ಕೆಲಸದ ವಿಸಾ ಅರ್ಜಿ ತಿರಸ್ಕೃತ ಹಿನ್ನೆಲೆಯೋಜನಾ ವೆಚ್ಛ ಅಧಿಕವಾಗುವ ಆತಂಕಇನ್ಫೋಸಿಸ್ ಪ್ರಾಜೆಕ್ಟ್ ಗಳಲ್ಲಿ ವಿಳಂಬಸ್ಥಳೀಯರ ನೇಮಕಾತಿಗೆ ಇನ್ಫೋಸಿಸ್ ಚಿಂತನೆ

ನವದೆಹಲಿ(ಜು.22): ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಗಳ ಕೆಲಸದಲ್ಲಿ ವಿಳಂಬವಾಗುತ್ತಿರುವುದರಿಂದ ಪ್ರಮುಖ ಕೆಲಸದ ಮಾರುಕಟ್ಟೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.

ಇತ್ತೀಚಿನ ದಿನಗಳಲ್ಲಿ ವೀಸಾ ಅರ್ಜಿಗಳ ತಿರಸ್ಕಾರದಲ್ಲಿ ಹೆಚ್ಚಳವಾಗಿದೆ. ಇದರಿಂದ ಕಂಪೆನಿಯ ಕೆಲಸದ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ ಪ್ರಾಜೆಕ್ಟ್ ಗಳು ವಿಳಂಬವಾಗುವುದಲ್ಲದೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ.

ಅಮೆರಿಕ ಸರ್ಕಾರ ವಲಸೆ ಮತ್ತು ಕೆಲಸ ಅನುಮತಿ ನಿಯಮದಲ್ಲಿ ಬದಲಾವಣೆ ತಂದರೆ ಕಂಪೆನಿಯ ಅಂತಾರಾಷ್ಟ್ರೀಯ ಕಾರ್ಯತಂತ್ರ ಮತ್ತು ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಇನ್ಫೋಸಿಸ್ ಆತಂಕ ವ್ಯಕ್ತಪಡಿಸಿದೆ.

ಸಾಗರೋತ್ತರ ಭಾರತೀಯ ಐಟಿ ಕಂಪೆನಿಗಳು ವೀಸಾಗೆ ಹೆಚ್ಚು ಅವಲಂಬಿತವಾಗದೆ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ನಾಲ್ಕು ತಂತ್ರಜ್ಞಾನ ಮತ್ತು ಸಂಶೋಧನೆ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 10 ಸಾವಿರ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಇನ್ಫೋಸಿಸ್ ಈ ಹಿಂದೆಯೇ ಹೇಳಿತ್ತು.