ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಭಾರತದ ಶ್ರೀಮಂತ ಉದ್ಯಮಿಗಳ ಪಟ್ಟಿ ದೊಡ್ಡದಿದೆ. ಈ ಪೈಕಿ ಈ ಕುಟುಂಬ ಪ್ರತಿ ದಿನ 27 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದೆ. ಹೀಗೆ ದಿನ ಬೆಳಗಾದರೆ ಕೋಟಿ ಕೋಟಿ ರೂಪಾಯಿ ದಾನ ಮಾಡುತ್ತಿರುವ ಭಾರತದ ಅತ್ಯಂತ ಶ್ರೀಮಂತ ಮುಸ್ಲಿಮ್ ಉದ್ಯಮಿ ಯಾರು?
ನವದೆಹಲಿ(ಫೆ.23) ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಹಲವು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಅದರಲ್ಲೂ ಏಷ್ಯಾ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ತುಂಬಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಉದ್ಯಮಿಗಳು ತಮ್ಮ ಉದ್ಯಮ, ವ್ಯವಹಾರ ಜೊತೆಗೆ ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷ ಅಂದರೆ ಶ್ರೀಮಂತ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ದೇಣಿಗೆ, ದಾನದ ಪಟ್ಟಿಯಲ್ಲಿ ಭಾರತದ ಈ ಮುಸ್ಲಿಮ್ ಉದ್ಯಮಿ ಮೊದಲ ಸ್ಥಾನದಲ್ಲಿದ್ದಾರೆ. ಕಾರಣ ಈ ಕುಟುಂಬ ಪ್ರತಿ ದಿನ ಬರೋಬ್ಬರಿ 27 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದೆ. ದಿನ ಬಳಗಾದರೆ ಕೋಟಿ ಕೋಟಿ ರೂಪಾಯಿ ದಾನದ ರೂಪದಲ್ಲಿ ನೀಡುತ್ತಿರುವ ಈ ಶ್ರೀಮಂತ ಉದ್ಯಮಿ ಬೇರೆ ಯಾರು ಅಲ್ಲ, ಒನ್ ಅಂಡ್ ಒನ್ಲಿ ಅಜೀಮ್ ಪ್ರೇಮ್‌ಜಿ.
ವಿಪ್ರೋ ಸಂಸ್ಥಾಪಕ ಚೇರ್ಮನ್ ಅಜೀಮ್ ಪ್ರೇಮ್‌ಜಿ ಹಾಗೂ ಕುಟುಂಬ ಪ್ರತಿ ದಿನ 27 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದೆ. ಅದು ಅಚ್ಚರಿಯಾದರೂ ಸತ್ಯ. ವಿಶ್ವದಲ್ಲಿ ಹೆಸರು ಮಾಡಿರುವ ಐಟಿ ಕಂಪನಿ ವಿಪ್ರೋ ಸಂಸ್ಥೆಯ ಚೇರ್ಮೆನ್ ಅಜೀಮ್ ಪ್ರೇಮ್‌ಜಿ ಭಾರತದ ಶ್ರೀಮಂತ ಮುಸ್ಲಿಮ್. ಪೋರ್ಬ್ಸ್ ಪ್ರಕಾರ ಅಜೀಮ್ ಪ್ರೇಮ್‌ಜಿ ಒಟ್ಟು ಆಸ್ತಿ ಬರೋಬ್ಬರಿ 12.2 ಬಿಲಿಯನ್ ಅಮೆರಿಕನ್ ಡಾಲರ್.
ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?
