ಗುಡ್ ನ್ಯೂಸ್: ಆದಾಯ ತೆರಿಗೆ ಅವಧಿ ವಿಸ್ತರಣೆ!

ಆದಾಯ ತೆರಿಗೆದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಿಸಿದ ಕೇಂದ್ರ

ಜುಲೈ 31 ರ ಬದಲಾಗಿ ಆಗಸ್ಟ್ 31 ಕೊನೆ ದಿನಾಂಕ

ಒಂದು ತಿಂಗಳ ಅವಧಿಗೆ ಗಡುವು ವಿಸ್ತರಣೆಗೆ ಅಸ್ತು

Income tax return filing deadline extended to August 31

ನವದೆಹಲಿ(ಜು.26): ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಸಲು ಇದೇ ಜುಲೈ 31 ಕೊನೆ ದಿನಾಂಕವಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆ ಈ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್, ವಿವಿಧ ವಿಭಾಗಗಳ ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ. ಪ್ರಸಕ್ತ ಸಾಲಿನಿಂದ ಆದಾಯ ತೆರಿಗೆ ಸಲ್ಲಿಕೆ ಗಡುವು ಮೀರಿದರೆ ತೆರಿಗೆದಾರರು ದಂಡ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 31 ರ ಅವಧಿ ಸಾಕಾಗದು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

ತೆರಿಗೆದಾರರ ಮನವಿ ಪುರಸ್ಕರಿಸಿರುವ ಕೇಂದ್ರ ಹಣಕಾಸು ಇಲಾಖೆ, ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಹಣಕಾಸು ಇಲಾಖೆ, ತೆರಿಗೆದಾರರ ಮನವಿ ಪುರಸ್ಕರಿಸಿದ್ದು, ಆದಾಯ ತೆರಿಗೆ ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.  

Latest Videos
Follow Us:
Download App:
  • android
  • ios