ನವದೆಹಲಿ(ಏ.11): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ)ಯಿಂದ ಶೇ.75ರಷ್ಟುಹಣವನ್ನು ಹಿಂಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದ ಬೆನ್ನಲ್ಲೇ, ಹಣ ಹಿಂಪಡೆದುಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಕಳೆದ 10 ದಿನಗಳ ಅಂತರದಲ್ಲಿ 1.37 ಲಕ್ಷ ಮಂದಿ 280 ಕೋಟಿ ರು. ಹಣವನ್ನು ಹಿಂಪಡೆದುಕೊಂಡಿದ್ದಾರೆ. ಹಣ ಹಿಂಪಡೆಯಲು ಬೇಡಿಕೆ ಇಟ್ಟವರಿಗೆ ಹಣವನ್ನು ರವಾನಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಕಾರ್ಮಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾ.26ರಂದು ಘೋಷಣೆ ಮಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನೌಕರರ ಭವಿಷ್ಯ ನಿಧಿಯಲ್ಲಿ ಶೇ.75ರಷ್ಟುಹಣ ಹಿಂಪಡೆಯಲು ಅವಕಾಶ ಕಲ್ಪಿಸಿದ್ದರು.

ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!

ಇದೇ ವೇಳೆ ಇಪಿಎಫ್‌ಒ ಆನ್‌ಲೈನ್‌ ಸ್ವೀಕೃತಿ ಮತ್ತು ಹಣ ವರ್ಗಾವಣೆಗೆ ಮಾ.29ರಿಂದ ಹೊಸ ಸಾಫ್ಟ್‌ವೇರ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡವರಿಗೆ 72 ಗಂಟೆಗಳ ಒಳಗಾಗಿ ಹಣ ಪಾವತಿ ಆಗಲಿದೆ ಎಂದು ಇಪಿಎಫ್‌ಒ ತಿಳಿಸಿದೆ.

Close