ವಿಶ್ವಸಂಸ್ಥೆ (ಫೆ. 21): ವಿಶ್ವ ಆರೋಗ್ಯ ಸಂಸ್ಥೆ ಸುಸ್ಥಿರತೆ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಂಕವನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತ ಕ್ರಮವಾಗಿ 77 ಮತ್ತು 131ನೇ ಸ್ಥಾನ ಪಡೆದುಕೊಂಡಿದೆ.

ಕೊರೋನಾದಿಂದ ಜಾಗತಿಕ ಆರ್ಥಿಕತೆಗೆ 60 ಲಕ್ಷ ಕೋಟಿ ನಷ್ಟ

ಒಟ್ಟು 180 ದೇಶಗಳ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬರಿಗೆ ತಲಾ ಇಂಗಾಲ ಹೊರ ಸೂಸುವಿಕೆ ಪ್ರಮಾಣವನ್ನು ಆಧರಿಸಿ ಸುಸ್ಥಿರತೆ ಸೂಚ್ಯಂಕ ಹಾಗೂ ಬದುಕುಳಿಯುವ ಮತ್ತು ಆರೋಗ್ಯವಂತ ಮಕ್ಕಳ ಪ್ರಮಾಣ ಆಧರಿಸಿ ಮಕ್ಕಳ ಅಭಿವೃದ್ಧಿ ಸೂಚ್ಯಂಕವನ್ನು ತಯಾರಿಸಲಾಗಿದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬದುಕುಳಿಯುವಿಕೆ ಹಾಗೂ ಆರೋಗ್ಯದ ಪ್ರಮಾಣ, ಗರ್ಭಿಣಿ ಹಾಗೂ ಮಕ್ಕಳ ಆರೋಗ್ಯ ಸೇವೆ, ಅಗತ್ಯ ಶುಚಿತ್ವ ಹಾಗೂ ನೈರ್ಮಲ್ಯ, ಶೈಕ್ಷಣಿಕ ಬೆಳವಣಿಗೆ, ಬೆಳವಣಿಗೆ ಹಾಗೂ ಪೌಷ್ಠಿಕಾಂಶ ಮುಂತಾದ ಸೌಲಭ್ಯಗಳನ್ನು ಪರಿಗಣಿಸಿ ಮಕ್ಕಳ ಅಭಿವೃದ್ದಿ ಸೂಚ್ಯಂಕವನ್ನು ತಯಾರಿಸಲಾಗಿದೆ.

ಬಜೆಟ್‌ ಎಫೆಕ್ಟ್: ಸಿಗರೆಟ್‌ ದರ ಏರಿಕೆ, ಧೂಮಪಾನಿಗಳಿಗೆ ಬಿಸಿ!

ಪರಿಸರದಲ್ಲಿ ಹೊರಸ ಸೂಸುವ ಇಂಗಾಲದ ಪ್ರಮಾಣವನ್ನು ಪರಿಗಣಿಸಿ ಸುಸ್ಥಿರತೆ ಸೂಚ್ಯಂಕ ನಿಗದಿ ಪಡಿಸಲಾಗಿದೆ. ಇವೆರರಡಲ್ಲೂ ಭಾರತ ಕಳಪೆ ಸ್ಥಾನ ದಾಖಲಿಸಿದೆ.