ಸಮರ್ಪಕವಾಗಿ ಆದಾಯ ತೆರಿಗೆ ಮಾಹಿತಿ ನೀಡದ ಸಂಬಂಧ ಆದಾಯ ತೆರಿಗೆ ಇಲಾಖೆ ಒಂದು ಲಕ್ಷ ಐಟಿಆರ್ ನೋಟಿಸ್ ಗಳನ್ನು ಈಗಾಗಲೇ ಜಾರಿ ಮಾಡಿದೆ. ಈ ವಿಚಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ದೃಢಪಡಿಸಿದ್ದಾರೆ. 

Business Desk:ತೆರಿಗೆದಾರರು ಆದಾಯವನ್ನು ಘೋಷಿಸದ ಅಥವಾ ಕಡಿಮೆ ವರದಿ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಒಂದು ಲಕ್ಷ ನೋಟಿಸ್ ಗಳನ್ನು ಕಳುಹಿಸಿದೆ. ಈ ಎಲ್ಲ ಪ್ರಕರಣಗಳು 4-6 ವರ್ಷಗಳ ಹಿಂದೆ ಸಲ್ಲಿಕೆಯಾದ ರಿಟರ್ನ್ ಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದ್ದಾರೆ. ಈ ನೋಟಿಸ್ ಗಳನ್ನು ಕಳೆದ 14 ತಿಂಗಳ ಅವಧಿಯಲ್ಲಿ ಕಳುಹಿಸಲಾಗಿದ್ದು, ಎಲ್ಲವೂ 50ಲಕ್ಷ ರೂ. ಮೀರಿದ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಸಂಬಂಧಿಸಿದ್ದಾಗಿವೆ. ಆರು ವರ್ಷಗಳ ಹಿಂದಿನ ಅವಧಿಯ ತನಕದ ತೆರಿಗೆ ಅರ್ಜಿಗಳನ್ನು ತೆರೆದು ಪರಿಶೀಲಿಸಲು ಆದಾಯ ತೆರಿಗೆ ಕಾಯ್ದೆ ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಹೀಗಾಗಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡದ ಅಥವಾ ಫೈಲ್ ಮಾಡರೋದಕ್ಕಿಂತ ಜಾಸ್ತಿ ಆದಾಯ ಹೊಮದಿರುವ ಅಥವಾ ಕಡಿಮೆ ಆದಾಯವನ್ನು ನಮೂದಿಸಿರುವ ಅಥವಾ ಈ ತನಕ ಫೈಲ್ ಮಾಡದ ಪ್ರಕರಗಳಿಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ. ಇನ್ನು ಆದಾಯ ತೆರಿಗೆ ಇಲಾಖೆ ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಈ ನೋಟಿಸ್ ನೀಡುವಿಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದೆ.

'ಇವುಗಳನ್ನು ಯಾವುದೇ ಯೋಚನೆಯಿಲ್ಲದೆ ಕಳುಹಿಸಿಲ್ಲ ಹಾಗೂ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಮುಖ್ಯಸ್ಥರು 2024ರ ಮಾರ್ಚ್ ಅಂತ್ಯದೊಳಗೆ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದಾರೆ. ಇನ್ನು ಇವುಗಳನ್ನು ಯೋಚಿಸದೆ ಕಳುಹಿಸಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನಾನು ತಿಳಿಸಲು ಬಯಸುತ್ತೇನೆ' ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ನವದೆಹಲಿ ವಿಜ್ಞಾನ ಭವನದಲ್ಲಿ 164ನೇ ಆದಾಯ ತೆರಿಗೆ ದಿನ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದ್ದಾರೆ.

ITR Filing:ಜು. 31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ; ತೆರಿಗೆ ರೀಫಂಡ್ ಕೂಡ ಇಲ್ಲ!

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) 2023ರ ಮೇನಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ 55,000 ನೋಟಿಸ್ ಗಳ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. 

'ಇನ್ನು ಬಹುತೇಕ ಸಮಸ್ಯೆಗಳಿಗೆ ತಂತ್ರಜ್ಞಾನ ಉತ್ತರವಾಗಿದೆ. ಅಲ್ಲದೆ, ಇದು ತೆರಿಗೆ ಕಳ್ಳತನವನ್ನು ಹಿಡಿಯಲು ಮಾತ್ರ ನೆರವು ನೀಡಿಲ್ಲ ಬದಲಿಗೆ ತೆರಿಗೆದಾರರಿಗೆ ಪ್ರಾಮಾಣಿಕ, ಉದ್ದೇಶಪೂರ್ಣ ಹಾಗೂ ಸ್ನೇಹಪರ ಆದಾಯ ತೆರಿಗೆ ವ್ಯವಸ್ಥೆಯನ್ನು ತೆರಿಗೆದಾರರಿಗೆ ಒದಗಿಸಿದೆ' ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಇದು ವೇತನದಾರ ಉದ್ಯೋಗಿಗಳಿಗೆ ಹಾಗೂ ಹಿಂದೂ ಅವಿಭಜಿತ ಕುಟುಂಬಗಳಿಗೆ ಆಡಿಟ್‌ ಅಗತ್ಯವಿಲ್ಲದ ಅಕೌಂಟ್‌ಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ನೀವು ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ನಿಮಗೆ ದಂಡ ಬೀಳುವ ಜೊತೆಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕೂಡ ನೀಡುತ್ತದೆ. ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ನೀವು ಜೈಲು ಕಂಬಿಯನ್ನು ಕೂಡ ಎಣಿಸಬೇಕಾಗಬಹುದು. 

ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ

ಇನ್ನು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಗಡುವನ್ನು ಜುಲೈ 31ರ ನಂತರ ವಿಸ್ತರಿಸುವ ಯಾವುದೇ ಯೋಚನೆಯನ್ನು ಹಣಕಾಸು ಸಚಿವಾಲಯ ಮಾಡಿಲ್ಲ. ಹೀಗಾಗಿ ಆದಷ್ಟು ಬೇಗ ಐಟಿಆರ್ ಸಲ್ಲಿಕೆ ಮಾಡುವಂತೆ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತೆರಿಗೆದಾರರಲ್ಲಿ ಇತ್ತೀಚೆಗೆ ಮನವಿ ಮಾಡಿದ್ದಾರೆ. ಇನ್ನು ಐಟಿಆರ್ ಸಲ್ಲಿಕೆ ಈ ವರ್ಷ ಕಳೆದ ಬಾರಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 2022-23ನೇ ಮೌಲ್ಯಮಾಪನ ವರ್ಷಕ್ಕೆ ಕಳೆದ ವರ್ಷ ಜುಲೈ 31ರಂದು ಸುಮಾರು 5.83 ಕೋಟಿ ಐಟಿಆರ್ ಗಳು ಸಲ್ಲಿಕೆಯಾಗಿದ್ದವು.