ವಾಷಿಂಗ್ಟನ್(ಜ.30)‌: ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅಮೆರಿಕನ್ನರಿಗಿಂತಲೂ ಹೆಚ್ಚಿನ ವಾರ್ಷಿಕ ಆದಾಯ ಪಡೆಯುತ್ತಾರೆ ಎಂದು ವರದಿಯೊಂದು ಹೇಳಿದೆ. ಏಷಿಯನ್‌ ಪೆಸಿಫಿಕ್‌ ಅಮೆರಿಕನ್‌ ಕಮ್ಯೂನಿಟಿ ಡೆವಲಪ್‌ಮೆಂಟ್‌ ವರದಿ ಅನ್ವಯ, ಭಾರತೀಯ ಅಮೆರಿಕದ ಕುಟುಂಬವೊಂದು ವಾರ್ಷಿಕ ಸರಾಸರಿ 87 ಲಕ್ಷ ರು.(1,20,000 ಡಾಲರ್‌) ಆದಾಯ ಪಡೆಯುತ್ತದೆ.

ಇದು ಅಮೆರಿಕದ ಮೂಲ ನಿವಾಸಿಗಳು ಮತ್ತು ಬಿಳಿಯ ಅಮೆರಿಕನ್ನಿಗರಿಗಿಂತಲೂ ಹೆಚ್ಚು. ಅಲ್ಲದೆ ಯಾವುದೇ ವಲಸಿಗ ಸಮುದಾಯಕ್ಕಿಂತಲೂ ಈ ಆದಾಯ ಹೆಚ್ಚಿದೆ ಎಂದು ವರದಿ ಹೇಳಿದೆ.

ಉಳಿದಂತೆ ಮ್ಯಾನ್ಮಾರ್‌ ಮೂಲದವರು ವಾರ್ಷಿಕ 33 ಲಕ್ಷ ರು.(45,348 ಡಾಲರ್‌), ಕಪ್ಪು ವರ್ಣೀಯರು 30 ಲಕ್ಷ ರು. ಹಾಗೂ ಲ್ಯಾಟಿನ್‌ ಅಮೆರಿಕದವರು 37 ಲಕ್ಷ ರು. ಆದಾಯ ಪಡೆಯುತ್ತಾರೆ. ಆದರೆ ಭಾರತೀಯರಿಗೆ ಮಾತ್ರವೇ ಗರಿಷ್ಠ 87 ಲಕ್ಷ ರು. ವಾರ್ಷಿಕ ಆದಾಯವಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.