Monthly Economic Review : ಬಲಿಷ್ಠ ರಾಷ್ಟ್ರಗಳಿಗಿಂತ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯಲಿದೆ

ಹಣಕಾಸು ಇಲಾಖೆಯ ಮಾಸಿಕ ಆರ್ಥಿಕ ವಿಮರ್ಶೆ
ವಿಶ್ವದ ಬಲಿಷ್ಠ ದೇಶಗಳಿಗಿಂತ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯಲಿದೆ
ಆರ್ಥಿಕತೆ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಕ್ರಮ

Indian economy is poised to grow at the quickest pace among the large nation says Finance Ministry Monthly Economic Review report san

ನವದೆಹಲಿ (ಫೆ.16): 2022-23ರ ಬಜೆಟ್‌ನಲ್ಲಿ (Central Budget) ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಹಿನ್ನೆಲೆಯಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಲೀಗ್ ಗಳ ಪೈಕಿ ಭಾರತದ ಆರ್ಥಿಕತೆಯು (India Economy) ವೇಗವಾಗಿ ಬೆಳೆಯಲು ಸಿದ್ಧವಾಗಿದೆ ಎಂದು ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ವಿಮರ್ಶೆ (Economic Review report) ಹೇಳಿದೆ. "ಪ್ರಸ್ತುತ ವರ್ಷವು ಕೋವಿಡ್-19 ನಂತರದ ಪ್ರಪಂಚದ ಆರ್ಥಿಕ ಮರುಹೊಂದಾಣಿಕೆಯ ಯೋಜನೆಗಳೊಂದಿಗೆ ಕೊನೆಗೊಳ್ಳಬಹುದು. ಉತ್ಪಾದನೆ ಮತ್ತು ನಿರ್ಮಾಣ ವಿಭಾಗವು  "ನಮ್ಮ ಮುನ್ನಡೆಯ ಚಾಲಕರಾಗಿರಲಿದ್ದಾರೆ. ಇದು ಕೇಂದ್ರ ಸರ್ಕಾರ ಪ್ರಕಟಿಸಿರುವ ಪ್ರಾಡಕ್ಟ್ ಲಿಂಕ್ಡ್ ಇನಿಶಿಯೇಟಿವ್ (ಪಿಎಲ್ಐ) ಯೋಜನೆಗಳು ಮತ್ತು ಮೂಲಸೌಕರ್ಯದಲ್ಲಿನ ಸಾರ್ವಜನಿಕ ಕ್ಯಾಪೆಕ್ಸ್‌ನಿಂದ ಪ್ರಚೋದಿಸಲ್ಪಡುತ್ತದೆ" ಎಂದು ಪರಿಶೀಲನಾ ವರದಿ ಹೇಳಿದೆ.

ನಿವ್ವಳ ಬಿತ್ತನೆ ಪ್ರದೇಶ ಮತ್ತು ಬೆಳೆ ವೈವಿಧ್ಯೀಕರಣದಲ್ಲಿ ನಿರಂತರ ಹೆಚ್ಚಳವನ್ನು ಕಾಣುತ್ತಿರುವ ಕೃಷಿಯು "ಆಹಾರ ಬಫರ್‌' ವಿಭಾಗಗಳನ್ನು ಬಲಪಡಿಸುತ್ತದೆ ಮತ್ತು ಪಿಎಂ ಕಿಸಾನ್ (PM KISAN scheme,) ಯೋಜನೆಯ ಮೂಲಕ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಮತ್ತು ಆದಾಯ ವರ್ಗಾವಣೆಯ ಮೂಲಕ ರೈತರಿಗೆ ಅಪಾರ ಪ್ರಮಾಣದ ಸಂಗ್ರಹಣೆಯ ಮೂಲಕ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund ) ತನ್ನ ಜನವರಿ 2022 ಅಪ್‌ಡೇಟ್‌ನಲ್ಲಿ ದೇಶದ 2022 ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಕಡಿಮೆ ಮಾಡಿದೆ ಎಂದು ಗಮನಿಸಿದಾಗ, ಐಎಂಎಫ್ (IMF) 2022-23 ರಲ್ಲಿ ಬೆಳವಣಿಗೆಯ ಪ್ರಕ್ಷೇಪಣವನ್ನು ಮೇಲ್ಮುಖವಾಗಿ ಪರಿಷ್ಕರಿಸಿದ ಏಕೈಕ ದೊಡ್ಡ ಮತ್ತು ಪ್ರಮುಖ ದೇಶ ಭಾರತವಾಗಿದೆ ಎಂದು ಅದು ಹೇಳಿದೆ.


"ಅದರ ನೀತಿ ನಿರೂಪಣೆಯ ದೂರದೃಷ್ಟಿಯ ಪುರಾವೆಯಾಗಿ, 2020-21 ರಲ್ಲಿ (-)6.6 ಶೇಕಡಾದಷ್ಟು ಸಂಕುಚಿತಗೊಂಡ ಭಾರತೀಯ ಆರ್ಥಿಕತೆಯು ಈಗ 2022-23 ರಲ್ಲಿ ದೊಡ್ಡ ರಾಷ್ಟ್ರಗಳ ಲೀಗ್‌ನಲ್ಲಿ ವೇಗವಾಗಿ ಬೆಳೆಯುವ ಮಟ್ಟದಲ್ಲಿದೆ' ಎಂದು ತಿಳಿಸಿದೆ.

