ಸೋಶಿಯಲ್ ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್ ಟ್ರೆಂಡ್/ ಹಣಕಾಸು ಸಚಿವರು ರಾಜೀನಾಮೆ ಕೊಡಬೇಕು/ ನಿರ್ಮಲಾ ದೈವಿಚ್ಛೆ ಹೇಳಿಕೆಗೆ ಕುಹಕ/ ಜಿಡಿಪಿ ದರ ಕುಸಿತದ ಪರಿಣಾಮ

ನವದೆಹಲಿ(ಸೆ.01): ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ನಿರೀಕ್ಷೆಯಂತೆ ದೇಶದ ಆರ್ಥಿಕತೆಯ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಿದ್ದು, 40ಕ್ಕೂ ಹೆಚ್ಚು ವರ್ಷಗಳಲ್ಲೇ ಮೊದಲ ಬಾರಿ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.23.9ರಷ್ಟುಮಹಾಕುಸಿತ ಕಂಡಿದೆ. ಇದು 2020​​​​-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌-ಜೂನ್‌ ತಿಂಗಳ ಅವಧಿಯಲ್ಲಿ ಉಂಟಾದ ಕುಸಿತವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಡೀ ದಿನ ಇದು ಪ್ರತಿಧ್ವನಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 'ದೇಶದ ಅರ್ಥವ್ಯವಸ್ಥೆ ದೈವಿಚ್ಛೆ' ಎಂಬ ಹೇಳಿಕೆಯನ್ನು ಇಟ್ಟುಕೊಂಡು ಟೀಕಾ ಪ್ರಹಾರ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಲಾಗಿದೆ.

ಜಿಡಿಪಿ ಮಹಾಕುಸಿತ; ಅಂಕಿ ಅಂಶಗಳ ಕಂಪ್ಲೀಟ್ ರಿಪೋರ್ಟ್

ದೇಶದ ಅರ್ಥ ವ್ಯವಸ್ಥೆ ಕೊರೋನಾ ಕಾರಣಕ್ಕೆ ಕುಸಿತ ಕಂಡಿದೆ. ಯಾರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ ಎಂದು ನಿರ್ಮಲಾ ಹಿಂದೊಮ್ಮೆ ಹೇಳಿಕೆ ನೀಡಿದ್ದರ. ಅದನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ #ResignNirmala ಟ್ರೆಂಡ್ ಆಗಿದೆ.

ಈಗ ಬಿಡುಗಡೆಯಾಗಿರುವುದು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಅವಧಿ. ಈ ಅವಧಿಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿದ್ದವು. ಆದರೆ, ಈ ತ್ರೈಮಾಸಿಕ ಮುಗಿದ ನಂತರ, ಅಂದರೆ ಜುಲೈನಿಂದ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿವೆ. ಹೀಗಾಗಿ 2020-21ನೇ ಸಾಲಿನ ಇಡೀ ವರ್ಷದ ಜಿಡಿಪಿ ಬೆಳವಣಿಗೆಯ ದರ ಶೇ.29-30ರಷ್ಟು ಕುಸಿಯುವುದಿಲ್ಲ. ಬದಲಿಗೆ ಶೇ.3-4ರಷ್ಟುಕುಸಿತ ಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಭಾರತದ ಜಿಡಿಪಿ ಈ ವರ್ಷ ಶೇ.3.2ರಷ್ಟುಕುಸಿಯಲಿದೆ ಎಂದು ವಿಶ್ವಬ್ಯಾಂಕ್‌, ಶೇ.4.5ರಷ್ಟುಕುಸಿಯಲಿದೆ ಎಂದು ಐಎಂಎಫ್‌, ಶೇ.4ರಷ್ಟುಕುಸಿಯಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ಶೇ.5.2ರಷ್ಟುಕುಸಿಯಲಿದೆ ಎಂದು ನೊಮುರಾ ಹಾಗೂ ಶೇ.9.5ರಷ್ಟು ಕುಸಿಯಲಿದೆ ಎಂದು ಇಕ್ರಾ ಭವಿಷ್ಯ ನುಡಿದಿವೆ. ಒಟ್ಟಿನಲ್ಲಿ ಹಣಕಾಸು ಸಚಿವೆ ಮೇಲೆ ಮಂಗಳವಾರ ಟೀಕೆಗಳ ಸುರಿಮಳೆಯಾಗಿದೆ. 

Scroll to load tweet…
Scroll to load tweet…
Scroll to load tweet…
Scroll to load tweet…