ಭಾರತದಲ್ಲಿದೆ ವಿಶ್ವದ ಅತ್ಯುತ್ತಮ ಡಿಜಿಟಲ್ ಎಕಾನಮಿ;ನೊಬೆಲ್ ಪುರಸ್ಕೃತ ಸ್ಪೆನ್ಸ್ ಮೆಚ್ಚುಗೆ!

ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ  ಮಿಚೆಲ್ ಸ್ಪೆನ್ಸ್ ಇದೀಗ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಇದು ವಿಶ್ವದ ಅತ್ಯುತ್ತಮ ಡಿಜಿಟಲ್ ಎಕಾನಮಿ ಎಂದು ಮಿಚೆಲ್ ಹೇಳಿದ್ದಾರೆ. ಇಷ್ಟೇ ಅಲ್ಲ ವಿಶ್ವದ ಡಿಜಿಟಲ್ ಎಕಾನಮಿಯಲ್ಲಿ ಭಾರತದ ಕೊಡುಗೆಯನ್ನು ಕೊಂಡಾಡಿದ್ದಾರೆ.
 

India successfully developed World best Digital economy says Nobel laureate Michael Spence ckm

ನವದೆಹಲಿ(ಫೆ.13) ಭಾರತ ವಿಶ್ವದ ಅತೀ ದೊಡ್ಡ ಡಿಜಿಟಲ್ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಭಾರತದಲ್ಲಿರುವ ಡಿಜಿಟಲ್ ಆರ್ಥಿಕತೆ ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಮೈಕೆಲ್ ಸ್ಪೆನ್ಸ್ ಹೇಳಿದ್ದಾರೆ.  ಭಾರತ ಈ ಡಿಜಿಟಲ್ ಎಕಾನಮಿ ಹಾಗೂ ಹಣಕಾಸು ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಮೈಕೆಲ್ ಹೇಳಿದ್ದಾರೆ. ಭಾರತದ ಮಾತ್ರವಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತದ ಡಿಜಿಟಲ್ ಎಕಾನಮಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಮೈಕೆಲ್ ಸ್ಪೆನ್ಸ್ ಹೇಳಿದ್ದಾರೆ.

ಭಾರತದ ಹೆಚ್ಚಿನ ಸಂಭಾವ್ಯ ಬೆಳವಣಿಗೆ ದರ ಹೊಂದಿರುವ ಪ್ರಮುಖ ಆರ್ಥಿಕತೆ ದೇಶವಾಗಿದೆ. ಭಾರತದ ಡಿಜಿಟಲ್ ಆರ್ಥಿಕತೆ ಮುಕ್ತವಾಗಿರುವ ಜೊತೆಗೆ ಸ್ಪರ್ಧಾತ್ಮಕವಾಗಿದೆ. ಹಲವು ಸೇವೆಗಳನ್ನು ನೀಡುವ ಮೂಲಕ ವಿಶ್ವದ ಅತ್ಯುತ್ತಮ ಡಿಜಿಟಲ್ ಆರ್ಥಿಕತೆಯಾಗಿ ಬೆಳೆದುನಿಂತಿದೆ ಎಂದು ಮೈಕೆಲ್ ಸ್ಪೆನ್ಸ್ ಹೇಳಿದ್ದಾರೆ.  ಗ್ರೇಟರ್ ನೋಯ್ಡಾದ ಬೆನ್ನೆಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೈಕೆಲ್ ಸ್ಪೆನ್ಸ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. 

'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್

ವಿಶ್ವ ಇದೀಗ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ನೋಡುತ್ತಿದೆ. ಈ ಬದಲಾವಣೆಗೆ ಭಾರತ ಮುನ್ನಡಿ ಬರೆದಿದಿದೆ. ಪ್ರಸಕ್ತ ಜಗತ್ತು ಹೊಸ ಹೊಸ ಸವಾಲು ಎದುರಿಸುತ್ತಿದೆ. ಎರಡನೇ ಮಹಾಯುದ್ಧದ ಬಳಿಕ ಆರ್ಥಿಕತೆ ವಿಕಾಸದ ಪಥದಲ್ಲಿ ಸಾಗಿತ್ತು. ಆದರೆ ಸಾಂಕ್ರಾಮಿಕ ರೋಗ, ಬೌಗೋಳಿಕ ಸಮಸ್ಸೆ, ರಾಜಕೀಯ ಸವಾಲು, ಹವಾಮಾನ ಆಘಾತ ಸೇರಿದಂತೆ ಹಲವು ಹೊಸ ಹೊಸ ಸವಾಲುಗಳಿಂದ 70 ವರ್ಷಗಳ ಹಳೇ ಆರ್ಥಿಕತೆ ಇದೀಗ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಈ ಆರ್ಥಿಕತೆಯಲ್ಲಿ ಡಿಜಿಟಲ್ ಎಕಾನಮಿ ಮಹತ್ವದ ನಾಯಕನಾಗಿ ಪಾತ್ರನಿರ್ವಹಿಸುತ್ತಿದೆ ಎಂದು ಮೈಕೆಲ್ ಸ್ಪೆನ್ಸ್ ಹೇಳಿದ್ದಾರೆ.  

ಭಾರತದಲ್ಲಿ ಡಿಜಿಟಲ್ ಎಕಾನಮಿ ಜಾರಿಗೆ ತಂದು ಮಹತ್ತರ ಬದಲಾವಣೆಗೆ ನಾಂದಿ ಹಾಡಿದ ಪ್ರಧಾನಿ ಮೋದಿಗೆ ಇದೀಗ ವಿಶ್ವದ ಎಲ್ಲೆಡೆಗಳಿಂದ, ಆರ್ಥಿಕ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಭಾರತದ ಯುಪಿಐ ಪಾವತಿ ಜಾಗತಿಕ ಮಟ್ಟದಲ್ಲೂ ಭಾರತ ಬಿಡುಗಡೆ ಮಾಡಿದೆ. ಫ್ರಾನ್ಸ್ ಬಳಿಕ ಶ್ರೀಲಂಕಾದಲ್ಲಿ ಯುಪಿಐ ಪಾವತಿ  ಜಾರಿಯಾಗಿದೆ. ಆದರೆ ಇದೇ ಡಿಜಿಟಲ್ ಆರ್ಥಿಕತೆಯನ್ನು ಕಾಂಗ್ರೆಸ್ ಸಂಸತ್ತಿನಲ್ಲಿ ವ್ಯಂಗ್ಯವಾಡಿತ್ತು. ಅದರಲ್ಲೂ ಕಾಂಗ್ರೆಸ್ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಲೇವಡಿ ಮಾಡಿದ್ದರು.  ಇದೀಗ ಜಾಗತಿಕವಾಗಿ ಮನ್ನಣೆ ಸಿಗುತ್ತಿದೆ. ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮಾದರಿಯಾಗಿಟ್ಟುಕೊಂಡು ವಿವಿದ ದೇಶಗಳು ತಮ್ಮ ತಮ್ಮ ದೇಶದಲ್ಲಿ ಡಿಜಿಟಲ್ ಎಕಾನಮಿ ಜಾರಿಗೊಳಿಸುತ್ತಿದೆ.

ಡಿಜಿಟಲ್ ಆರ್ಥಿಕತೆಯಲ್ಲಿ ಮುಂದಿನ 2 ವರ್ಷಗಳಲ್ಲಿ 1 ಕೋಟಿ ಉದ್ಯೋಗದ ಗುರಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Latest Videos
Follow Us:
Download App:
  • android
  • ios