Petrol Price in Pakistan : ಪಾಕಿಸ್ತಾನ ಸರ್ಕಾರದಿಂದ ಜನತೆಯ ಮೇಲೆ "ಪೆಟ್ರೋಲ್ ಬಾಂಬ್", ಒಂದೇ ದಿನದಲ್ಲಿ 12.03 ರೂ ಏರಿಕೆ!
2022-23ರ ಬಜೆಟ್ (2022-23 Central Budget), "ಹಿಂದಿನ ವರ್ಷದ ಬಜೆಟ್‌ನಿಂದ ಭಾರತದ ಆರ್ಥಿಕತೆಗೆ ಹೊಂದಿಸಲಾದ ದಿಕ್ಕನ್ನು ಬಲಪಡಿಸಿದೆ. ಕ್ಯಾಪೆಕ್ಸ್ ಬಜೆಟ್ (capex budget), ಪ್ರಸಕ್ತ ವರ್ಷದ ಬಜೆಟ್ ಅಂದಾಜಿಗಿಂತ 35.4 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಬಂಡವಾಳದ ಕಾರ್ಯಗಳಿಗಾಗಿ ರಾಜ್ಯಗಳಿಗೆ ಅನುದಾನ-ಸಹಾಯವನ್ನು ಸೇರಿಸಿದ ನಂತರ GDP ಯ 4.1 ಶೇಕಡಾಕ್ಕೆ ಏರುತ್ತದೆ,  ಆ ಮೂಲಕ ಗತಿಶಕ್ತಿಯ (Gatishakti ) ಏಳು ಎಂಜಿನ್‌ಗಳಿಗೆ ಶಕ್ತಿಯನ್ನು ನೀಡುತ್ತದೆ. ಇದು ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡಲು ಮತ್ತು ದೇಶದಲ್ಲಿ ಖಾಸಗಿ ಹೂಡಿಕೆ ಅನುಕೂಲವಾಗಲು ಸಹಾಯ ಮಾಡುತ್ತದೆ' ಎಂದು ವಿಮರ್ಶೆ ಮಾಡಲಾಗಿದೆ. ಸರ್ಕಾರದ ಕ್ಯಾಪೆಕ್ಸ್‌ನಿಂದ ಉದ್ಯೋಗ ಸೃಷ್ಟಿಯ ಪರಿಣಾಮವಾಗಿ ಹೆಚ್ಚುತ್ತಿರುವ ಬಳಕೆಯ ಮಟ್ಟವು ಖಾಸಗಿ ಹೂಡಿಕೆಯನ್ನು ಸಹ ಪ್ರೇರೇಪಿಸುತ್ತದೆ ಎಂದು ಅದು ಗಮನಿಸಿದೆ.

Look Out Notice : ಬ್ಯಾಂಕ್‌ಗಳಿಗೆ 23 ಸಾವಿರ ಕೋಟಿ ವಂಚನೆ, ದೇಶ ಬಿಡದಂತೆ ಲುಕ್‌ಔಟ್ ನೋಟಿಸ್
2022-23ರಲ್ಲಿ 3.0-3.5 ಪ್ರತಿಶತದಷ್ಟು ಜಿಡಿಪಿ ಡಿಫ್ಲೇಟರ್‌ನೊಂದಿಗೆ (GDP deflator) ಜಿಡಿಪಿ ಬೆಳವಣಿಗೆಯನ್ನು 11.1 ಪ್ರತಿಶತಕ್ಕೆ ಬಜೆಟ್ ಗುರಿಪಡಿಸಿದೆ. 2021-22 ರ ಆರ್ಥಿಕ ಸಮೀಕ್ಷೆಯಲ್ಲಿನ ಅಂದಾಜು 8 ಪ್ರತಿಶತದಷ್ಟು ನೈಜ ಬೆಳವಣಿಗೆಯ ಅಂಶವು ಫೆಬ್ರವರಿ 2022 ರ ಸಭೆಯಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಯೋಜಿತ ಶೇಕಡಾ 7.8 ಕ್ಕೆ ಹತ್ತಿರದಲ್ಲಿದೆ ಎಂದು ತಿಳಿಸಿದೆ. ಬದಲಾಗದ ರೆಪೊ ಮತ್ತು ರಿವರ್ಸ್ ರೆಪೊ ದರಗಳು ಮತ್ತು MPC ಗಳ ಹೊಂದಾಣಿಕೆಯ ನಿಲುವು ಈ ಅನಿಶ್ಚಿತ ಸಮಯದಲ್ಲಿ ಬೆಳವಣಿಗೆಗೆ ಆದ್ಯತೆ ನೀಡುತ್ತದೆ ಮತ್ತು ಬಜೆಟ್‌ನ ಹೂಡಿಕೆಯ ದೃಷ್ಟಿಕೋನವನ್ನು ಬಲಪಡಿಸುತ್ತದೆ.

Latest Videos
Follow Us:
Download App:
  • android
  • ios