ಆದರೆ, ಈ ವಹಿವಾಟು ಕಂಪನಿಯಲ್ಲಿನ ಒಟ್ಟಾರೆ ಪ್ರಮೋಟರ್‌ಗಳು ಮತ್ತು ಪ್ರಮೋಟರ್‌ಗಳು ಹೊಂದಿರುವ ಷೇರುಗಳಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ. 

ಮುಂಬೈ (ಜ.25): ವಿಪ್ರೋ ಲಿಮಿಟೆಡ್‌ ಕಂಪನಿಯ ಚೇರ್ಮನ್‌ ಅಜೀಂ ಪ್ರೇಮ್‌ಜೀ ಅಂದಾಜು 500 ಕೋಟಿ ರೂಪಾಯಿ ಮೌಲ್ಯದ 1 ಕೋಟಿ ಷೇರುಗಳನ್ನು ತಮ್ಮ ಇಬ್ಬರು ಪುತ್ರರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ದೇಶದ ಪ್ರಮುಖ ಐಟಿ ಕಂಪನಿಯಲ್ಲಿ ಅವರು ಹೊಂದಿದ್ದ ಪಾಲಿನ ಶೇ.0.2ರಷ್ಟಾಗಿದೆ. ರಿಶದ್‌ ಪ್ರೇಮ್‌ಜೀ ಹಾಗೂ ತಾರಿಕ್‌ ಪ್ರೇಮ್‌ಜೀ ಇಬ್ಬರಿಗೂ ತಲಾ 51,15,090 ಷೇರುಗಳನ್ನು ತಂದೆಯಿಂದ ಉಡುಗೊರೆಯಾಗಿ ಪಡೆಯಲಿದ್ದಾರೆ. ಜನವರಿ 22 ರಂದು ಎಕ್ಸ್‌ಚೇಂಜ್‌ಗೆ ನೀಡಿರುವ ಫೈಲಿಂಗ್‌ನಲ್ಲಿ ಈ ವಿಚಾರ ತಿಳಿಸಲಾಗಿದೆ. ಆ ದಿನದಂದು 1 ಕೋಟಿ ಷೇರುಗಳ ಮೌಲ್ಯ 488.95 ಕೋಟಿ ರೂಪಾಯಿ ಆಗಿತ್ತು.

ಈ ವಹಿವಾಟು "ಕಂಪನಿಯಲ್ಲಿನ ಒಟ್ಟಾರೆ ಪ್ರವರ್ತಕರು ಮತ್ತು ಪ್ರವರ್ತಕರ ಗುಂಪಿನ ಷೇರುಗಳನ್ನು ಬದಲಾಯಿಸುವುದಿಲ್ಲ ಮತ್ತು ಮೇಲಿನ ಉದ್ದೇಶಿತ ವಹಿವಾಟಿನ ನಂತರವೂ ಹಾಗೆಯೇ ಉಳಿಯುತ್ತದೆ" ಎಂದು ಕಂಪನಿ ಹೇಳಿದೆ. ಹಾಗಿದ್ದರೂ, ಅಜೀಂ ಪ್ರೇಮ್‌ಜಿ ಅವರ ವೈಯಕ್ತಿಕ ಷೇರುಗಳು ಈಗ 4.12% ಕ್ಕೆ ಪರಿಷ್ಕರಿಸಲ್ಪಟ್ಟಿವೆ. ಪ್ರಸ್ತುತ ಅವರು ಕಂಪನಿಯಲ್ಲಿ 22.07 ಕೋಟಿ ಷೇರುಗಳಿಗೆ ಸಮನಾಗಿರುತ್ತದೆ. ಆದರೆ ಅವರ ಪುತ್ರರದ್ದು ತಲಾ 0.13% ಆಗಿರಲಿದೆ. ಅಜೀಂ ಪ್ರೇಮ್‌ಜಿ ಅವರ ಪತ್ನಿ ಯಾಸ್ಮೀನ್ ಸೇರಿದಂತೆ ಪ್ರೇಮ್‌ಜಿ ಕುಟುಂಬವು ವಿಪ್ರೊದಲ್ಲಿ 4.43% ಪಾಲನ್ನು ಹೊಂದಿದೆ. ರಿಶಾದ್ ಪ್ರೇಮ್‌ಜಿ ವಿಪ್ರೊದ ಅಧ್ಯಕ್ಷರಾಗಿದ್ದರೆ, ಅವರ ಸಹೋದರ ತಾರಿಕ್ ಅವರ ತಂದೆ ಸ್ಥಾಪಿಸಿದ ಸಂಸ್ಥೆಯಾದ ಅಜೀಂ ಪ್ರೇಮ್‌ಜಿ ಎಂಡೋಮೆಂಟ್ ಫಂಡ್‌ನಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಅಂಬಾನಿಗಿಂತಲೂ ಶ್ರೀಮಂತರಾಗಿದ್ದ ಈ ವ್ಯಕ್ತಿಯ ಒಂದು ತಪ್ಪು 665000 ಕೋಟಿ ರೂ ಕಂಪನಿಯ ಸ್ಥಾಪನೆಗೆ ಕಾರಣವಾಯ್ತು

ಡಿಸೆಂಬರ್ 31 ರ ಹೊತ್ತಿಗೆ, ಪ್ರಮೋಟರ್‌ ಮತ್ತು ಪ್ರಮೋಟರ್‌ ಗುಂಪು ವಿಪ್ರೋದಲ್ಲಿ 72.90% ಪಾಲನ್ನು ಹೊಂದಿದ್ದು, ಸಾರ್ವಜನಿಕ ಷೇರುಗಳು 26.97% ರಷ್ಟಿದೆ. ಉದ್ಯೋಗಿ ಟ್ರಸ್ಟ್ ಮತ್ತು ಸಾರ್ವಜನಿಕರಲ್ಲದ, ಪ್ರವರ್ತಕರಲ್ಲದ ಷೇರುದಾರರು ಉಳಿದವುಗಳನ್ನು ಹೊಂದಿದ್ದಾರೆ.

ವಿಪ್ರೋ ಮಾಜಿ ಸಿಎಫ್‌ಒ ವಿರುದ್ಧ 25ಕೋಟಿ ಪರಿಹಾರ ಕೇಳಿ ಬೆಂಗಳೂರಿನಲ್ಲಿ ಕೇಸ್‌ ಹಾಕಿದ ಅಜೀಂ ಪ್ರೇಮ್‌ಜಿ