ಅಜೀಮ್ ಪ್ರೇಮ್‌ಜಿ ಇಡೀ ಕುಟುಂಬ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಪ್ರೇಮ್‌ಜಿ ಹಲವು ಜನರೇಶನ್ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ. ಆಯಿಲ್ ಮಿಲ್ ಸೇರಿದಂತೆ ಹಲವಉ ಉದ್ಯಮಗಳನ್ನು ಅಜೀಮ್ ಪ್ರೇಮ್‌ಜಿ ತಂದೆ ಹೆಚ್ಎಂ ಹಶನ್ ಪ್ರೇಮ್‌ಜಿ ಹುಟ್ಟು ಹಾಕಿದ್ದರು. ಸ್ವಾತಂತ್ರ್ಯಕ್ಕೂ ಮೊದಲೇ ಭಾರತದಲ್ಲಿ ಅತೀ ದೊಡ್ಡ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. 1947ರಲ್ಲಿ ಭಾರತ ಇಬ್ಬಾಗವಾದಾಗ, ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ, ಇದೇ ಹಶನ್ ಪ್ರೇಮ್‌ಜಿಗೆ ಅತೀ ದೊಡ್ಡ ಆಫರ್ ನೀಡಿದ್ದರು. ಭಾರತದಲ್ಲಿರುವ ಉದ್ಯಮವನ್ನು ಪಾಕಿಸ್ತಾನದಲ್ಲಿ ಆರಂಭಿಸುವಂತೆ ಸೂಚಿಸಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನದಲ್ಲಿ ನೆಲೆ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದರು. ಉದ್ಯಮಕ್ಕಾಗಿ ಎಲ್ಲಾ ಮೂಲಭೂತ ಸೌಕರ್ಯ, ಇತರ ನೆರವು ನೀಡುವುದಾಗಿ ಘೋಷಿಸಿದ್ದರು. ಆದರೆ ಹಶನ್ ಪ್ರೇಮ್‌ಜಿ ಈ ಆಫರ್ ನಿರಾಕರಿಸಿದ್ದರು. ಭಾರತದಲ್ಲೇ ಉಳಿದು, ತಮ್ಮ ಉದ್ಯಮಿ ವಿಸ್ತರಿಸಲು ಮುಂದಾಗಿದ್ದರು. ಇದೀಗ ಪ್ರೇಮ್‌ಜಿ ಕುಟುಂಬ ಭಾರತದ ಅತೀ ಶ್ರೀಮಂತ ಮುಸ್ಲಿಮ್ ಕುಟುಂಬ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಜೀಮ್ ಪ್ರೇಮ್‌ಜಿ ದಾನ
ಅಜೀಮ್ ಪ್ರೇಮ್‌ಜಿ ವಿಪ್ರೋ ಮಾತ್ರವಲ್ಲ ಇತರ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರೇಮ್‌ಜಿ ಎಲ್ಲಾ ಉದ್ಯಮಗಳು ಯಶಸ್ವಿಯಾಗಿದೆ. 2020-21ರ ಸಾಲಿನಲ್ಲಿ ಅಜೀಮ್ ಪ್ರೇಮ್‌ಜಿ ಬರೋಬ್ಬರಿ 9,713 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. 2021ರಲ್ಲಿ ಹುರನ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2020-21ರ ಸಾಲಿನಲ್ಲಿ ಅಜೀಮ್ ಪ್ರೇಮ್‌ಜಿ ದಾನದ ಕುರಿತು ಸ್ಫೋಟಕ ಮಾಹಿತಿ ಬಹಿರಂಗಗೊಂಡಿತ್ತು. ಅಂದರೆ ಪ್ರತಿ ದಿನ ಅಜೀಮ್ ಪ್ರೇಮ್‌ಜಿ 27 ಕೋಟಿ ರೂಪಾಯಿ ದೇಣಿಗೆ ನೀಡಿದಂತಾಗಿದೆ.
ತಂದೆ ಹಶಮ್ ಪ್ರೇಮ್‌ಜಿಯಿಂದ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ವಹಿಸಿಕೊಂಡ ಬಳಿಕ ಪ್ರೇಮ್‌ಜಿ ಉದ್ಯಮಗಳು ಹೊಸ ಅಧ್ಯಾಯ ಆರಂಭಿಸಿತ್ತು. ಈ ಪೈಕಿ ನಷ್ಟದಲ್ಲಿದ್ದ ಆಯಿಲ್ ಮಿಲ್ ಕಂಪನಿ ಲಾಭದತ್ತ ತಿರುಗಿತ್ತು. ಹಂತ ಹಂತವಾಗಿ ಅಜೀಮ್ ಪ್ರೇಮ್‌ಜಿ ಉದ್ಯಮ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದರು. 1977ರಲ್ಲಿ ಅಜೀಮ್ ಪ್ರೇಮ್‌ಜಿ ಐಟಿ ಕ್ಷೇತ್ರಕ್ಕೆ ಕಾಲಿಟ್ಟರು. ಇದೀಗ ವಿಶ್ವದ ಅತೀ ದೊಡ್ಡ ಐಟಿ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ವಿಪ್ರೋ ಸ್ಥಾನ ಪಡೆದಿದೆ.
500 ಕೋಟಿ ಮೌಲ್ಯದ ಷೇರನ್ನು ಪುತ್ರರಿಗೆ ಉಡುಗೊರೆಯಾಗಿ ನೀಡಿದ ವಿಪ್ರೋ ಅಜೀಂ ಪ್ರೇಮ್‌ಜೀ!
