ದಾವೋಸ್(ಜ.24): ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕವಾಗಿದ್ದು, ಈ ಸಂಕಷ್ಟದಿಂದ ಪಾರಾಗುವ ಕ್ಷಮತೆ ಭಾರತಕ್ಕಿದೆ ಎಂದು ಐಎಂಎಪ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ  ಪರಿಸ್ಥಿತಿ ಸುಧಾರಿಸಲಿದ್ದು, ಸರ್ಕಾರ ಈ ಕುರಿತು ಕಾರ್ಯೋನ್ಮುಖವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಸ್ಟಾಲಿನಾ ಜಿಯೊರ್ಜಿವಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಶೇ.4.8ಕ್ಕೆ ಕುಸಿತ: ಐಎಂಎಫ್‌

ದಾವೋಸ್'ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಮಾತನಾಡಿದ ಕ್ರಿಸ್ಟಾಲಿನಾ ಜಿಯೊರ್ಜಿವಾ, 2019 ಅಕ್ಟೋಬರ್‌ನಲ್ಲಿ ಐಎಂಎಫ್  ವಿಶ್ವ ಆರ್ಥಿಕ ಮುನ್ನೋಟವನ್ನು ಘೋಷಿಸಿದ್ದಾಗ ಇದ್ದ ಆರ್ಥಿಕ ಸ್ಥಿತಿಗತಿಗೂ ಈಗಿನ ಪರಿಸ್ಥಿತಿಗೂ ಹೋಲಿಸಿದಾಗ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

.@KGeorgieva: emerging markets are expected to grow at 4.4% in 2020 and 4.6% in 2021. There are bright spots in ASEAN countries; a number of African economies are also doing well. #WEF20 pic.twitter.com/Pc1zPMZZjV

— IMFLive (@IMFLive) January 24, 2020

ಅಮೆರಿಕ-ಚೀನಾ ನಡುವಣ ಮೊದಲ ಹಂತದ ವ್ಯಾಪಾರ ಒಪ್ಪಂದ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿದ್ದು, ಅದಾಗ್ಯೂ ಶೇ.3.3 ರ ವಿಶ್ವ ಆರ್ಥಿಕ ಬೆಳವಣಿಗೆ ದರ ತೃಪ್ತಿದಾಯಕವಲ್ಲ ಎಂದು ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದರು.

ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

ವಿಶ್ವದ ಆರ್ಥಿಕ ಸ್ಥಿತಿ ಸುಧಾರಿಸಲು ಹೆಚ್ಚಿನ ಆಕ್ರಮಣಶಾಲಿ ಆರ್ಥಿಕ ನೀತಿಯನ್ನು ಜಾರಿಗೊಳಿಸಬೇಕಾಗಿದೆ. ರಚನಾತ್ಮಕ ಸುಧಾರಣೆ ತರಲು ನಾವೆಲ್ಲಾ ಒಟ್ಟಾಗಿ ಶ್ರಮಿಸೋಣ ಎಂದು ಕ್ರಿಸ್ಟಾಲಿನಾ ಜಿಯೊರ್ಜಿವಾ ಕರೆ ನೀಡಿದರು.