ಸ್ವಾತಂತ್ರ್ಯಾನಂತರ ಭಾರತದ ವಿದೇಶಿ ವಿನಿಮಯ ಸಂಗ್ರಹ $688 ಶತಕೋಟಿಗೆ ಏರಿಕೆಯಾಗಿದೆ. ಆದರೆ ಪಾಕಿಸ್ತಾನದ್ದು ಕೇವಲ $15 ಶತಕೋಟಿ ಮಾತ್ರ. ಭಾರತದ ಆರ್ಥಿಕ ಉದಾರೀಕರಣ ಮತ್ತು ಸೇವಾ ವಲಯದ ಬೆಳವಣಿಗೆ ಇದಕ್ಕೆ ಕಾರಣ. ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಮತ್ತು ಸಾಲದ ಅವಲಂಬನೆ ಅದರ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಭಾರತದ ಜಾಗತಿಕ ಆರ್ಥಿಕ ಸಂಬಂಧಗಳು ಬಲವಾಗಿವೆ.
ಭಾರತದ ವಿದೇಶಿ ಹಣ: 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಪಾಕಿಸ್ತಾನ ಭಾರತದಿಂದ ಬೇರ್ಪಟ್ಟಿತು. ಎರಡೂ ದೇಶಗಳು ಬೇರೆ ಬೇರೆ ಆರ್ಥಿಕ ಹಾದಿ ಹಿಡಿದವು. ಇಂದು ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ ಪಾಕಿಸ್ತಾನ ದಿವಾಳಿತನದ ಅಂಚಿನಲ್ಲಿದೆ. ಭಾರತದ ವಿದೇಶಿ ಹಣ ನಿರಂತರವಾಗಿ ಹೆಚ್ಚುತ್ತಿದೆ. ಪಾಕಿಸ್ತಾನ ವಿದೇಶಿ ಹಣ ತೋರಿಸಲು ಎಲ್ಲ ದೇಶಗಳ ಮುಂದೆ ಸಾಲವನ್ನು ಕೇಳುತ್ತಿದೆ.
ಎಕನಾಮಿಕ್ ಟೈಮ್ಸ್ ವರದಿಯಂತೆ ಭಾರತದ ವಿದೇಶಿ ಹಣ 688 ಶತಕೋಟಿ ಡಾಲರ್ (58.13 ಲಕ್ಷ ಕೋಟಿ ರೂ.) ಗಿಂತ ಹೆಚ್ಚಿದೆ. ಇದು ಪ್ರತಿ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಹೆಚ್ಚಾಗುತ್ತಲೇ ಹೋಗುತ್ತಿದೆ. ಆದರೆ, ಭಾರತದ ಬದ್ಧ ವೈರಿ ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಕೇವಲ 15 ಶತಕೋಟಿ ಡಾಲರ್ (1.26 ಲಕ್ಷ ಕೋಟಿ ರೂ.) ಮಾತ್ರ ಆಗಿದೆ.
ಭಾರತ-ಪಾಕ್‌ಗೆ ದುರ್ಬಲ ಆರ್ಥಿಕತೆ ಬಳುವಳಿ: ಸ್ವಾತಂತ್ರ್ಯಾನಂತರ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ದುರ್ಬಲ ಆರ್ಥಿಕತೆ ಬಳುವಳಿಯಾಗಿ ಬಂತು. 1991ರ ತನಕ ಭಾರತದ ಪ್ರಗತಿ ನಿಧಾನವಾಗಿತ್ತು. ಆಗ ವಿದೇಶಿ ಹಣ 2 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿತ್ತು. ಇದು 3 ವಾರದ ಆಮದುಗಳಿಗೆ ಸಾಕಾಗುತ್ತಿರಲಿಲ್ಲ. ಆ ಸಂಕಷ್ಟದಿಂದ ಆರ್ಥಿಕ ಉದಾರೀಕರಣ ಶುರುವಾಯಿತು. ರೂಪಾಯಿ ಅಪಮೌಲ್ಯ, ವ್ಯಾಪಾರ ನಿರ್ಬಂಧಗಳ ಕಡಿತ, ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಯಿತು. ಇದರಿಂದ ವಿದೇಶಿ ಹಣ ಹೆಚ್ಚಲು ನೆರವಾಯಿತು.
