ನಾನಾ ಕಾರಣಗಳಿಂದಾಗಿ ಜಾಗತಿಕ ಆರ್ಥಿಕತೆಯು ಅಭಿವೃದ್ಧಿಯ ವಿಷಯದಲ್ಲಿ ಹಿಂದೆ ಬಿದ್ದಿದ್ದರೆ, ಭಾರತದ ಆರ್ಥಿಕತೆ ಮಾತ್ರ ಬೇರೆಲ್ಲ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವಬ್ಯಾಂಕ್‌ ಮೆಚ್ಚುಗೆ ವ್ಯಕ್ತಪಡಿಸಿದೆ.

ನವದೆಹಲಿ: ನಾನಾ ಕಾರಣಗಳಿಂದಾಗಿ ಜಾಗತಿಕ ಆರ್ಥಿಕತೆಯು ಅಭಿವೃದ್ಧಿಯ ವಿಷಯದಲ್ಲಿ ಹಿಂದೆ ಬಿದ್ದಿದ್ದರೆ, ಭಾರತದ ಆರ್ಥಿಕತೆ ಮಾತ್ರ ಬೇರೆಲ್ಲ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವಬ್ಯಾಂಕ್‌ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಇನ್ನಷ್ಟು ವೇಗವಾಗಿ ಜಾರಿಗೊಳಿಸಿದರೆ ಅಭಿವೃದ್ಧಿಯ ದರವನ್ನು ಮತ್ತಷ್ಟುಹೆಚ್ಚಿಸಬಹುದು. ಮಹತ್ವಾಕಾಂಕ್ಷಿ ಸುಧಾರಣಾ ಅಜೆಂಡಾಗಳು ಈಗಾಗಲೇ ವಿವಿಧ ಹಂತದಲ್ಲಿ ಜಾರಿಗೊಳ್ಳುತ್ತಿವೆ. ಹೀಗಾಗಿ ಜಾಗತಿಕ ಹಣಕಾಸು ಕ್ಷೇತ್ರದ ಹಿಂಜರಿಕೆಯ ಹೊರತಾಗಿಯೂ ಭಾರತ ಗಣನೀಯ ಅಭಿವೃದ್ಧಿ ಸಾಧಿಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದೆ.

ಕುಸಿಯುತ್ತಿರುವ ದೀರ್ಘಾವಧಿ ಅಭಿವೃದ್ಧಿಯ ಅವಕಾಶಗಳು ಎಂಬ ವರದಿಯನ್ನು ವಿಶ್ವ ಬ್ಯಾಂಕ್‌ (World Bank)ಬಿಡುಗಡೆ ಮಾಡಿದ್ದು, ಅದರಲ್ಲಿ ಜಾಗತಿಕ ಆರ್ಥಿಕತೆಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.ಆರ್ಥಿಕಾಭಿವೃದ್ಧಿಯ ವಿಷಯದಲ್ಲಿ 2030ರ ವೇಳಗೆ ಜಗತ್ತು ಒಂದು ದಶಕದಷ್ಟುಹಿಂದೆ ಹೋಗಿರುತ್ತದೆ. ಅಂದರೆ ಜಗತ್ತು ಒಂದು ದಶಕದಷ್ಟು ಅಭಿವೃದ್ಧಿಯನ್ನು ಕಳೆದುಕೊಂಡಿದೆ. ಶೇ.2.6 ಇದ್ದ ಜಾಗತಿಕ ಅಭಿವೃದ್ಧಿ ದರ ಈಗ ಶೇ.2.2ಕ್ಕೆ ಕುಸಿದಿದೆ. ಕೋವಿಡ್‌, ಜಾಗತಿಕ ಆರ್ಥಿಕ ಹಿಂಜರಿಕೆ, ಹೂಡಿಕೆಯ ಕೊರತೆ, ಕಾರ್ಮಿಕರ ಸಮಸ್ಯೆ ಹೀಗೆ ಇದಕ್ಕೆ ನಾನಾ ಕಾರಣಗಳಿವೆ. ಆದರೆ, ಭಾರತದಲ್ಲಿ ಅಭಿವೃದ್ಧಿಯ ದರ ಉತ್ತಮವಾಗಿದೆ ಎಂದು ಹೇಳಲಾಗಿದೆ.

ಭಾರತದ ಜಿಡಿಪಿ ದರ ನಿರೀಕ್ಷೆ ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್‌

ಅಲ್ಲದೆ, ಭಾರತದಲ್ಲಿ ಇನ್ನೂ ಸಾಕಷ್ಟುಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳು, ಸಮಸ್ಯೆಯಿರುವ ಕ್ಷೇತ್ರಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರವಾದ ಮಾಹಿತಿಯನ್ನು ವಿಶ್ವಬ್ಯಾಂಕ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಜಿಡಿಪಿ ಪ್ರಗತಿ ಮುನ್ಸೂಚನೆ 'ಪಾಸಿಟಿವ್‌' ಆಗಿ ಪರಿಷ್ಕರಿಸಿದ ವಿಶ್ವಬ್ಯಾಂಕ್‌