್ ಪೋರ್ಟ್ ಹೇಗಿರಲಿದೆ? ವಿಶೇಷತೆಯೇನು?
ಪ್ರಸ್ತುತ ಭಾರತೀಯ ನಾಗರಿಕರಿಗೆ ವಿತರಿಸುತ್ತಿರೋ ಪಾಸ್ ಪೋರ್ಟ್ ಪುಸ್ತಕ (booklets)ರೂಪದಲ್ಲಿದೆ. ಇದನ್ನು  ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿರೋ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇ-ಪಾಸ್ ಪೋರ್ಟ್ ಅನ್ನು ಕೂಡ ಎರಡು ವಿಧದಲ್ಲಿ ವಿತರಿಸಲಾಗೋದು. ಒಂದು ಸಾಂಪ್ರದಾಯಿಕ ಪುಸ್ತಕ ರೂಪದಲ್ಲಿರೋ ಪಾಸ್ ಪೋರ್ಟ್ ಗೆ ಎಲೆಕ್ಟ್ರಾನಿಕ್ ಚಿಪ್ (electronic chip) ಅಳವಡಿಸೋದು. ಇದು ಪಾಸ್ ಪೋರ್ಟ್ ಪುಟ 2ರಲ್ಲಿರೋ ವೈಯಕ್ತಿಕ ಮಾಹಿತಿಗಳು ಹಾಗೂ ಡಿಜಿಟಲ್ ಸುರಕ್ಷೆ ವೈಶಿಷ್ಟ್ಯಗಳನ್ನು ಸಂಗ್ರಹಿಸಿರುತ್ತದೆ. ಈ ಡಿಜಿಟಲ್ ಸುರಕ್ಷತಾ ಗುಣಲಕ್ಷಣಗಳು 'ಡಿಜಿಟಲ್ ಸಹಿ' ಆಗಿದ್ದು, ಪ್ರತಿ ರಾಷ್ಟ್ರಕ್ಕೂ ವಿಶಿಷ್ಟವಾಗಿರುತ್ತವೆ.  ಎಲೆಕ್ಟ್ರಾನಿಕ್ ಮೈಕ್ರೋ ಪ್ರೊಸೇಸರ್ ಚಿಪ್ ಅಳವಡಿಸಿರೋ  20,000  ಇ-ಪಾಸ್ ಪೋರ್ಟ್ ಗಳನ್ನು ಭಾರತ ಪ್ರಾಯೋಗಿಕವಾಗಿ ಸರ್ಕಾರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳಿಗೆ ಈಗಾಗಲೇ  ವಿತರಿಸಿದೆ. ಇನ್ನೊಂದು ಸಂಪೂರ್ಣ ಡಿಜಿಟಲ್ ಪಾಸ್ ಪೋರ್ಟ್ ಆಗಿದ್ದು, ಅದನ್ನು ಮೊಬೈಲ್ ಫೋನ್ ನಲ್ಲೇ ಸಂರಕ್ಷಿಸಿಟ್ಟುಕೊಳ್ಳಬಹುದು. 

ಬೇರೆ ರಾಷ್ಟ್ರಗಳು ಇ-ಪಾಸ್ ಪೋರ್ಟ್ ಬಳಸುತ್ತಿವೆಯಾ?
ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO)ನೀಡಿರೋ ಮಾಹಿತಿ ಪ್ರಕಾರ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಬಳಕೆಯಲ್ಲಿದೆ. ಜಗತ್ತಿನಾದ್ಯಂತ  490 ಮಿಲಿಯನ್ ಗೂ ಅಧಿಕ ಇ-ಪಾಸ್ ಪೋರ್ಟ್ ಗಳು ಬಳಕೆಯಲ್ಲಿವೆ. ಭಾರತದ ನೆರೆಯ ರಾಷ್ಟ್ರ ನೇಪಾಳ 2021ರ ನವೆಂಬರ್ ನಿಂದ ತನ್ನ ನಾಗರಿಕರಿಗೆ ಇ-ಪಾಸ್ ಪೋರ್ಟ್ ವಿತರಿಸಲು ಪ್ರಾರಂಭಿಸಿದೆ. ಇನ್ನು ಬಾಂಗ್ಲಾದೇಶ ಇ-ಪಾಸ್ ಪೋರ್ಟ್ ವಿತರಣೆ ಉದ್ದೇಶದಿಂದ ಹಳೆಯ ಮಾದರಿಯ ಪಾಸ್ ಪೋರ್ಟ್ ವಿತರಣೆಯನ್ನು ಸ್ಥಗಿತಗೊಳಿಸಿದೆ.  

