ಹಣದುಬ್ಬರ ಇನ್ನಷ್ಟು ಹೆಚ್ಚಳವಾಗೋ ಸೂಚನೆ ನೀಡಿದ ಆರ್ ಬಿಐ; ಆಗಸ್ಟ್ ನಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ?

*ಹಣದುಬ್ಬರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗ್ಬಹುದು ಎಂದ ಆರ್ ಬಿಐ
*ಆರ್ ಬಿಐ ಜುಲೈ ಬುಲೆಟಿನ್ ನಲ್ಲಿ ಹಣದುಬ್ಬರ ಏರಿಕೆ ಬಗ್ಗೆ ಪ್ರಸ್ತಾಪ
*ಆಗಸ್ಟ್ ನಲ್ಲಿ ನಡೆಯುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರ ಮತ್ತೊಮ್ಮೆ ಹೆಚ್ಚಳ ಮಾಡುವ ಸಾಧ್ಯತೆ
 

RBI Says Inflation May Be Peaking Will MPC Still Go For Aggressive Rate Hikes

ನವದೆಹಲಿ (ಜು.21):  ಹಣದುಬ್ಬರ ಕೊಂಚ ಇಳಿಕೆಯ ಲಕ್ಷಣವನ್ನು ತೋರುತ್ತಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರ ಹಣದುಬ್ಬರ ಗರಿಷ್ಠ ಮಿತಿ ತಲುಪುವ ಸೂಚನೆಗಳಿವೆ ಎಂದು ಹೇಳಿದೆ. ಹಣಕಾಸು ನೀತಿ ಸಮಿತಿ ರೆಪೋ ದರದಲ್ಲಿ ಇನ್ನೊಮ್ಮೆ ಭಾರೀ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಇತ್ತೀಚಿನ ಅಂಕಿಅಂಶಗಳನ್ನು ಗಮನಿಸಿದ್ರೆ  ರೆಪೋ ದರದ ಭಾರೀ ಏರಿಕೆಗೆ ತಡೆ ಹಾಕುವ ಸಾಧ್ಯತೆಯೂ ಇದೆ.ಇಂಥ ಅಸಾಧಾರಣ ಸಮಯದಲ್ಲಿ ಹಣದುಬ್ಬರವನ್ನು ಇನ್ನಷ್ಟು ಶೀಘ್ರ ಹಾಗೂ ತ್ವರಿತವಾಗಿ ತಗ್ಗಿಸಬೇಕಿದ್ದು, ಅದಕ್ಕಿರುವ ಮಾರ್ಗವೆಂದರೆ ಹಣದುಬ್ಬರ ಮಟ್ಟದ ಬದಲಿಗೆ ಅದರ ಮಾರ್ಗವನ್ನು ಬದಲಾಯಿಸೋದು ಎಂದು ಆರ್ ಬಿಐ ತನ್ನ 2022ನೇ ಜುಲೈ ಬುಲೆಟಿನ್ ನಲ್ಲಿ ತಿಳಿಸಿದೆ. 'ಈ ವೈಫಲ್ಯದ ನಡುವೆಯೂ ಜಗತ್ತಿನ ಬೇರೆಲ್ಲ ರಾಷ್ಟ್ರಗಳಿಗಿಂತ ಭಾರತದಲ್ಲಿ ಅಗತ್ಯ ಹಣಕಾಸು ನೀತಿ ಕ್ರಮಗಳು ಹೆಚ್ಚು ಮಧ್ಯಮ ಸ್ಥಿತಿಯಲ್ಲಿದ್ದು, ಎರಡು ವರ್ಷಗಳ ಸಮಯಾವಧಿಯಲ್ಲಿ ಹಣದುಬ್ಬರವನ್ನು ಮರಳಿ ಗುರಿಗೆ ತರುವ ಭರವಸೆಯನ್ನು ನಾವು ಹೊಂದಿದ್ದೇವೆ' ಎಂದು ಆರ್ ಬಿಐ (RBI) ಹೇಳಿದೆ.

ಭಾರತದ ಚಿಲ್ಲರೆ ಹಣದುಬ್ಬರ (retail inflation)  ಜೂನ್ ನಲ್ಲಿ ಶೇ. 7.01ರಷ್ಟಿದ್ದು, ಆ ಮೂಲಕ ಸತತ ಆರನೇ ತಿಂಗಳು ಆರ್ ಬಿಐ (Reserve Bank of India) ಸಹನಾ ಮಿತಿ ಶೇ.6ರ ಗಡಿ ದಾಟಿದೆ. ಆದರೂ ಕಳೆದ ಎರಡು ತಿಂಗಳಿಂದ ಅದರ ಹಿಂದಿನ ತಿಂಗಳುಗಳಿಗೆ ಹೋಲಿಸಿದ್ರೆ ಚಿಲ್ಲರೆ ಹಣದುಬ್ಬರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಏಪ್ರಿಲ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.79ರಷ್ಟಿದ್ದು, ಮೇನಲ್ಲಿ ಶೇ.7.04ಕ್ಕೆ ಇಳಿಕೆಯಾಗಿತ್ತು. ಇನ್ನು ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿದೆ.

ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಎಸ್ ಬಿಐ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಪ್ರಸಕ್ತ ಹಣದುಬ್ಬರ ದರ ಗಮನಿಸಿದ್ರೆ ಆರ್ ಬಿಐ ರೆಪೋ ದರ ಏರಿಕೆ ಮಾಡೋದು ಅನಿವಾರ್ಯ ಎಂದು ಕೋಟಕ್ ಇನ್ ಸ್ಟಿಟ್ಯೂಷನಲ್ ಈಕ್ವಿಟೀಸ್ (Kotak Institutional Equities) ಹಿರಿಯ ಆರ್ಥಿಕತಜ್ಞ ಸುವೋದೀಪ್ ರಕ್ಷಿತ್  ಅಭಿಪ್ರಾಯಪಟ್ಟಿದ್ದಾರೆ. 'ನಾವು ಆಗಸ್ಟ್ ಪಾಲಿಸಿಯಲ್ಲಿ ರೆಪೋ ದರ  (repo rate) 35 ಬಿಪಿಎಸ್ ಏರಿಕೆಯಾಗುವ ನಿರೀಕ್ಷೆ ಮುಂದುವರಿಸಬಹುದು ಹಾಗೂ ಆರ್ ಬಿಐ 2022ನೇ ಸಾಲಿನ ಕೊನೆಯಲ್ಲಿ ಶೇ.5.75 ಗುರಿ ತಲುಪುವ ಹಾದಿಯಲ್ಲಿ ಮುಂದುವರಿಯಬೇಕು' ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕೂಡ ವಿವಿಧ ಸರಕುಗಳು ಹಾಗೂ ಕಚ್ಚಾ ತೈಲದ ಬೆಲೆಗಳಲ್ಲಿ ಆರ್ಥಿಕ ಹಿಂಜರಿತದ (Recession) ಭೀತಿಯಿಂದ ಇಳಿಕೆಯಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ತಕ್ಷಣ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ ಸುಮಾರು 130 ಡಾಲರ್ ತಲುಪಿದ್ದು, ಈಗ ಪ್ರತಿ ಬ್ಯಾರೆಲ್ ಗೆ 106.92 ಡಾಲರ್ ಗೆ ಇಳಿಕೆಯಾಗಿದೆ. ಅದಾನಿ ವಿಲ್ಮರ್ ಸೇರಿದಂತೆ ಕೆಲವು ಕಂಪನಿಗಳು ಖಾದ್ಯ ತೈಲ ಬೆಲೆಯಲ್ಲಿ ಪ್ರತಿ ಲೀಟರ್ ಗೆ 30ರೂ. ಕಡಿತಗೊಳಿಸಿವೆ. ಹೀಗಾಗಿ ಅಡುಗೆ ಎಣ್ಣೆ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ. ಮೆಹ್ತಾ ಈಕ್ವಿಟೀಸ್ ನಿರ್ದೇಶಕ ಶರದ್ ಚಂದ್ರ ಶುಕ್ಲ ಅವರ ಪ್ರಕಾರ ಆಗಸ್ಟ್ ನಲ್ಲಿ ಹಣಕಾಸು ನೀತಿ ಸಮಿತಿ ರೆಪೋ ದರ (Repo Rate) ಏರಿಕೆ ಮಾಡುವ ಸಾಧ್ಯತೆಯಿದ್ದು, 75 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡದಿದ್ರೂ ಕನಿಷ್ಠ 50 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡೋ ಎಲ್ಲ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Instagram ಮೂಲಕವೂ ಹಣ ಗಳಿಸಬಹುದು, ಅದಕ್ಕೇನು ಮಾಡಬೇಕು?

ಆಗಸ್ಟ್ ನಲ್ಲಿ ಹಣಕಾಸು ನೀತಿ ಸಮಿತಿ ಸಭೆ
ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ದೈಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆ ಆಗಸ್ಟ್  2ರಿಂದ 4ರ ತನಕ ನಡೆಯಲಿದೆ. ಜೂನ್ ನಲ್ಲಿ ನಡೆದ ಕೊನೆಯ ನೀತಿ ಪರಿಶೀಲನೆ ಸಭೆಯಲ್ಲಿ ಎಂಪಿಸಿ ಹಣದುಬ್ಬರವನ್ನು ನಿಯಂತ್ರಿಸಲು ರೆಪೋದರದಲ್ಲಿ 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. ಇನ್ನು ಮೇನಲ್ಲಿ ನಡೆದ ತುರ್ತು ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ಸ್ (Basis Points) ಹೆಚ್ಚಳ ಮಾಡಲಾಗಿತ್ತು. 
 

Latest Videos
Follow Us:
Download App:
  • android
  • ios