Asianet Suvarna News Asianet Suvarna News

ನಾವೀನ್ಯತೆ: ಸತತ 3ನೇ ವರ್ಷ ಕರ್ನಾಟಕ ದೇಶಕ್ಕೇ ನಂಬರ್‌ 1

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿರುವ ಕರ್ನಾಟಕ ನಾವೀನ್ಯತೆಯಲ್ಲಿ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.

india innovation index 2021 top for karnataka gvd
Author
Bangalore, First Published Jul 22, 2022, 8:04 AM IST

ನವದೆಹಲಿ (ಜು.22): ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿರುವ ಕರ್ನಾಟಕ ನಾವೀನ್ಯತೆಯಲ್ಲಿ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ಮೂರನೇ ವರ್ಷದ ಭಾರತೀಯ ನಾವೀನ್ಯತಾ ಸೂಚ್ಯಂಕದಲ್ಲಿ ಮೂರನೇ ವರ್ಷವೂ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನ ಪಡೆದುಕೊಂಡು ಗಮನ ಸೆಳೆದಿದೆ.

ರಾಜ್ಯಗಳ ಮಟ್ಟದಲ್ಲಿ ಇರುವ ನಾವೀನ್ಯತಾ ಸಾಮರ್ಥ್ಯ ಹಾಗೂ ಪೂರಕ ವಾತಾವರಣವನ್ನು ಪರಿಶೀಲಿಸಿ ನೀತಿ ಆಯೋಗ ಈ ರ್ಯಾಂಕಿಂಗ್‌ ಪಟ್ಟಿಯನ್ನು ಸಿದ್ಧಪಡಿಸಿದೆ. ‘17 ದೊಡ್ಡ ರಾಜ್ಯಗಳು’, ‘10 ಈಶಾನ್ಯ, ಗುಡ್ಡಗಾಡು ರಾಜ್ಯಗಳು’ ಹಾಗೂ ‘9 ಕೇಂದ್ರಾಡಳಿತ ಪ್ರದೇಶಗಳು ಹಾಗೂ ನಗರ ರಾಜ್ಯಗಳು’ ಎಂಬ ವಿಭಾಗದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಜಾಗತಿಕ ನಾವೀನ್ಯತಾ ಸೂಚ್ಯಂಕದ ರೀತಿಯೇ ಈ ಪಟ್ಟಿ ಇದ್ದು, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ 3ನೇ ವರ್ಷವೂ ಪ್ರಥಮ ಸ್ಥಾನ ಬಾಚಿಕೊಂಡಿದೆ.

ಹಣದುಬ್ಬರ ಇನ್ನಷ್ಟು ಹೆಚ್ಚಳವಾಗೋ ಸೂಚನೆ ನೀಡಿದ ಆರ್ ಬಿಐ

ಕರ್ನಾಟಕ 18.01 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದರೆ, ತೆಲಂಗಾಣ ಹಾಗೂ ಹರ್ಯಾಣ ನಂತರದ ಸ್ಥಾನದಲ್ಲಿವೆ. 10.97 ಅಂಕಗಳೊಂದಿಗೆ ಛತ್ತೀಸ್‌ಗಢ ಕೊನೆಯ ಸ್ಥಾನದಲ್ಲಿದೆ. ಈ ವಿಭಾಗದ ಸರಾಸರಿ ಅಂಕ 14.02 ಆಗಿದೆ. ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ಅತ್ಯುತ್ಕೃಷ್ಟ ಸಾಧನೆ ತೋರಿರುವುದು ಹಾಗೂ ಬೃಹತ್‌ ಪ್ರಮಾಣದ ವೆಂಚರ್‌ ಕ್ಯಾಪಿಟಲ್‌ ಒಪ್ಪಂದಗಳು ಆಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮೂರನೇ ವರ್ಷವೂ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಾವೀನ್ಯತಾ ಸೂಚ್ಯಂಕವನ್ನು ನೀತಿ ಆಯೋಗದ ಉಪಾಧ್ಯಕ್ಷ ಸುಮನ್‌ ಬೇರಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್‌ ಅಯ್ಯರ್‌ ಸಮ್ಮುಖದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಮಣಿಪುರ, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಢ ಪ್ರಥಮ ಸ್ಥಾನಗಳಿಸಿವೆ.

Instagram ಮೂಲಕವೂ ಹಣ ಗಳಿಸಬಹುದು, ಅದಕ್ಕೇನು ಮಾಡಬೇಕು?

ರುಪಾಯಿ ಮತ್ತೆ 80ಕ್ಕೇರಿಕೆ: ಸತತ 2ನೇ ದಿನವೂ ಮಧ್ಯಂತರದಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ 80 ರು. ಗಡಿ ದಾಟಿದೆ. ಮಧ್ಯಂತರದ ವೇಳೆ 80.05ಕ್ಕೆ ಕುಸಿದಿದ್ದ ರುಪಾಯಿ ಮೌಲ್ಯ, ದಿನದ ಕೊನೆಗೆ ಸೋಮವಾರಕ್ಕಿಂತ 6 ಪೈಸೆ ಚೇತರಿಕೆ ಕಂಡು 79.92ರಲ್ಲಿ ಅಂತ್ಯವಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಮತ್ತು ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಗಳ ನಿರಂತರ ಹಿಂತೆಗೆತದ ಪರಿಣಾಮವಾಗಿ ರುಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. 

ಸಗಟು ಹಣದುಬ್ಬರ ಎರಡಂಕಿ ಮಟ್ಟದಲ್ಲಿರುವುದು ದೇಶದ ಚಾಲ್ತಿ ಖಾತೆಯ ತೀವ್ರ ಕೊರತೆ ರುಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣಗಳಾಗಿವೆ. ಸೋಮವಾರವೂ ಮೊದಲ ಬಾರಿ ಸರಿಯಾಗಿ 80 ರು. ಮೌಲ್ಯವನ್ನು ಮಧ್ಯಂತರದಲ್ಲಿ ಅದು ಮುಟ್ಟಿತ್ತು. ಇನ್ನು ಇದೇ ವೇಳೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 246.47 ಅಂಕಗಳ ಏರಿ, 54,767.62 ಅಂಕಕ್ಕೆ ಮತ್ತು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ62.05 ಅಂಕಗಳ ಏರಿ 16,340.55ಕ್ಕೆ ದಿನದ ವಹಿವಾಟು ಮುಗಿಸಿದೆ.

Follow Us:
Download App:
  • android
  • ios