Reliance Invest In Dunzo ಬೆಂಗಳೂರಿನ ಡೆಲಿವರಿ ಸ್ಟಾರ್ಟ್ಅಪ್‌ನ ಶೇ.25.8 ಪಾಲು ಖರೀದಿಸಿದ ರಿಲಯನ್ಸ್!

ಇ-ಪಾಸ್ ಪೋರ್ಟ್ ಪ್ರಯೋಜನಗಳು
-ಇ-ಪಾಸ್ ಪೋರ್ಟ್ ಸಾಂಪ್ರದಾಯಿಕ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. 
-ಅಧಿಕಾರಿಗಳ ಪ್ರಕಾರ ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಸಿದ್ಧಪಡಿಸೋದು ಕಷ್ಟವಾಗಲಿದೆ.  
-ಇ-ಪಾಸ್ ಪೋರ್ಟ್ ನಿಂದ ವಲಸೆ ಕೌಂಟರ್ ನಲ್ಲಿ ಪ್ರಕ್ರಿಯೆಗಳು ಬೇಗ ಮುಗಿಯುತ್ತವೆ. ಹೀಗಾಗಿ ಜಾಸ್ತಿ ಹೊತ್ತು ಕಾಯಬೇಕಾದ ಅಗತ್ಯವಿಲ್ಲ. 
-ICAO ಮಾನದಂಡಗಳ ಆಧಾರದಲ್ಲಿ ಇ-ಪಾಸ್ ಪೋರ್ಟ್ ಇರಲಿದೆ. 
-ಪಾಸ್ ಪೋರ್ಟ್ ಸುರಕ್ಷತೆ ಹೆಚ್ಚಿದ ಕಾರಣ ವೀಸಾದ ಅಗತ್ಯವಿಲ್ಲದೆ ಭಾರತದ ನಾಗರಿಕರಿಗೆ ಪ್ರವೇಶ ನೀಡೋ ರಾಷ್ಟ್ರಗಳ ಸಂಖ್ಯೆ ಹೆಚ್ಚಲಿದೆ. ಪ್ರಸ್ತುತ ಭಾರತೀಯರು ಮೊದಲೇ ವೀಸಾ ಪಡೆಯದೆ  58 ರಾಷ್ಟ್ರಗಳಿಗೆ ಪ್ರವೇಶಿಸಬಹುದಾಗಿದೆ. ಈ ರಾಷ್ಟ್ರಗಳಿಗೆ ತೆರಳಿದ ಬಳಿಕ ವೀಸಾ ಪಡೆಯೋ ಅಥವಾ ಇತರ ವಿಧಾನಗಳನ್ನುಅನುಸರಿಸಲಾಗುತ್ತಿದೆ. 
-ಪಾಸ್ ಪೋರ್ಟ್ ವಿತರಣೆಗೆ ತಗಲುವ ಒಟ್ಟು ಸಮಯ ಕೂಡ ತಗ್ಗಲಿದೆ. ಪ್ರಸ್ತುತ ಪೊಲೀಸ್ ಪರಿಶೀಲನೆಗೆ ಸಂಬಂಧಿಸಿ ಆಗುತ್ತಿರೋ ವಿಳಂಬ ಇ-ಪಾಸ್ ಪೋರ್ಟ್ ವಿತರಣೆಯಲ್ಲಿ ತಗ್ಗಲಿದೆ. 
 

Follow Us:
Download App:
  • android
  • ios