ವಿಮಾನಯಾನದಲ್ಲಿ ಭಾರತ ಶೀಘ್ರ 3ನೇ ದೊಡ್ಡ ಮಾರುಕಟ್ಟೆ: ಮೋದಿ
ಸದ್ಯದಲ್ಲೇ ವಿಮಾನಯಾನದಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರಿಂಡಿಯಾ ಮತ್ತು ಏರ್‌ಬಸ್ ನಡುವೆ 250 ವಿಮಾನಗಳ ಖರೀದಿಗೆ ನಡೆದಿರುವ ಒಪ್ಪಂದವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸದ್ಯದಲ್ಲೇ ವಿಮಾನಯಾನದಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ ಇನ್ನೂ 2000 ವಿಮಾನಗಳು ಬೇಕಾಗಲಿವೆ ಎಂದಿದ್ದಾರೆ.
ಏರಿಂಡಿಯಾ-ಏರ್‌ಬಸ್ ಒಪ್ಪಂದದ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಹಾಜರಿದ್ದ ಪ್ರಧಾನಿ ಮೋದಿ, ‘ಇದೊಂದು ಮೈಲುಗಲ್ಲಿನ ಒಪ್ಪಂದವಾಗಿದ್ದು, ನಮ್ಮ ನಾಗರಿಕ ವಿಮಾನಯಾನ ಸೇವೆ ದೇಶದ ಬೆಳವಣಿಗೆಯಲ್ಲಿ(development) ಸಮಗ್ರ ಪಾತ್ರ ವಹಿಸುತ್ತದೆ. ಹಾಗಾಗಿ ನಾಗರಿಕ ವಿಮಾನಯಾನ ವಲಯವನ್ನು ಅಭಿವೃದ್ಧಿ ಪಡಿಸುವುದು ನಮ್ಮ ರಾಷ್ಟ್ರೀಯ ನೀತಿಯ ಭಾಗವಾಗಿದೆ. ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ವಿಮಾನನಿಲ್ದಾಣಗಳ ಸಂಖ್ಯೆ 74ರಿಂದ 147ಕ್ಕೆ ಏರಿಕೆಯಾಗಿದೆ. ಸಧ್ಯದಲ್ಲೇ ಭಾರತ ವಿಶ್ವದಲ್ಲೇ 3ನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಲಿದೆ (3rd largest aviation market) ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಟಾ ಡೀಲ್‌ನಿಂದ ಅಮೆರಿಕದ 10 ಲಕ್ಷ ಮಂದಿಗೆ ಉದ್ಯೋಗ..!
ಏರ್‌ಬಸ್ ಕಂಪನಿಯ ಮಾತೃದೇಶವಾದ ಫ್ರಾನ್ಸ್ ಅಧ್ಯಕ್ಷ (President of France) ಎಮ್ಯಾನ್ಯುಯೆಲ್ ಮ್ಯಾಕ್ರಾನ್ (Emmanuel Macron) ಮಾತನಾಡಿ, ‘ಈ ಸಾಧನೆಯು ಏರ್‌ಬಸ್, ಭಾರತದೊಂದಿಗೆ ಸಹಕಾರದ ಹೊಸ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದೆ ಎಂದು ತೋರಿಸುತ್ತದೆ. ಭಾರತದ ಜತೆ ವ್ಯಾಪಾರ ಅಭಿವೃದ್ಧಿಗೆ ಫ್ರಾನ್ಸ್ ಬದ್ಧವಾಗಿದೆ’ ಎಂದಿದ್ದಾರೆ.
ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್