ಭಾರತವು ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ಶೇಕಡಾ 30 ತೆರಿಗೆಯನ್ನು ವಿಧಿಸುವುದರ ಜೊತೆಗೆ ಮೂಲದಲ್ಲಿ ಶೇಕಡಾ 1 ರಷ್ಟು ತೆರಿಗೆಯನ್ನು ಕಡಿತಗೊಳಿಸುವುದರ ಮಧ್ಯೆ ಈ ಬೆಳವಣಿಗೆಯು ಬಂದಿದೆ, ಈ ಕ್ರಮವು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿನ ವ್ಯಾಪಾರದ ಪ್ರಮಾಣದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ.
ನವದೆಹಲಿ (ಏ.19): ಭಾರತೀಯ ಕ್ರಿಪ್ಟೋಕರೆನ್ಸಿ ವಿನಿಮಯ ಕಂಪನಿ ವಜೀರೆಕ್ಸ್ (Indian cryptocurrency exchange WazirX) ಸಹ-ಸಂಸ್ಥಾಪಕರಾದ ನಿಶ್ಚಲ್ ಶೆಟ್ಟಿ (Nischal Shetty ) ಮತ್ತು ಸಿದ್ಧಾರ್ಥ್ ಮೆನನ್ ( Siddharth Menon) ಭಾರತವನ್ನು ತೊರೆದಿದ್ದು ದುಬೈಗೆ ಶಿಫ್ಟ್ ಆಗಿದ್ದಾರೆ ಎಂದು ಆಂಗ್ಲ ದೈನಿಕ ವರದಿ ಮಾಡಿದೆ.
ವಜೀರೆಕ್ಸ್ ಕಂಪನಿ ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ತನ್ನ ಕಚೇರಿಯಲ್ಲಿ ಕಾರ್ಯಾಚರಣೆಯನ್ನು ಹೊಂದಿದ್ದ ನಡುವೆಯೂ ನಿಶ್ಚಲ್ ಶೆಟ್ಟಿ ಹಾಗೂ ಸಿದ್ಧಾರ್ಥ್ ಮೆನನ್ ತಮ್ಮ ಸಂಪೂರ್ಣ ಕುಟುಂಬದೊಂದಿಗೆ ಭಾರತವನ್ನು ತೊರೆದಿದ್ದು, ಇನ್ನು ಮುಂದೆ ದುಬೈನಲ್ಲಿ( Dubai) ನೆಲಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಜೀರೆಕ್ಸ್ ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸಮೀರ್ ಮ್ಹಾತ್ರೆ ಅವರು ಭಾರತದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಪ್ರಸ್ತುತ, WazirX ನಲ್ಲಿನ ಸಂಪೂರ್ಣ ತಂಡ, ವರ್ಕ್ ಫ್ರಮ್ ಹೋಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಭಾರತೀಯ ಸರ್ಕಾರವು ವರ್ಚುವಲ್ ಡಿಜಿಟಲ್ ಸ್ವತ್ತುಗಳ ( virtual digital assets) ಮೇಲೆ ಶೇಕಡಾ 30 ತೆರಿಗೆಯನ್ನು ವಿಧಿಸುವುದರ ಜೊತೆಗೆ ಮೂಲದಲ್ಲಿ ಶೇಕಡಾ 1 ರಷ್ಟು ತೆರಿಗೆಯನ್ನು ಕಡಿತಗೊಳಿಸುವುದರ ಮಧ್ಯೆ ಈ ಬೆಳವಣಿಗೆಯು ಬಂದಿದೆ, ಇದು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿನ ವ್ಯಾಪಾರದ ಪ್ರಮಾಣಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ. VDA ಗಳ ಮೇಲಿನ ಲಾಭದ ವಿರುದ್ಧ ಯಾವುದೇ ನಷ್ಟವನ್ನು ಹೊಂದಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಮತ್ತು ಕ್ರಿಪ್ಟೋ ಮೈನಿಂಗ್ ಕೂಡ ತೆರಿಗೆಗಳಿಗೆ ಹೊಣೆಗಾರನಾಗಲಿದೆ, ಇದು ಉದ್ಯಮದ ಪ್ರಮುಖ ವ್ಯಕ್ತಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಅದರಲ್ಲೂ ಪ್ರಮುಖವಾಗಿ ಟ್ವಿಟರ್ ಕ್ಲಿ ಸಕ್ರಿಯವಾಗಿದ್ದ ನಿಶ್ಚಲ್ ಶೆಟ್ಟಿ, ಕ್ರಿಪ್ಟೋ ಕರೆನ್ಸಿಗಳ ಮೇಲೆ ಸರ್ಕಾರ ವಿಧಿಸುತ್ತಿರುವ ತೆರಿಗೆಗಳ ವಿಚಾರವಾಗಿ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದು ದೇಶದಲ್ಲಿರುವ ಕ್ರಿಪ್ಟೋ ಟ್ರೇಡರ್ ಗಳ ಸಂಕಷ್ಟಕ್ಕೆ ಕಾರಣವಾಗುವುದು ಮಾತ್ರವಲ್ಲದೆ, ದೇಶದ ಸಂಪತ್ತು ಬರಿದಾಗಲು ಕಾರಣವಾಗುತ್ತದೆ ಎಂದು ಹೇಳಿದ್ದರು.
