ಭಾರತದ ಆರ್ಥಿಕತೆ ಅವಶ್ಯಕತೆ ಪೂರೈಸಲು 4 ರಿಂದ 5 SBI ರೀತಿ ಬ್ಯಾಂಕ್ ಅಗತ್ಯವಿದೆ: ನಿರ್ಮಲಾ!

  • ಭಾರತದ ಭವಿಷ್ಯದ ಬ್ಯಾಂಕ್ ಡಿಜಿಲೀಕರಣವಾಗಿರುತ್ತದೆ ಎಂದ ನಿರ್ಮಲಾ
  • ಬದಲಾಗುತ್ತಿರುವ ಭಾರತದ ಆರ್ಥಿಕತೆ ಅವಶ್ಯಕತೆ ಪೂರೈಸಲು ಹೆಚ್ಚು ಬ್ಯಾಂಕ್ ಬೇಕು
  • ಭಾರತೀಯ ಬ್ಯಾಂಕ್ ಸಂಘದ 74ನೇ ವಾರ್ಷಿಕ ಸಭೆಯಲ್ಲಿ ನಿರ್ಮತಾ ಸೀತಾರಾಮನ್
India needs banks like SBI to meet changing requirements of Economy says Nirmala Sitharaman ckm

ನವದೆಹಲಿ(ಸೆ.26): ಭಾರತದ ಆರ್ಥಿಕತೆ(Indian Economy) ತ್ವರಿತ ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ.  ಹೀಗಾಗಿ ಆರ್ಥಿಕತೆಯ ಅವಶ್ಯಕತೆಗಳನ್ನು ಪೂರೈಸಲು ಭಾರತಕ್ಕೆ ಇನ್ನೂ 4 ರಿಂದ 5 ಎಸ್‌ಬಿಐ(SBI) ರೀತಿಯ ಬ್ಯಾಂಕ್(Bank) ಅವಶ್ಯಕತೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದ್ದಾರೆ.

ಕೆಲಸ ಬೇಗನೆ ಮುಗಿಸಿಕೊಳ್ಳಿ, ಅಕ್ಟೋಬರ್‌ನಲ್ಲಿ ಒಟ್ಟು 21 ದಿನ ಬ್ಯಾಂಕ್ ರಜೆ; ಇಲ್ಲಿದೆ RBI ಕ್ಯಾಲೆಂಡರ್!

ಭಾರತೀಯ ಬ್ಯಾಂಕ್ ಸಂಘದ(IBA)74ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಸೀತಾರಾಮನ್, ಉದ್ಯಮದ ವಾಸ್ತವಗಳನ್ನು ಬದಲಾಯಿಸುವ ಹಾಗೂ ಭಾರತದ ಆರ್ಥಿಕತೆಯಲ್ಲಿ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕಿಂಗ್ ವ್ಯವಸ್ಥೆಯನ್ನು(Banking System) ಮತ್ತಷ್ಟು ಬಲಪಡಿಸಬೇಕಿದೆ ಎಂದರು.

 

ಪ್ರತಿ ಬಾರಿ ಹೊಸ ಹೊಸ ಸವಾಲುಗಳನ್ನು ಎದುರಿಸಲೇಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸವಾಲಿಗೆ ಪರಿಹಾರ ಹುಡುಕಲು ದೊಡ್ಡ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ದೇಶದ ಆರ್ಥಿಕತೆ ಹೊಸ ರೂಪದೊಂದಿಗೆ ಬೆಳೆಯುತ್ತಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ವೃದ್ಧಿಸುವ ಹಾಗೂ ಸಂದರ್ಭಕ್ಕೆ ತಕ್ಕಂತೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕಿಗೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕಾರ್ಡ್ ಟೋಕನೈಸೇಷನ್: ಮುಂದಿನ ವರ್ಷದಿಂದ ಆನ್ಲೈನ್ ಪಾವತಿ ಸುರಕ್ಷಿತ

ಕೊರೋನಾ(Coronavirus) ವಕ್ಕರಿಸಿದ ಬಳಿಕ ಎಲ್ಲಾ ಕ್ಷೇತ್ರದ ಸ್ವರೂಪ ಬದಲಾಗಿದೆ. ಅದರಲ್ಲಿ ಪ್ರಮುಖವಾಗಿ ಡಿಜಿಟಲ್ ಬ್ಯಾಂಕಿಂಗ್(Digital Banking) ಹೆಚ್ಚು ಪರಿಣಾಮಕಾರಿಯಾಗಿದೆ. ಭಾರತ ಈಗಾಗಲೇ ಡಿಜಿಟಲ್ ಬ್ಯಾಂಕಿಂಗ್ ಪರಿಣಾಮಕಾರಿಯಾಗಿ ಜಾರಿ ಮಾಡಿದೆ. ಅಭಿವೃದ್ಧಿ ಹೊಂದುತ್ತಿರುವ ಹಲವು ದೇಶಗಳಲ್ಲಿ ಕೊರೋನಾ ಸಂದರ್ಭದಲ್ಲಿ ಗ್ರಾಹಕರನ್ನು ತಲುಪಲು ಬ್ಯಾಂಕ್‌ಗಳಿಗೆ ಸಾಧ್ಯವಾಗಿಲ್ಲ. ಆದರೆ ಭಾರತ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಪ್ರತಿ ಗ್ರಾಹಕರನ್ನು ತಲುಪಿದೆ. ಹಣ ವರ್ಗಾವಣೆ, ಜಮೆ ಸೇರಿದಂತೆ ಭಾರತ ಅತ್ಯಂತ ಸುಲಭವಾಗಿ ಮಾಡುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಭಾರತದ ಬ್ಯಾಂಕಿಂಗ್ ಸ್ವರೂಪ ಹೇಗಿರಬೇಕು? ಬದಲಾದ ಜಗತ್ತಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸುರಕ್ಷತೆ ಕುರಿತು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.

ಬ್ಯಾಂಕ್ ಲಾಕರ್ ಹೊಸ ನಿಯಮ: ವಸ್ತು ಕಳೆದು ಹೋದ್ರೆ ಸಿಗಲಿದೆ ಪರಿಹಾರ!

ಭವಿಷ್ಯದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕೃತ ಪ್ರಕ್ರಿಯೆಯಿಂದ ನಡೆಸಲಾಗುತ್ತದೆ. ಹೀಗಾಗಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಗ್ರಾಹಕರ ಸುರಕ್ಷತೆ ಕುರಿತು ನಿಗಾವಹಿಸಬೇಕು. ಪ್ರತಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

UPI ಹಣ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಭಾರತದಲ್ಲಿ UPI ಪಾವತಿ ಪರಿಣಾಮಕಾರಿಯಾಗಿದೆ. ಜೊತೆಗೆ ಜನಸಾಮಾನ್ಯರಿಗೂ ತಲುಪಿದೆ. ರೂಪೆ ಕಾರ್ಡ್ ವಿಶ್ವದ ಹಲವು ರಾಷ್ಟ್ರಗಳು ಸ್ವೀಕರಿಸಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ UPI ಹಣ ಪಾವತಿ ಸುಧಾರಣೆ ಕಾಣಬೇಕಿದೆ ಎಂದು ಸೀತಾರಾಮನ್ ಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಸಲಹೆ ನೀಡಿದರು. 

Latest Videos
Follow Us:
Download App:
  • android
  • ios