ಸ್ಯಾಲರಿಯಿಂದ ಕಟ್ ಆಗಲ್ಲ, 3 ತಿಂಗಳು ಸರ್ಕಾರವೇ ತುಂಬಲಿದೆ PF ಹಣ; ಷರತ್ತು ಅನ್ವಯ!
1.3 ಲಕ್ಷ ಜನರಿಂದ ಪಿಎಫ್ ಖಾತೆ ಹಣ ಹಿಂತೆಗೆತ!
ಇಷ್ಟು ದಿನ ಕಡಿತಗೊಳ್ಳುತ್ತಿದ್ದ ಪಿಎಫ್ ಹಣ ಮುಂದಿನ 3 ತಿಂಗಳ ಕಡಿತವಾಗಲ್ಲ. ನೌಕರರ ವೇತನದಿಂದ ಕಡಿತಗೊಳ್ಳಬೇಕಿದ್ದ ಶೇಕಡಾ 12 ರಷ್ಟು ಹಾಗೂ ಶೇಕಡಾ 12ರಷ್ಟು ಪಿಎಫ್ ಕೊಡುಗೆಯನ್ನೂ ಸರ್ಕಾರವೇ ತುಂಲಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಿದೆ.
ಈ ಯೋಜನಗೆ ಯಾರು ಅರ್ಹರು:
ಪ್ರತಿ ತಿಂಗಳು 15,000 ಹಾಗೂ ಅಥವಾ ಅದಕ್ಕಿಂತ ಕಡಿಮೆ ವೇತನವಿರುವ ನೌಕರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ಸಂಸ್ಥೆಯಲ್ಲಿ ಕನಿಷ್ಠ 100 ನೌಕರರಿದ್ದು, ಶೇಕಡಾ 90 ರಷ್ಟು ನೌಕರರ ವೇತನ 15,000 ರೂಪಾಯಿಗಿಂತ ಕಡಿಮೆ ಇದ್ದರೆ ಇಂತಹ ಸಂಸ್ಥೆ ಅಥವಾ ಕಂಪನಿಯ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.
15,000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರು ಕೂಡ ಈ ಯೋಜನೆಗೆ ಅರ್ಹರಾಗಿದ್ದಾರೆ. ಇದಕ್ಕಾಗಿ ಕಂಪನಿಯ HR(ಮಾನವ ಸಂಪನ್ಮೂಲ ವಿಭಾಗ) ಸಂರ್ಕಿಸಿ ಪಿಎಫ್ ಖಾತೆ ವಿವರಗಳನ್ನು ಈ ಯೋಜನೆಗಾಗಿ ಭರ್ತಿ ಮಾಡಬೇಕು.
ಮಾರ್ಚ್ 26ರಂದು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾರ್ಮಿಕರ ವಲಯಕ್ಕೆ ಹೆಚ್ಚಿನ ಸಮಸ್ಯೆಗಳಗಾದಂತೆ ನೋಡಿಕೊಳ್ಳಲಿದೆ ಎಂದು ಹೇಳಿದ್ದರು.
80 ಲಕ್ಷ ನೌಕರರಿಗೆ ಅನುಕೂಲ:
ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸರಿಸುಮಾರು 4 ಲಕ್ಷ ಸಂಸ್ಥಗಳ 80 ಲಕ್ಷ ನೌಕರರ ಸಹಾಯವಾಗಲಿದೆ.