688 ಶತಕೋಟಿ ಡಾಲರ್ ತಲುಪಿದ ಭಾರತದ ವಿದೇಶಿ ಹಣ: ಮುಂದಿನ ದಶಕಗಳಲ್ಲಿ ಭಾರತದ ಸೇವಾ ವಲಯವು ವೇಗವಾಗಿ ಬೆಳೆಯಿತು. 2008 ರ ಹೊತ್ತಿಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು 300 ಶತಕೋಟಿ ಡಾಲರ್ ಮೀರಿತ್ತು. 2008ರ ಆರ್ಥಿಕ ಹಿಂಜರಿತ ಮತ್ತು COVID-19 ಸಾಂಕ್ರಾಮಿಕ ರೋಗದಂತಹ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇತ್ತು. 2025ರ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 688 ಶತಕೋಟಿ ಡಾಲರ್ ತಲುಪಲಿದೆ.
ಮತ್ತೊಂದೆಡೆ, ಪಾಕಿಸ್ತಾನದ ಆರ್ಥಿಕ ಪ್ರಗತಿಯ ಮೇಲೆ ಅಸ್ಥಿರತೆ ಪರಿಣಾಮ ಬೀರಿದೆ. 1960 ರ ದಶಕದಲ್ಲಿ ಅದರ ಆರ್ಥಿಕ ಸ್ಥಿತಿ ಚೆನ್ನಾಗಿತ್ತು. ನಂತರದ ರಾಜಕೀಯ ಅಸ್ಥಿರತೆ, ದೇಶದ ಆಡಳಿತದಲ್ಲಿ ಮಿಲಿಟರಿ ಹಸ್ತಕ್ಷೇಪ ಮತ್ತು ಅಸಮಂಜಸ ನೀತಿ ನಿರ್ದೇಶನಗಳು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾದವು. ಪಾಕಿಸ್ತಾನ ಅಮೆರಿಕ, ಚೀನಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲಗಳ ಮೇಲೆ ಅವಲಂಬಿತವಾಯಿತು. ಅದು ಇನ್ನೂ ಹೆಚ್ಚುತ್ತಲೇ ಹೋಗುತ್ತಿದೆ.
ಪಾಕಿಸ್ತಾನದಿಂದ ರಫ್ತು ಮಾಡಲಾಗುವ ಸರಕುಗಳು ಬಹಳ ಸೀಮಿತವಾಗಿವೆ. ಅದರಲ್ಲಿಯೂ ಮುಖ್ಯವಾಗಿ ಕಡಿಮೆ ಬೆಲೆಯ ಉಡುಪುಗಳನ್ನು ರಫ್ತು ಮಾಡುವುದರ ಮೇಲೆ ಕೇಂದ್ರೀಕರಿಸಿತು. 1980ರ ದಶಕದಿಂದ ಪಾಕಿಸ್ತಾನ 20ಕ್ಕೂ ಹೆಚ್ಚು IMF ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಪಾಕಿಸ್ತಾನವು 2023ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರ ವಿದೇಶಿ ವಿನಿಮಯ ಮೀಸಲು 4 ಶತಕೋಟಿ ಡಾಲರ್‌ಗಿಂತ ಕಡಿಮೆ ಆಯಿತು.
ಭೌಗೋಳಿಕ ರಾಜಕೀಯ ತಂತ್ರವು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರ್ಥಿಕ ಅಂತರವನ್ನು ಹೆಚ್ಚಿಸಿದೆ. ಭಾರತವು ಜಾಗತಿಕವಾಗಿ ಆರ್ಥಿಕ ರಾಜತಾಂತ್ರಿಕತೆ ಮತ್ತು ವ್ಯಾಪಾರ ಸಂಬಂಧಗಳನ್ನು ಹೆಚ್ಚು ಆಳವಾಗಿ ಇಟ್ಟುಕೊಂಡಿದೆ. ಮತ್ತೊಂದೆಡೆ, ಪಾಕಿಸ್ತಾನವು ಆರ್ಥಿಕ ಸಹಕಾರಕ್ಕಿಂತ ಭದ್ರತಾ ಮೈತ್ರಿಗಳಿಗೆ ಆದ್ಯತೆ ನೀಡಿದೆ. ಮೊದಲು ಅವರು ಅಮೆರಿಕಾ ಜೊತೆಗಿರಲು ಪ್ರಯತ್ನಿಸಿದರು. ಆದರೆ, ಅಮೇರಿಕಾ ಪಾಕ್‌ನ ಕುತಂತ್ರವನ್ನು ತಿಳಿದು ದೂರವಿಟ್ಟ ನಂತರ ಚೀನಾದ ಜೊತೆಗೆ ಸೇರಿಕೊಂಡಿದ್ದಾರೆ.


