ನವದೆಹಲಿ(ಅ.20)  ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ಅತ್ಯುತ್ತಮ ಸ್ಥಳವಾಗಿದೆ ಎಂದು ದಾಖಲೆಗಳನ್ನು ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ತೆರೆದಿರಿಸಿದ್ದಾರೆ.

ಡ್ವೀಟ್ ಮಾಡಿರುವ ಕೇಂದ್ರ ಸಚಿವ, ನರೇಂದ್ರ ಮೋದಿ ನಾಐಕತ್ವದಲ್ಲಿ ಭಾರತ ವಿದೇಶಿ ಬಂಡವಾಳ ಹೂಡಿಕೆ(ಎಫ್ ಡಿಐ) ಗೆ ಅತ್ಯುತ್ತಮ ಜಾಗವಾಗಿ ಬೆಳೆದಿದೆ ಎಂದಿದ್ದಾರೆ. ಕಳೆದ ಆರು ವರ್ಷದಲ್ಲಿ ಶೇ. 55 ರಷ್ಟು ಎಫ್ ಡಿಎ ಹೂಡಿಕೆ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಅಡಿಕೆ ದರ ಬಂಪರ್ ಏರಿಕೆ ಹಿಂದಿನ ಕಾರಣ

ಕೊರೋನಾ ಇದ್ದರೂ ಸಹ  2020,  ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಎಫ್ ಡಿಎ ಹೂಡಿಕೆ ಪ್ರಮಾಣ ಶೇ. 13 ಏರಿಕೆ ದಾಖಲಿಸಿದೆ. ಇದು  ಹಿಂದಿನ ಎಲ್ಲ ಹಣಕಾಸು ವರ್ಷಗಳಿಗೆ ಹೊಲಿಕೆ ಮಾಡಿದರೆ ಅತಿ ಹೆಚ್ಚು ಎಂಬ ವಿಚಾರವನ್ನು ತಿಳಿಸಿದ್ದಾರೆ.

ಕೊರೋನಾ ಮತ್ತು ಲಾಕ್ ಡೌನ್ ದೇಶದ ಅರ್ಥ ವ್ಯವಸ್ಥೆಯ ಮೇಲೆ ಕರಿನೆರಳು ಬೀರಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಕೊರೋನಾದೊಂದಿಗೆ ಹೋರಾಟ ಮಾಡುತ್ತಲೇ ಜೀವನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.