ನವದೆಹಲಿ(ಡಿ.16): ಭಾರತೀಯ ಅಂಚೆ ಮತ್ತು ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌(ಐಪಿಪಿಬಿ)ನ ಗ್ರಾಹಕರಿಗೂ ಇನ್ನು ಮುಂದೆ ಡಿಜಿಟಲ್‌ ಹಣಕಾಸು ಸೇವೆ ಲಭ್ಯವಾಗಲಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಹಣಕಾಸು ಸೇವೆ ಒದಗಿಸುವ ಯುಪಿಐ ಆಧಾರಿತ ‘ಡಾಕ್‌ಪೇ’ ಆ್ಯಪ್‌ ಅನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಮಂಗಳವಾರ ಅನಾವರಣಗೊಳಿಸಿದ್ದಾರೆ

ಬಿಗ್‌ ಬಜಾರನ್ನೇ ಶಾಪಿಂಗ್‌ ಮಾಡಿದ ಮುಕೇಶ್‌ ಅಂಬಾನಿ!.

ಉಳಿದ ಬ್ಯಾಂಕ್‌ಗಳ ರೀತಿ ಅಂಚೆ ಪೇಮೆಂಟ್‌ ಬ್ಯಾಂಕ್‌ನಲ್ಲಿ ಡಿಜಿಟಲ್‌ ಸೇವೆ ಇರಲಿಲ್ಲ. ಹೀಗಾಗಿ ಖಾತೆಗೆ ಹಣ ಹಾಕಲು ಅಥವಾ ಹಣ ತೆಗೆಯುವ ಯಾವುದೇ ವ್ಯವಹಾರಕ್ಕೂ ಗ್ರಾಹಕರು ಖುದ್ದಾಗಿ ಅಂಚೆ ಕಚೇರಿಗೆ ತೆರಳಬೇಕಿತ್ತು. ಆದರೆ, ಇನ್ನುಮುಂದೆ ಅಂಚೆ ಗ್ರಾಹಕರು ಕೂಡ ತಮ್ಮ ಮನೆಯಲ್ಲೇ ಕುಳಿತು ವ್ಯವಹರಿಸಬಹುದಾಗಿದೆ. ಡಾಕ್‌ಪೇ ಆ್ಯಪ್‌ನ ಮೂಲಕ ಗ್ರಾಹಕರು ಹಣ ವರ್ಗಾವಣೆ, ಕ್ಯೂಆರ್‌ ಕೋಡ್‌ ಸ್ಕಾ್ಯನಿಂಗ್‌ ಹಾಗೂ ಅಗತ್ಯ ಸೇವೆಗಳು ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಹಣ ಪಾವತಿ ಮಾಡಬಹುದಾಗಿದೆ. ಅಲ್ಲದೇ ದೇಶದ ಯಾವುದೇ ಬ್ಯಾಂಕಿನ ಗ್ರಾಹಕರ ಜೊತೆ ಬ್ಯಾಂಕಿಂಗ್‌ ವಹಿವಾಟು ನಡೆಸಬಹುದಾಗಿದೆ.

ಡಾಕ್‌ಆ್ಯಪ್‌ ಬಿಡುಗಡೆಯ ಬಳಿಕ ಟ್ವೀಟ್‌ ಮಾಡಿರುವ ಸಚಿವ ರವಿಶಂಕರ್‌ ಪ್ರಸಾದ್‌, ‘ಇಂದೊಂದು ವಿನೂತನ ಸೇವೆಯಾಗಿದ್ದು, ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ ಸೇವೆಯನ್ನು ಒದಗಿಸುವುದರ ಜೊತೆಗೆ ಜನರು ತಮ್ಮ ಮನೆ ಬಾಗಿಲಿನಲ್ಲೇ ಅಂಚೆ ಹಾಗೂ ಅಂಚೆ ಹಣಕಾಸು ಸೇವೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಕೊರೋನೊತ್ತರ ಭಾರತದಲ್ಲಿ ಅಂಬಾನಿ-ಅದಾನಿ ಏಕಸ್ವಾಮ್ಯ?

ಏನಿದು ಡಾಕ್‌ ಪೇ?

ಗೂಗಲ್‌ ಪೇ, ಪೋನ್‌ ರೀತಿ ಡಾಕ್‌ಪೇ ಕೂಡ ಯುಪಿಐ ಆಧಾರಿತ ಡಿಜಿಟಲ್‌ ಪೇಮೆಂಟ್‌ ಆ್ಯಪ್‌ ಆಗಿದೆ. ಗ್ರಾಹಕರು ಯುಪಿಐ ಐಡಿ ಐಡಿ ಹಾಗೂ ಯುಪಿಐ ಪಿನ್‌ ಅನ್ನು ಸೃಷ್ಟಿಸಿ ಹಣಕಾಸು ಸೇವೆಯನ್ನು ಪಡೆಯಬಹುದಾಗಿದೆ. ಜೊತೆಗೆ ವಿವಿಧ ಬ್ಯಾಂಕ್‌ ಖಾತೆಗಳನ್ನು ಈ ಆ್ಯಪ್‌ಗೆ ಜೋಡಣೆ ಮಾಡಲು ಸಾಧ್ಯವಿದೆ. ಈ ಆ್ಯಪ್‌ನ ಮೂಲಕ ಗ್ರಾಹಕರು ಬ್ಯಾಂಕಿಂಗ್‌ ಸೇವೆ, ಹಣ ವರ್ಗಾವಣೆ ಹಾಗೂ ಹಣಪಾವತಿ ಮಾಡಬಹುದಾಗಿದೆ.