ಎಚ್‌ಎಎಲ್‌ನ 15% ಷೇರು ವಿಕ್ರಯಕ್ಕೆ ಕೇಂದ್ರ ಸಿದ್ಧತೆ| ಆರ್ಥಿಕ ಸಂಕಷ್ಟ: ಸಂಪನ್ಮೂಲ ಸಂಗ್ರಹಕ್ಕೆ ಕೇಂದ್ರ ಯತ್ನ

ನವದೆಹಲಿ(ಆ.29): ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನ ಶೇ.15ರಷ್ಟುಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕೊರೋನಾ ವೈರಸ್‌ನಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಆರಂಭದಲ್ಲಿ ಎಚ್‌ಎಎಲ್‌ನ ಶೇ.10ರಷ್ಟುಷೇರುಗಳನ್ನು ಸರ್ಕಾರ ಮಾರಾಟ ಮಾಡಲಿದ್ದು, ಉಳಿದ ಶೇ.5ರಷ್ಟುಷೇರುಗಳನ್ನು ಮಾರಾಟ ಮಾಡುವ ಆಯ್ಕೆಯನ್ನು ಉಳಿಸಿಕೊಳ್ಳಲಿದೆ. ಎಚ್‌ಎಎಲ್‌ನ ಒಂದು ಷೇರಿಗೆ 1001 ರು. ಮೂಲ ದರವನ್ನು ನಿಗದಿಪಡಿಸುವ ಸಾಧ್ಯತೆ ಇದ್ದು, 5020 ಕೋಟಿ ರು. ಸಂಗ್ರಹ ಆಗುವ ನಿರೀಕ್ಷೆ ಹೊಂದಲಾಗಿದೆ.

ಬುಧವಾರ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಎಚ್‌ಎಲ್‌ ಒಂದು ಷೇರಿನ ದರ 1,177.60 ರು.ನಲ್ಲಿ ಕೊನೆಗೊಂಡಿದೆ. ಇದಕ್ಕಿಂತಲೂ ಶೇ.15ರಷ್ಟುಕಡಿಮೆ ದರಕ್ಕೆ ಸರ್ಕಾರ ಎಚ್‌ಎಲ್‌ ಮೂಲ ಷೇರಿನ ದರವನ್ನು ನಿಗದಿಪಡಿಸಿದೆ. ಅಲ್ಲದೇ ಚಿಲ್ಲರೆ ಹೂಡಿಕೆದಾರರು ನಿಗದಿ ಪಡಿಸಿರುವ ದರದ ಮೇಲೆ ಶೇ.5ರಷ್ಟುರಿಯಾಯಿತಿಯನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಚ್‌ಎಎಲ್‌ನಲ್ಲಿ ಕೇಂದ್ರ ಸರ್ಕಾರ ಶೇ.90ರಷ್ಟುಷೇರು ಹೊಂದಿದೆ.

ನಮ್ಮ ರಾಜ್ಯದ GST ಖೋತಾ: RBIನಿಂದ ಬಡ್ಡಿಗೆ ಹಣ ಕೊಡಿಸ್ತೀವಿ ಎಂದ ಕೇಂದ್ರ...

"