ದಾವೋಸ್‌[ಜ.21]: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸೋಮವಾರ ಭಾರತದ ಪ್ರಗತಿ ದರದ ಅಂದಾಜನ್ನು 2019ನೇ ಸಾಲಿನಲ್ಲಿ ಶೇ.4.8ಕ್ಕೆ ಇಳಿಸಿದೆ. ಆರ್ಥಿಕ ಹಿಂಜರಿತದ ಭೀತಿಯ ನಡುವೆಯೇ ಪ್ರಗತಿ ದರವನ್ನು ಐಎಂಎಫ್‌ ಕಡಿತಗೊಳಿಸಿದೆ. ಇದೇ ವೇಳೆ, ವಿಶ್ವದ ಆರ್ಥಿಕತೆಯ ಅಂದಾಜನ್ನು ಇದೇ ಸಾಲಿಗೆ ಐಎಂಎಫ್‌ ಶೇ.2.9ಕ್ಕೆ ಇಳಿಸಿದೆ.

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ಆರಂಭಗೊಳ್ಳಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗಕ್ಕೆ ಮುನ್ನ ಈ ಅಂದಾಜನ್ನು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಬಿಡುಗಡೆ ಮಾಡಿದರು. ಬ್ಯಾಂಕೇತರ ಹಣಕಾಸು ವಲಯದ ಪ್ರಗತಿ ಕುಸಿತ ಹಾಗೂ ಗ್ರಾಮೀಣ ಆದಾಯದ ಇಳಿಕೆಯೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

2018ರಲ್ಲಿ ಶೇ.6.8ರ ಪ್ರಗತಿ ಕಂಡಿದ್ದ, ಭಾರತದ ಪ್ರಗತಿ ದರ 2019ರಲ್ಲಿ ಶೇ.4.8ಕ್ಕೆ ಇಳಿಯಲಿದೆ. 2020ರಲ್ಲಿ ಶೇ.5.8 ಹಾಗೂ 2021ರಲ್ಲಿ ಶೇ.6.5ಕ್ಕೆ ಚೇತರಿಕೆ ಕಾಣಲಿದೆ ಎಂದು ಐಎಂಎಫ್‌ ಅಂದಾಜು ಮಾಡಿದೆ.

ಇದೇ ವೇಳೆ, 2018ರಲ್ಲಿ ಶೇ.3.6 ಇದ್ದ ವಿಶ್ವದ ಪ್ರಗತಿ ದರ, 2019ರಲ್ಲಿ ಶೇ.2.9, 2020ರಲ್ಲಿ ಶೇ.3.3 ಹಾಗೂ 2021ರಲ್ಲಿ ಶೇ.3.4ಕ್ಕೆ ಚೇತರಿಕೆ ಕಾಣಲಿದೆ ಎಂದು ಅದು ಹೇಳಿದೆ.

ಆರ್ಥಿಕ ಸಂಕಷ್ಟ:ಹಣಕಾಸು ಸಚಿವಾಲಯ ನಿರ್ಣಯವಾಗುವುದು ಇಷ್ಟ!