ನವದೆಹಲಿ(ಫೆ.17): ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಭಂಧನದ ಪರಿಣಾಮ ಕಾಣಿಸಲಾರಂಭಿಸಿದೆ. ಇರಾನ್‌ನಿಂದ ತೈಲ ಆಮದಿಗೆ ಅಮೆರಿಕದಿಂದ ಭಾರತ ವಿನಾಯ್ತಿ ಪಡೆದಿದೆಯಾದರೂ, ಭಾರತ ಕಳೆದ ಜನವರಿಯಲ್ಲಿ ಇರಾನ್‌ನಿಂದ ತೈಲ ಆಮದಿನಲ್ಲಿ ಶೇ.45ರಷ್ಟು ಕಡಿತಗೊಳಿಸಿದೆ. 

ಕಳೆದ ಜನವರಿಯಲ್ಲಿ 270,500 ಬ್ಯಾರಲ್‌ನಷ್ಟು ತೈಲ ಆಮದು ಮಾಡಿಕೊಳ್ಳಲಾಗಿದ್ದು, ಸಾಗಣೆಯಲ್ಲಿ ಉಂಟಾಗಿರುವ ವಿಳಂಬವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಜನವರಿಯಲ್ಲಿ ಭಾರತಕ್ಕೆ ತೈಲ ಸರಬರಾಜು ಮಾಡಿದ ರಾಷ್ಟ್ರಗಳಲ್ಲಿ ಇರಾನ್ 7ನೇ ಸ್ಥಾನದಲ್ಲಿತ್ತು. ಕಳೆದ ಡಿಸೆಂಬರ್‌ನಲ್ಲಿ 6ನೇ ಸ್ಥಾನದಲ್ಲಿತ್ತು. ಅಷ್ಟೇ ಅಲ್ಲದೇ ವರ್ಷದ ಹಿಂದೆ 3ನೇ ಉನ್ನತ ಸ್ಥಾನದಲ್ಲಿತ್ತು. 

ಇದೇ ವೇಳೆ ಭಾರತ ವೆನಿಜುವೆಲಾ ರಾಷ್ಟ್ರದಿಂದ ತೈಲ ಖರೀದಿ ಮುಂದುವರಿಸಿರುವುದು ಅಮೆರಿಕದ ಕಳವಳಕ್ಕೆ ಕಾರಣವಾಗಿದೆ.