2,790.74 ಕೋಟಿ ಮೌಲ್ಯದ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತದ ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜೂನ್‌ನಲ್ಲಿ ನಿಶ್ಚಲ್ ಶೆಟ್ಟಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ, ತಮ್ಮ ಕ್ರಿಪ್ಟೋ ಪ್ಲಾಟ್‌ಫಾರ್ಮ್ ಎಲ್ಲಾ ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿದೆ ಎಂದು ನಿಶ್ಚಲ್ ಶೆಟ್ಟಿ ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದ್ದರು.
"ಕೆವೈಸಿ ಮತ್ತು ಆಂಟಿ ಮನಿ ಲಾಂಡರಿಂಗ್ (ಎಎಂಎಲ್) ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಕಾನೂನು ಬಾಧ್ಯತೆಗಳನ್ನು ಮೀರಿ ಹೋಗುತ್ತೇವೆ ಮತ್ತು ಅಗತ್ಯವಿರುವಾಗ ಕಾನೂನು ಜಾರಿ ಅಧಿಕಾರಿಗಳಿಗೆ ಯಾವಾಗಲೂ ಮಾಹಿತಿಯನ್ನು ಒದಗಿಸುತ್ತೇವೆ" ಎಂದು ನಿಶ್ಚಲ್ ಶೆಟ್ಟಿ ಈ ಹಿಂದೆ ಹೇಳಿದ್ದರು.
ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಇಡಿ ಶೋಕಾಸ್ ನೋಟಿಸ್
ನಿಶ್ಚಲ್ ಶೆಟ್ಟಿ, ಯುಎಸ್ ಮೂಲದ ಕ್ರಿಪ್ಟೋ ಇನ್ನೋವೇಟರ್ ಓಮರ್ ಸಯೀದ್ ಅವರೊಂದಿಗೆ ಶಾರ್ಡಿಯಮ್ ಯೋಜನೆಯನ್ನು ಘೋಷಿಸಿದ್ದರು. ಶಾರ್ಡಿಯಮ್ ಲೇಯರ್ 1 ಬ್ಲಾಕ್‌ಚೈನ್ ಪ್ರಾಜೆಕ್ಟ್ ಆಗಿದ್ದು ಅದು ಸ್ಕೇಲೆಬಿಲಿಟಿ ಮತ್ತು ಕ್ರಿಪ್ಟೋ ಟೋಕನ್‌ಗಳ ಸುತ್ತ ಹೆಚ್ಚಿನ ವಹಿವಾಟು ಕಾಳಜಿಗಳನ್ನು ಪರಿಹರಿಸುತ್ತದೆ.
ಬಿಟ್‌ಕಾಯನ್‌ನಂಥ ಕರೆನ್ಸಿ ಬಳಸಿದರೆ ಜೈಲುಶಿಕ್ಷೆ, ದಂಡ
ವಿಶೇಷವೆಂದರೆ, ಭಾರತವು ಕ್ರಿಪ್ಟೋ ವಹಿವಾಟುಗಳ ಮೇಲೆ ತೆರಿಗೆಗಳನ್ನು ವಿಧಿಸಿದ ನಂತರ ದುಬೈ ಕ್ರಿಪ್ಟೋಕರೆನ್ಸಿ ಇನ್ನೋವೇಟರ್ಸ್ ಮತ್ತು ಇನ್ ಫ್ಲೂಯೆನ್ಸರ್ಸ್ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ಭಾರತದ ಕ್ರಿಪ್ಟೋ ಮತ್ತು ವೆಬ್3 ಸ್ಟಾರ್ಟ್-ಅಪ್‌ಗಳು ಯುಎಇಗೆ ಅದರಲ್ಲೂ ವಿಶೇಷವಾಗಿ ದುಬೈಗೆ ಬಂದಿವೆ, ಅಲ್ಲಿ ಯಾವುದೇ ಆದಾಯ ತೆರಿಗೆ ನಿಬಂಧನೆಗಳಿಲ್ಲ ಮತ್ತು ವರ್ಚುವಲ್ ಡಿಜಿಟಲ್ ಸ್ವತ್ತುಗಳಲ್ಲಿ ವ್ಯಾಪಾರ ಮಾಡಲು ಸರ್ಕಾರವು ನಿಯಂತ್ರಕ ಸಂಸ್ಥೆಯನ್ನು ರಚಿಸಿದೆ.
