Bank Holidays: ಮೇ ತಿಂಗಳಲ್ಲಿ 10 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ರಜಾಪಟ್ಟಿ ಹೀಗಿದೆ..

ಪ್ರತಿ ತಿಂಗಳ ಕೊನೆಯಲ್ಲಿ ಆರ್ ಬಿಐ ಮುಂದಿನ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 10 ದಿನಗಳ ಕಾಲ ರಜೆಯಿದೆ. 
 

Bank Holidays in May 2024 Banks will remain closed on THESE 10 days Check all details here anu

ನವದೆಹಲಿ (ಏ.28): ಏಪ್ರಿಲ್ ತಿಂಗಳು ಮುಕ್ತಾಯವಾಗಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗೋದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕುಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಇದರ ಪ್ರಕಾರ ಮೇ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 10 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ಇದರ ಜೊತೆಗೆ ಪ್ರತಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ರಜೆಯಿದೆ. ಹೀಗಾಗಿ ಬ್ಯಾಂಕಿಗೆ ಭೇಟಿ ನೀಡಿ ಮಾಡಬೇಕಾಗಿರುವ ಯಾವುದೇ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಇಲ್ಲವಾದ್ರೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ಆದರೆ, ಆದರೆ, ಈ ರಜಾದಿನಗಳಂದು ಎಟಿಎಂ, ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿರೋದಿಲ್ಲ. ಹೀಗಾಗಿ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಹಾಗೂ ಆನ್ ಲೈನ್ ಮೂಲಕ ಹಣದ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿರೋದಿಲ್ಲ. 

ಸಾಮಾನ್ಯವಾಗಿ ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಬ್ಯಾಂಕಿಗೆ ಭೇಟಿ ನೀಡಿ ಮಾಡಲೇಬೇಕಾದ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಗೃಹಸಾಲ, ಕಾರು ಸಾಲ ಮುಂತಾದ ಸಾಲಗಳಿಗೆ ಅರ್ಜಿ ಸಲ್ಲಿಸಬೇಕಿದ್ರೆ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ. ಹೀಗಾಗಿ ಮೇ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕಿಗೆ ರಜೆ ಎಂಬುದನ್ನು ಪರಿಶೀಲಿಸಿ, ಆ ಬಳಿಕ ಭೇಟಿ ನೀಡಿ. ಇದ್ರಿಂದ ಯಾವುದೇ ಸಮಸ್ಯೆಯಾಗೋದಿಲ್ಲ. 

ಹೆಚ್ಚಲಿದೆ ಜನಸಾಮಾನ್ಯರ ಜೇಬಿನ ಮೇಲಿನ ಹೊರೆ: ಮೇ 1ರಿಂದ ಈ ಹಣಕಾಸು ನಿಯಮಗಳಲ್ಲಿ ಬದಲಾವಣೆ

ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks),ಕೋ-ಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.

ನಿಮ್ಮಇಪಿಎಫ್ ಖಾತೆಗೆ 2023-24ನೇ ಸಾಲಿನ ಬಡ್ಡಿ ಯಾವಾಗ ಕ್ರೆಡಿಟ್ ಆಗುತ್ತೆ? ಬ್ಯಾಲೆನ್ಸ್ ಚೆಕ್ ಹೇಗೆ?

ಮೇ ತಿಂಗಳ ಬ್ಯಾಂಕ್ ರಜಾಪಟ್ಟಿ
ಮೇ 1: ಕಾರ್ಮಿಕರ ದಿನ ಹಿನ್ನೆಲೆಯಲ್ಲಿ ದೇಶದ ಬಹುತೇಕ ನಗರಗಳಲ್ಲಿ ಬ್ಯಾಂಕಿಗೆ ರಜೆ. ಮಹಾರಾಷ್ಟ್ರ ದಿನದ ಹಿನ್ನೆಲೆಯಲ್ಲಿ ಮುಂಬೈ, ನಾಗ್ಪುರ ಹಾಗೂ ಬೆಲ್ಪುರದಲ್ಲಿ ಬ್ಯಾಂಕಿಗೆ ರಜೆ.
ಮೇ 5: ಭಾನುವಾರ
ಮೇ 8: ರವೀಂದ್ರನಾಥ್ ಟ್ಯಾಗೋರ್ ಜನ್ಮದಿನದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕಿಗೆ ರಜೆ
ಮೇ 10: ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಬ್ಯಾಂಕಿಗೆ ರಜೆ. ಬಸವ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬ್ಯಾಂಕಿಗೆ ರಜೆ.
ಮೇ 11: ಎರಡನೇ ಶನಿವಾರ
ಮೇ 12: ಭಾನುವಾರ
ಮೇ 19: ಭಾನುವಾರ
ಮೇ 23: ಬುದ್ಧ ಪೂರ್ಣಿಮಾದ ಹಿನ್ನೆಲೆಯಲ್ಲಿ ಬ್ಯಾಂಕ್ ಕ್ಲೋಸ್
ಮೇ 25: ನಾಲ್ಕನೇ ಶನಿವಾರ
ಮೇ 26: ಭಾನುವಾರ

Latest Videos
Follow Us:
Download App:
  • android
  • ios