Asianet Suvarna News Asianet Suvarna News

ವಿಶ್ವ ಬ್ಯಾಂಕ್‌ ಮುಖ್ಯಸ್ಥರಾಗಿ ಭಾರತೀಯ ಅಜಯ್‌ ಅಧಿಕಾರ ಸ್ವೀಕಾರ

ಭಾರತೀಯ ಮೂಲದ ಅಮೆರಿಕನ್‌ ಅಜಯ್‌ ಬಂಗಾ ಅವರು ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ  ಅಧಿಕಾರ ಸ್ವೀಕಾರ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ ಎರಡಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.

Indian American Ajay Banga took office as the President of the World Bank on Friday akb
Author
First Published Jun 4, 2023, 11:11 AM IST

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕನ್‌ ಅಜಯ್‌ ಬಂಗಾ ಅವರು ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ  ಅಧಿಕಾರ ಸ್ವೀಕಾರ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ ಎರಡಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.

ವಿಶ್ವಬ್ಯಾಂಕನ್ನು ಮುನ್ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ಬಂಗಾ ಅವರ ಹೆಸರನ್ನು ನಾಮನಿರ್ದೇಶನ ಮಾಡಿದ್ದರು. ಮೇ 3ರಂದು ವಿಶ್ವಬ್ಯಾಂಕ್‌ ನಿರ್ದೇಶಕರ ಮಂಡಳಿ ಇವರ ಹೆಸರನ್ನು ಅಂತಿಮಗೊಳಿಸಿತ್ತು. ವಿಶ್ವಬ್ಯಾಂಕ್‌ ಗುಂಪಿನ ನೂತನ ಮುಖ್ಯಸ್ಥರಾಗಿ ನೇಮಕವಾಗಿರುವ ಅಜಯ್‌ ಬಂಗಾ ಅವರಿಗೆ ಸ್ವಾಗತ. ನಾವು ಬದುಕುತ್ತಿರುವ ಗ್ರಹವನ್ನು ಬಡತನ ಮುಕ್ತವಾಗಿ ಮಾಡುವುದಕ್ಕೆ ಬದ್ಧವಾಗಿದ್ದೇವೆ ಎಂದು ವಿಶ್ವಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

Ajay Banga: ವಿಶ್ವಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಅಜಯ್‌ ಬಂಗಾ ಹೆಸರು ಶಿಫಾರಸು ಮಾಡಿದ ಬಿಡೆನ್‌

ಇದೇ ಮೊದಲ ಬಾರಿಗೆ ಭಾರತೀಯ ಮೂಲಕ ಅಮೆರಿಕನ್‌ ವಿಶ್ವಬ್ಯಾಂಕ್‌ನ (World Bank) ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು, ಫೆಬ್ರವರಿಯಲ್ಲಿ ಅಧಿಕಾರದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಡೇವಿಡ್‌ ಮಲ್ಪಾಸ್‌ ಅವರ ಸ್ಥಾನವನ್ನು ಬಂಗಾ ತುಂಬಲಿದ್ದಾರೆ. ಇದಕ್ಕೂ ಮೊದಲು ಜೆನರಲ್‌ ಅಟ್ಲಾಂಟಿಕ್‌ನ ಉಪಾಧ್ಯಕ್ಷ ಹಾಗೂ ಮಾಸ್ಟರ್‌ಕಾರ್ಡ್‌ನ (Master card) ಮುಖ್ಯಸ್ಥರಾಗಿ 63 ವರ್ಷದ ಬಂಗಾ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios