10 ದಿನದಲ್ಲಿ ಹೊರಬೀಳಲಿದೆ ಸ್ವಿಸ್ ಬ್ಯಾಂಕ್ ವಿವರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 11:11 AM IST
India expects HSBC account data from Switzerland in 10 days
Highlights

ಇನ್ನು 10 ದಿನಗಳಲ್ಲಿ ಎಚ್‌ಎಸ್‌ಬಿಸಿಯಲ್ಲಿ ಭಾರತೀಯರ ಬ್ಯಾಂಕ್ ಖಾತೆಯ ವಿವರಗಳನ್ನು ಅಧಿಕಾರಿಗಳು ಒದಗಿ ಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಹೇಳಿದ್ದಾರೆ.

ನವದೆಹಲಿ: ಕಪ್ಪು ಹಣದ ವಿರುದ್ಧದ ಹೊರಾಟದಲ್ಲಿ ಭಾರತಕ್ಕೆ ಮಹತ್ವದ ಯಶಸ್ಸು ಲಭಿಸಿದೆ. ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ಭಾರತೀಯ ಸರ್ಕಾರದ ಜೊತೆ ಹಂಚಿ ಕೊಳ್ಳುವಂತೆ ಸ್ವಿಜರ್ಲ್ಯಾಂಡ್‌ನ  ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಇನ್ನು 10 ದಿನಗಳಲ್ಲಿ ಎಚ್‌ಎಸ್‌ಬಿಸಿಯಲ್ಲಿ ಭಾರತೀಯರ ಬ್ಯಾಂಕ್ ಖಾತೆಯ ವಿವರಗಳನ್ನು ಅಧಿಕಾರಿಗಳು ಒದಗಿ ಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಹೇಳಿದ್ದಾರೆ.

ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಪ್ಪು ಹಣವನ್ನು ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದ ಅವರು, ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಬಹಿರಂಗಪಡಿಸಲಾಗದ 8,448 ಕೋಟಿ ರು. ಆದಾಯವನ್ನು ಪತ್ತೆಹಚ್ಚಲಾಗಿದೆ. 164 ಬ್ಯಾಂಕ್ ಖಾತೆಗಳಿಂದ 5,447 ಕೋಟಿ ರು. ತೆರಿಗೆ ಹಾಗೂ 1,290 ಕೋಟಿ ರು. ದಂಡ ವಿಧಿಸಲು ಅವಕಾಶವಿದೆ.

ಸ್ವಿಸ್ ಬ್ಯಾಂಕ್ ಖಾತೆಯ ವಿವರ ಗಳನ್ನು ಭಾರತ ಸರ್ಕಾರದ ಜೊತೆ ಹಂಚಿಕೊಳ್ಳುವಂತೆ ಸ್ವಿಜರ್ಲ್ಯಾಂಡ್ ಸುಪ್ರೀಂಕೋರ್ಟ್ ಅಲ್ಲಿನ ಸರ್ಕಾರಕ್ಕೆ ಆದೇಶಿಸಿದ್ದು, ಒಂದು ವಾರ ಅಥವಾ 10 ದಿನಗಳಲ್ಲಿ ಲಭ್ಯವಾಗಲಿವೆ ಎಂದು ಗೋಯಲ್ ಹೇಳಿದ್ದಾರೆ. ಕಪ್ಪುಹಣದ ವಿಚಾರವಾಗಿ ವಿಪಕ್ಷಗಳು ಸರ್ಕಾರವನ್ನು ಟೀಕಿಸಿದೆ. 

loader