Asianet Suvarna News Asianet Suvarna News

ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ರಿಟರ್ನ್ (ITR) ಫೈಲ್ ಮಾಡೋ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆ ಸರಳಗೊಳಿಸಿದೆ. ಈಗ ಕ್ರೆಡಿಟ್, ಡೆಬಿಟ್ ಕಾರ್ಡ್, ಆನ್ ಲೈನ್ ಬ್ಯಾಂಕಿಂಗ್, ಯುಪಿಐ, ಆರ್ ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಕೂಡ ತೆರಿಗೆಗಳನ್ನು ಪಾವತಿಸಲು ಅವಕಾಶವಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ. 

Income Tax Now pay your tax through UPI or credit card check how
Author
First Published Nov 23, 2022, 5:22 PM IST

Business Desk:ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆ ಕಳೆದ ಎರಡು ವರ್ಷಗಳಿಂದ ಅನೇಕ ಪ್ರಯತ್ನಗಳನ್ನು ನಡೆಸಿದೆ. ಫಾರ್ಮ್ ತಿದ್ದುಪಡಿ ಹಾಗೂ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋದಕ್ಕಾಗಿಯೇ ಹೆಚ್ಚುವರಿಯಾಗಿ ಒಂದು ಹೊಸ ಪೋರ್ಟಲ್ ರಚಿಸಿದೆ ಕೂಡ. ಈ ಎಲ್ಲ ಮಾರ್ಪಾಡುಗಳ ಜೊತೆಗೆ ಆದಾಯ ತೆರಿಗೆ ಇಲಾಖೆ ತೆರಿಗೆಗಳ ಪಾವತಿಗೆ ಹೊಸ ವ್ಯವಸ್ಥೆಯೊಂದನ್ನು ರೂಪಿಸಿದೆ. ತೆರಿಗೆದಾರರು ಈಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ತೆರಿಗೆಗಳನ್ನು ಪಾವತಿಸಬಹುದು. ಯಾವುದೇ ತೆರಿಗೆದಾರರು ತಮ್ಮ ತೆರಿಗೆಗಳನ್ನು ಎನ್ ಎಸ್ ಡಿಎಲ್ ವೆನ್ ಸೈಟ್ ನಲ್ಲಿ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಬಳಸಿ ತೆರಿಗೆಗಳನ್ನು ಪಾವತಿಸಬಹುದು. ಆದರೆ, ಈ ವ್ಯವಸ್ಥೆ 16 ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಪಟ್ಟಿ ಮಾಡಿರುವ 16 ಬ್ಯಾಂಕ್ ಗಳನ್ನು ಹೊರತುಪಡಿಸಿ ನೀವು ಬೇರೆ ಬ್ಯಾಂಕಿನ ಡೆಬಿಟ್ ಕಾರ್ಡ್ ಹೊಂದಿದ್ದರೆ ತೆರಿಗೆ ಪಾವತಿಸೋದು ಕಷ್ಟವಾಗಬಹುದು. ಆದರೆ, ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದ್ರೆ  ಕ್ರೆಡಿಟ್ ಕಾರ್ಡ್ ಗಳು, ಆನ್ ಲೈನ್ ಬ್ಯಾಂಕಿಂಗ್, ಯುಪಿಐ, ಆರ್ ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಕೂಡ ತೆರಿಗೆಗಳನ್ನು ಪಾವತಿಸಲು ಅವಕಾಶವಿದೆ.  

ಯುಪಿಐ, ಕ್ರೆಡಿಟ್ ಕಾರ್ಡ್ ಮೂಲಕ ಹೇಗೆ?
ಹಂತ 1: ನಿಮ್ಮ ಯೂಸರ್ ನೇಮ್ (User name) ಹಾಗೂ ಪಾಸ್ ವರ್ಡ್ (Password) ಬಳಸಿಕೊಂಡು ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ (e-filing) ಪೋರ್ಟಲ್ ಗೆ ಲಾಗಿನ್ ಆಗಿ.
ಹಂತ 2: ಇ-ಫೈಲ್ ಪೋರ್ಟಲ್ ಮೆನು ಅಡಿಯಲ್ಲಿ ಇ-ಪೇ ಟ್ಯಾಕ್ಸ್ ಆಯ್ಕೆ ಅಡಿಯಲ್ಲಿ ನ್ಯೂ ಪೇಮೆಂಟ್ ಆಯ್ಕೆ ಮಾಡಿ.
ಹಂತ 3: ಯಾವ ವಿಧದ ತೆರಿಗೆಯನ್ನು ನೀವು ಪಾವತಿಸಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿ, ಆ ಬಳಿಕ ಮುಂದುವರಿಯಿರಿ.
ಹಂತ 4: ಮೌಲ್ಯಮಾಪನ ವರ್ಷ (assessment year) ಹಾಗೂ ತೆರಿಗೆ ವರ್ಷ (tax year) ಆಯ್ಕೆ ಮಾಡಿ. 

ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ

ಹಂತ 5: ಇದಾದ ಬಳಿಕ ತೆರಿಗೆ ವಿಂಗಡಣೆ ಬಗ್ಗೆ ಮಾಹಿತಿ ನೀಡಿ. ಇದರಲ್ಲಿ ತೆರಿಗೆ (Tax), ಸರ್ ಚಾರ್ಜ್ (surcharge), ಸೆಸ್ (cess) ಇತ್ಯಾದಿ ಮಾಹಿತಿ ಇರಬೇಕು.
ಹಂತ 6: ಈಗ ನೀವು ಕ್ರೆಡಿಟ್ ಕಾರ್ಡ್ (Credit card), ನೆಟ್ ಬ್ಯಾಂಕಿಂಗ್ ಖಾತೆ (Net banking account), ಬ್ಯಾಂಕ್ ಶಾಖೆ, ಯುಪಿಐ, ಆರ್ ಟಿಜಿಎಸ್ (RTGS) ಅಥವಾ ನೆಫ್ಟ್ (Neft) ಬಳಸಿ ಪಾವತಿಗಳನ್ನು (Payments) ಮಾಡಬಹುದು. 
ಹಂತ 7: ಪಾವತಿಯಾದ ತಕ್ಷಣ ಇ-ಚಲನ್ (e-challan) ಡೌನ್ ಲೋಡ್ (Download) ಮಾಡಿ. ಆದಾಯ ತೆರಿಗೆ ಇಲಾಖೆ ಕೂಡ ನಿಮಗೆ ಅಂಚೆ  (Post) ಹಾಗೂ ಎಸ್ ಎಂಎಸ್ (SMS) ಮೂಲಕ ತೆರಿಗೆ ಪಾವತಿ ಬಗ್ಗೆ ಮಾಹಿತಿ ಕಳುಹಿಸುತ್ತದೆ.

ಎಸ್ ಬಿಐ ಖಾತೆಯ ಶಾಖೆ ಬದಲಾವಣೆಗೆ ಬ್ಯಾಂಕ್ ಗೆ ಭೇಟಿ ನೀಡಬೇಕಾಗಿಲ್ಲ, ಆನ್ ಲೈನ್ ನಲ್ಲೇ ಮಾಡ್ಬಹುದು!

ಎಷ್ಟು ಶುಲ್ಕ ವಿಧಿಸಲಾಗುತ್ತದೆ?
ನೀವು ಎನ್ ಎಸ್ ಡಿಎಲ್ (NSDL) ಹಾಗೂ ಆದಾಯ ತೆರಿಗೆ ವೆಬ್ ಸೈಟ್ (Income Tax websites) ಮೂಲಕ ತೆರಿಗೆ (Tax) ಪಾವತಿಸಿದ್ರೆ ಯಾವುದೇ ಶುಲ್ಕ (Fees) ವಿಧಿಸೋದಿಲ್ಲ. ಆದರೆ, ನೆಟ್ ಬ್ಯಾಂಕಿಂಗ್ (Net banking) ಮೂಲಕ ತೆರಿಗೆ (Tax) ಪಾವತಿಸಿದ್ರೆ ಬ್ಯಾಂಕ್ ಶುಲ್ಕ (Fees) ವಿಧಿಸುತ್ತದೆ. ಈ ಶುಲ್ಕ (Fees) ಆಯಾ ಬ್ಯಾಂಕಿನ ಆಧಾರದಲ್ಲಿ 5ರೂ.ನಿಂದ 12ರೂ. ತನಕ ಇರುತ್ತದೆ. 
 

Follow Us:
Download App:
  • android
  • ios